ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುತಿ ಸುಜುಕಿ ಎಪಿಕ್ ನ್ಯೂ ಸ್ವಿಫ್ಟ್‌ನ 500 ಕಾರು ಸಾಮೂಹಿಕ ವಿತರಣೆ

Published 31 ಮೇ 2024, 16:23 IST
Last Updated 31 ಮೇ 2024, 16:23 IST
ಅಕ್ಷರ ಗಾತ್ರ

ಬೆಂಗಳೂರು: ಇತ್ತೀಚೆಗೆ ಬಿಡುಗಡೆಯಾದ ಮಾರುತಿ ಸುಜುಕಿಯ ಎಪಿಕ್ ನ್ಯೂ ಸ್ವಿಫ್ಟ್‌ನ 500 ಕಾರುಗಳು ಬೆಂಗಳೂರಿನಲ್ಲಿರುವ ಮಾರುತಿ ಸುಜುಕಿ ಅರೆನಾ ವಿತರಕರಿಂದ ಮಾರಾಟವಾಗಿವೆ. 

ಈ ಕಾರುಗಳನ್ನು ಗ್ರಾಹಕರಿಗೆ ಕಂಪನಿ ಏಕಕಾಲಕ್ಕೆ ವಿತರಿಸಿತು. ಈ ಮಾರಾಟದಲ್ಲಿ ಜೆಡ್‌ ಮಾದರಿ ವಾಹನಗಳ ಮಾರಾಟವು ಶೇ 36ರಷ್ಟಿದೆ. ಇದು ಭಾರತೀಯ ಗ್ರಾಹಕರಲ್ಲಿ ಎಪಿಕ್ ನ್ಯೂ ಸ್ವಿಫ್ಟ್‌ನ ಬೇಡಿಕೆ ಮತ್ತು ಜನಪ್ರಿಯತೆಯನ್ನು ತೋರಿಸುತ್ತದೆ ಎಂದು ಕಂಪನಿ ಹೇಳಿದೆ.

ಹೊಸ ಅವತಾರದಲ್ಲಿನ ಸ್ವಿಫ್ಟ್‌ನ ವಿನ್ಯಾಸವು ಗ್ರಾಹಕರನ್ನು ಆಕರ್ಷಿಸಲಿದ್ದು, ಉತ್ತಮ ಚಾಲನಾ ಅನುಭವ ನೀಡಲಿದೆ. ಇದರಲ್ಲಿನ ಹೊಸ ಮತ್ತು ಸುಧಾರಿತ ಜೆಡ್‌ ಸರಣಿಯ ಎಂಜಿನ್ ಪ್ರತಿ ಲೀಟರಿಗೆ 25.75 ಕಿ.ಮೀ ಮೈಲೇಜ್‌ ನೀಡಲಿದೆ. 6 ಏರ್‌ಬ್ಯಾಗ್‌ಗಳನ್ನು ಹೊಂದಿದ್ದು, ಹೆಚ್ಚು ಸುರಕ್ಷತೆ ನೀಡಲಿದೆ. ಇದರ ಎಕ್ಸ್‌ ಷೋರೂಂ ಬೆಲೆ ₹6.49 ಲಕ್ಷದಿಂದ ಪ್ರಾರಂಭವಾಗಲಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT