ಮೈಸೂರು: ರಾಜ್ಯದಾದ್ಯಂತ ಮಾವಿನ ಸಗಟು ಧಾರಣೆಯು ತೀವ್ರವಾಗಿ ಕುಸಿತ ಕಂಡಿದ್ದು, ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ.

ಹವಾಮಾನ ವೈಪರೀತ್ಯದಿಂದಾಗಿ ಈ ಬಾರಿ ಮಾವಿನ ಫಸಲು ವಿಳಂಬವಾಗಿದ್ದು, ರಾಜ್ಯದಾದ್ಯಂತ ಏಕಕಾಲಕ್ಕೆ ಉತ್ಪನ್ನ ಮಾರುಕಟ್ಟೆಗೆ ಬಂದಿರುವುದೇ ಬೆಲೆ ಕುಸಿತಕ್ಕೆ ಪ್ರಮುಖ ಕಾರಣ. ಈ ಹಂಗಾಮಿನಲ್ಲಿ ಶೇ 30–40ರಷ್ಟು ಫಸಲಷ್ಟೇ ಇದ್ದರೂ ಬೆಲೆ ಕುಸಿಯುತ್ತಲೇ ಇದೆ.

ರಾಮನಗರದ ಜೊತೆಗೆ ಮೈಸೂರು ಭಾಗದಲ್ಲೂ ಏಕಕಾಲಕ್ಕೆ ಕೊಯ್ಲು ನಡೆಯುತ್ತಿದೆ. ಕೋಲಾರ–ಚಿಕ್ಕಬಳ್ಳಾಪುರದಲ್ಲಿಯೂ ಮಾವು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಹೀಗಾಗಿ ಅಲ್ಲಿನ ಉತ್ಪನ್ನ ಅಲ್ಲಿನ ಮಾರುಕಟ್ಟೆಗೆ ಸೀಮಿತಗೊಂಡಿದ್ದು, ರಫ್ತು ಸಹ ಈ ಬಾರಿ ಆಶಾದಾಯಕವಾಗಿಲ್ಲ ಎನ್ನುತ್ತಾರೆ ಬೆಳೆಗಾರರು.

‘ರಾಜ್ಯದಲ್ಲಿ ಅತಿ ಹೆಚ್ಚು ಬೆಳೆಯುವ, ತನ್ನ ಸ್ವಾದದಿಂದ ಹೆಸರಾದ ‘ಬಾದಾಮಿ’ ಮಾವಿನ ಹಣ್ಣು ಈ ಬಾರಿ ಬೆಳೆಗಾರರಿಗೆ ಕಹಿಯಾಗುತ್ತಿದೆ. ಈ ವರ್ಷ ಈ ತಳಿಯ ಹಣ್ಣಿಗೆ ಬೇಡಿಕೆ ಕುಸಿದಿದ್ದು, ಕಾಯಿಯ ಬೆಲೆ ₹100ಕ್ಕಿಂತ ಏರಿಕೆಯಾಗಿಲ್ಲ. ಕಾಯಿಯ ಫ್ಯಾಕ್ಟರಿ ದರ ಬುಧವಾರ ಟನ್ಗೆ ₹32 ಸಾವಿರ ಇದ್ದದ್ದು (ಪ್ರತಿ ಕೆ.ಜಿ.ಗೆ ₹32) ಗುರುವಾರ–ಶುಕ್ರವಾರದಂದು ₹28 ಸಾವಿರಕ್ಕೆ ಕುಸಿದಿದೆ. ಒಂದೇ ದಿನದಲ್ಲಿ ಟನ್ಗೆ ₹4 ಸಾವಿರ ಇಳಿಕೆ ಆಗಿದೆ’ ಎಂದು ರಾಮನಗರ ಜಿಲ್ಲೆಯ ಅರೇಹಳ್ಳಿಯ ಮಾವು ಬೆಳೆಗಾರ ಜೋಗಿ ಶಿವರಾಮು ತಿಳಿಸಿದರು.

ಸೇಂದೂರ, ತೋತಾಪುರಿ, ಸಿರಿ ಮೊದಲಾದ ತಳಿಯ ಮಾವಿನ ಹಣ್ಣನ್ನು ಈ ಬಾರಿ ಕೇಳುವವರೂ ಇಲ್ಲ. ‘ನೀಲಂ’ ಇನ್ನಷ್ಟೇ ಮಾರುಕಟ್ಟೆಗೆ ಬರಬೇಕಿದೆ.

ವರ್ತಕರಿಗೆ ಲಾಭ: ಸಗಟು ಧಾರಣೆ ಕುಸಿದಿದ್ದರೂ ಚಿಲ್ಲರೆ ಮಾರುಕಟ್ಟೆಯಲ್ಲಿ ಇನ್ನೂ ಹಣ್ಣಿನ ಬೆಲೆ ಹೆಚ್ಚು ಇಳಿಕೆ ಕಂಡಿಲ್ಲ. ರಸಪುರಿ, ಬಾದಾಮಿ, ಮಲಗೋವಾ, ಮಲ್ಲಿಕಾ ಸೇರಿ ಪ್ರಮುಖ ತಳಿಯ ಹಣ್ಣುಗಳೆಲ್ಲವೂ ಚಿಲ್ಲರೆ ಮಾರುಕಟ್ಟೆಯಲ್ಲಿ ದುಬಾರಿಯಾಗಿಯೇ ಇವೆ. ಹಾಪ್ಕಾಮ್ಸ್ನಲ್ಲಿ ಪ್ರತಿ ಕೆ.ಜಿ.ಗೆ (ಹಣ್ಣು) ಕೇಸರಿ ₹160, ದಶೇರಿ–₹180, ಇಮಾಮ್ ಪಸಂದ್ ₹250ರ ದರದಲ್ಲಿ ಮಾರಾಟವಾಗುತ್ತಿದೆ.

ರಸಪೂರಿ ಬೆಳೆಗಾರರಿಗೆ ‘ಲಾಟರಿ’

ಈ ಬಾರಿ ರಸಪೂರಿ ಮಾವಿನ ದರವು ‘ಬಾದಾಮಿ’ಯನ್ನೂ ಹಿಂದಿಕ್ಕಿದ್ದು ಬೆಲೆ ಕುಸಿತದ ನಡುವೆಯೂ ಬೆಳೆಗಾರರಿಗೆ ಬಂಪರ್ ಕೊಡುಗೆ ನೀಡುತ್ತಿದೆ. ಕೊಯ್ಲಿನ ಆರಂಭದಲ್ಲಿ ಸಗಟು ದರ ಪ್ರತಿ ಕೆ.ಜಿ.ಗೆ ₹180ರಿಂದ ₹200ಕ್ಕೆ ತಲುಪಿತ್ತು. ಈಗಲೂ ಕಾಯಿಗೆ ಸರಾಸರಿ ₹80ರಿಂದ ₹90 ಬೆಲೆ ಇದೆ. ಮಾರುಕಟ್ಟೆಯಲ್ಲಿ ಹಣ್ಣಿನ ದರ ₹120ರ ಸಮೀಪದಲ್ಲಿದೆ.

‘ಸಣ್ಣ ತೊಗಟೆ ಹೆಚ್ಚು ರುಚಿ ಹಾಗೂ ಹಣ್ಣಿನ ಪ್ರಮಾಣ ಹೆಚ್ಚು ಎನ್ನುವ ಕಾರಣಕ್ಕೆ ರಸಪೂರಿ ಜನರಿಗೆ ಇಷ್ಟವಾಗುತ್ತಿದೆ. ಅದರಲ್ಲೂ ಬೆಂಗಳೂರು–ಮೈಸೂರು ಭಾಗದಲ್ಲಿ ಹೆಚ್ಚು ಬೇಡಿಕೆ ಇದೆ. ರಾಜ್ಯದಲ್ಲಿ ರಸಪೂರಿ ಮಾವಿನ ಬೆಳೆಯೂ ಕಡಿಮೆ ಆಗುತ್ತಿರುವುದು ಬೆಲೆ ಹೆಚ್ಚಳಕ್ಕೆ ಕಾರಣ’ ಎನ್ನುತ್ತಾರೆ ಮೈಸೂರಿನ ಮಾವು ಬೆಳೆಗಾರ ಶಶಾಂಕ್.

ರಾಜ್ಯದಲ್ಲಿ ರಸಪೂರಿ ಮಾವು ಬೆಳೆಯುವ ಪ್ರದೇಶ ಕಡಿಮೆ ಆಗುತ್ತಿದೆ. ಹಾಗಾಗಿ, ಈ ತಳಿಯ ಹಣ್ಣಿನ ಬೆಲೆ ಹೆಚ್ಚಳವಾಗುತ್ತಿದೆ.
– ಶಶಾಂಕ್ ಮಾವು ಬೆಳೆಗಾರ, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.