ಮೀಶೊ ಆಫರ್ ಸೇಲ್: ಒಂದೇ ದಿನದಲ್ಲಿ 88 ಲಕ್ಷ ಆರ್ಡರ್, ಶೇ 80ರಷ್ಟು ಏರಿಕೆ!

ನವದೆಹಲಿ: ಸಾಫ್ಟ್ಬ್ಯಾಂಕ್ ಹೂಡಿಕೆ ಹೊಂದಿರುವ ಇ ಕಾಮರ್ಸ್ ತಾಣ ಮೀಶೊ, ಹಬ್ಬದ ವಿಶೇಷ ಮಾರಾಟದ ಅವಧಿಯಲ್ಲಿ ಶೇ 80ರಷ್ಟು ಏರಿಕೆ ದಾಖಲಿಸಿದೆ.
ವಿಶೇಷ ಕೊಡುಗೆ ಮಾರಾಟದ ಮೊದಲ ದಿನವಾದ ಶನಿವಾರ ಮೀಶೊದಲ್ಲಿ 87.6 ಲಕ್ಷ ಆರ್ಡರ್ ಪಡೆದುಕೊಂಡಿದೆ. ಐದು ದಿನ ನಡೆಯುವ ಆಫರ್ ಸೇಲ್ನ ಮೊದಲ ದಿನವೇ ಅತ್ಯುತ್ತಮ ಪ್ರತಿಕ್ರಿಯೆ ಕಂಡುಬಂದಿದೆ ಎಂದು ಕಂಪನಿ ಹೇಳಿದೆ.
ಮೀಶೊ ಮೆಗಾ ಬ್ಲಾಕ್ಬಸ್ಟರ್ ಸೇಲ್ನಲ್ಲಿ ಎರಡು, ಮೂರು ಮತ್ತು ನಾಲ್ಕನೇ ಹಂತದ ನಗರಗಳಿಂದ ಈ ಬಾರಿ ಹೆಚ್ಚಿನ ಆರ್ಡರ್ ಬಂದಿದೆ. ಅಲ್ಲದೆ, ಕಳೆದ ವರ್ಷದ ಆರ್ಡರ್ಗೆ ಹೋಲಿಸಿದರೆ ಶೇ 80ರಷ್ಟು ಏರಿಕೆ ದಾಖಲಾಗಿದೆ ಎಂದು ಕಂಪನಿ ತಿಳಿಸಿದೆ.
ಇವರೇ ನೋಡಿ ದೇಶದ ಟಾಪ್ 10 ಶ್ರೀಮಂತರು
6.5 ಕೋಟಿಗೂ ಅಧಿಕ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಒದಗಿಸಲಾಗುತ್ತಿದೆ. ಫ್ಯಾಶನ್, ಗೃಹ ಬಳಕೆಯ ಉತ್ಪನ್ನ, ಎಲೆಕ್ಟ್ರಾನಿಕ್ಸ್, ಅಡುಗೆ ಮನೆಯ ಸಲಕರಣೆಗಳು ಸಹಿತ ವಿವಿಧ ಉತ್ಪನ್ನಗಳನ್ನು ಮೀಶೊ ಗ್ರಾಹಕರಿಗೆ ನೀಡುತ್ತದೆ.
ಫ್ಲಿಪ್ಕಾರ್ಟ್: ಆಫರ್ ಕೊಡುಗೆಯ ಮೊದಲ ದಿನ ಸೆಕೆಂಡ್ಗೆ 16 ಲಕ್ಷ ಬಳಕೆದಾರರ ಭೇಟಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.