ಶನಿವಾರ, ಫೆಬ್ರವರಿ 4, 2023
17 °C

‘ಪೋರ್ಟಲ್‌’, ಸ್ಮಾರ್ಟ್‌ ವಾಚ್‌ ಯೋಜನೆಗಳನ್ನು ಕೈಬಿಟ್ಟ ಫೇಸ್‌ಬುಕ್‌

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಫೇಸ್‌ಬುಕ್‌ನ ಮಾತೃಸಂಸ್ಥೆ ‘ಮೆಟಾ’ ಸ್ಮಾರ್ಟ್ ಡಿಸ್‌ಪ್ಲೇ ಪೋರ್ಟಲ್ ವ್ಯಾಪಾರವನ್ನು ನಿಲ್ಲಿಸುತ್ತಿದೆ. ಜತೆಗೆ ಸ್ಮಾರ್ಟ್ ವಾಚ್ ಯೋಜನೆಯನ್ನೂ ಕೈಬಿಡುತ್ತಿರುವುದಾಗಿ ವರದಿಯಾಗಿದೆ.

‘ಪೋರ್ಟಲ್’ ಸಾಧನಗಳನ್ನು ಉತ್ಪಾದಿಸುವುದನ್ನು ನಿಲ್ಲಿಸಲು ಮೆಟಾ ಜೂನ್‌ನಲ್ಲೇ ನಿರ್ಧರಿಸಿತ್ತು ಎನ್ನಲಾಗಿದೆ. ಆದರೆ ಈಗ ಅವುಗಳನ್ನು ಮಾರಾಟ ಮಾಡುವುದನ್ನೂ ನಿಲ್ಲಿಸುತ್ತಿದೆ ಎಂದು ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸುದ್ದಿ ವೆಬ್‌ಸೈಟ್‌ ‘ದಿ ವರ್ಜ್’ ವರದಿ ಮಾಡಿದೆ.

ಇನ್ನು, ಎರಡು ಸ್ಮಾರ್ಟ್ ವಾಚ್‌ ಯೋಜನೆಗಳು ಆರಂಭಿಕ ಮತ್ತು ಮಧ್ಯಮ ಹಂತದಲ್ಲಿದ್ದು, ಅವುಗಳನ್ನೂ ನಿಲ್ಲಿಸಲಾಗುತ್ತದೆ ಎಂದು ಸುದ್ದಿ ಸಂಸ್ಥೆ ‘ರಾಯಿಟರ್ಸ್‌’ ವರದಿ ಮಾಡಿದೆ.

ಏನಿದು ಫೇಸ್‌ಬುಕ್‌ ಪೋರ್ಟಲ್‌?

ಅಲೆಕ್ಸಾ ಸ್ಮಾರ್ಟ್ ಅಸಿಸ್ಟೆಂಟ್‌ ಅನ್ನು ಒಳಗೊಂಡ ವೀಡಿಯೊ ಕಾಲಿಂಗ್‌ ಸಾಧನವೇ ಈ ಫೇಸ್‌ಬುಕ್ ‘ಪೋರ್ಟಲ್’ ಫೇಸ್‌ಬುಕ್ , ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್ ಇದರಲ್ಲಿದೆ. 10 ಮತ್ತು 14 ಇಂಚಿನ ಡಿಸ್‌ಪ್ಲೇಯುಳ್ಳ ‘ಪೋರ್ಟಲ್‌’ಗಳನ್ನು ಕಳೆದ ವರ್ಷ ಮೆಟಾ ಬಿಡುಗಡೆ ಮಾಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು