ಬುಧವಾರ, ಜನವರಿ 29, 2020
30 °C

ಮಾರುತಿ ವಾಹನ ತಯಾರಿಕೆ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಒಂಬತ್ತು ತಿಂಗಳ ಬಳಿಕ ನವೆಂಬರ್‌ನಲ್ಲಿ ವಾಹನ ತಯಾರಿಕೆಯನ್ನು ಶೇ 4.33ರಷ್ಟು ಹೆಚ್ಚಿಸಿದೆ.

2019ರ ನವೆಂಬರ್‌ನಲ್ಲಿ ಕಂಪನಿಯು ಒಟ್ಟಾರೆ 1,41,834 ವಾಹನಗಳನ್ನು ತಯಾರಿಸಿದೆ. 2018ರ ನವೆಂಬರ್‌ನಲ್ಲಿ 1,35,946 ವಾಹನಗಳನ್ನು ತಯಾರಿಸಿತ್ತು.

ಅಕ್ಟೋಬರ್‌ನಲ್ಲಿ ತಯಾರಿಕೆಯನ್ನು ಶೇ 20.7ರಷ್ಟು ಮತ್ತು ಸೆಪ್ಟೆಂಬರ್‌ನಲ್ಲಿ ಶೇ 17.48ರಷ್ಟು ಕಡಿತ ಮಾಡಿತ್ತು.

ಮಧ್ಯಮ ಗಾತ್ರದ ಸೆಡಾನ್‌ ಸಿಯಾಜ್‌ ತಯಾರಿಕೆ 1,460 ರಿಂದ 1,830ಕ್ಕೆ ಏರಿಕೆಯಾಗಿದೆ. ಲಘು ವಾಣಿಜ್ಯ ವಾಹನ ಸೂಪರ್‌ ಕ್ಯಾರಿ ತಯಾರಿಕೆ 1,797 ರಿಂದ 2,750ಕ್ಕೆ ಏರಿಕೆ ಕಂಡಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು