ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಪಿವಿ ವಿಭಾಗಕ್ಕೆ ಎಂಜಿ ಮೋಟರ್ಸ್: ಜುಲೈನಲ್ಲಿ ಹೆಕ್ಟರ್‌ ಪ್ಲಸ್‌ ಬಿಡುಗಡೆ

Last Updated 15 ಜೂನ್ 2020, 13:58 IST
ಅಕ್ಷರ ಗಾತ್ರ

ನವದೆಹಲಿ: ಎಂಜಿ ಮೋಟರ್‌ ಇಂಡಿಯಾ ಕಂಪನಿಯು ಜುಲೈನಲ್ಲಿಹೆಕ್ಟರ್‌ ಪ್ಲಸ್‌ ಬಿಡುಗಡೆ ಮಾಡುವ ಮೂಲಕಮಲ್ಟಿ ಪರ್ಪಸ್‌ ವೆಹಿಕಲ್‌ (ಎಂಪಿವಿ) ವಿಭಾಗಪ್ರವೇಶಿಸಲು ಸಿದ್ಧತೆ ನಡೆಸಿದೆ.

‘ಇದಕ್ಕಾಗಿ ಹಲೋಲ್‌ ಘಟಕದಲ್ಲಿ ತಯಾರಿಕೆ ಹೆಚ್ಚಿಸಲು 200 ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಮುಂದಾಗಿದೆ’ ಎಂದು ಕಂಪನಿಯ ಅಧ್ಯಕ್ಷ ರಾಜೀವ್‌ ಛಬ್ಬಾ ತಿಳಿಸಿದ್ದಾರೆ.

‘ಈ ವಾರವೇ ಹೆಕ್ಟರ್‌ ಪ್ಲಸ್‌ ತಯಾರಿಕೆ ಆರಂಭಿಸಲಿದ್ದು, ಜುಲೈನ ಎರಡನೇ ವಾರದಲ್ಲಿ ಬಿಡುಗಡೆ ಮಾಡಲಾಗುವುದು. ಇದು ಎಸ್‌ಯುವಿ ಹೆಕ್ಟರ್‌ನ ಮುಂದುವರಿದ ಮಾದರಿಯಾಗಿರಲಿದೆ’ ಎಂದು ವಿವರಿಸಿದ್ದಾರೆ.

‘ಎಸ್‌ಯುವಿ ವಿಭಾಗದಲ್ಲಿ ಹೆಕ್ಟರ್‌ ಪೈಪೋಟಿ ನೀಡಲಿದ್ದು, ಎಂಪಿವಿ ವಿಭಾಗದಲ್ಲಿ ಹೆಕ್ಟರ್‌ ಪ್ಲಸ್‌ ಪೈಪೋಟಿ ನೀಡಲಿದೆ.

ಬೆಲೆಯಲ್ಲಿ ಹೆಕ್ಟರ್‌ಗಿಂತಲೂ ₹ 1 ಲಕ್ಷ ಹೆಚ್ಚಿರಲಿದೆ. ಸದ್ಯ ಹೆಕ್ಟರ್‌ ಬೆಲೆ ₹ 12.74 ಲಕ್ಷದಿಂದ ₹ 17.73 ಲಕ್ಷದ ಒಳಗೆ ಇದೆ.

‘ಲಾಕ್‌ಡೌನ್‌ ವಿನಾಯಿತಿ ನೀಡಿದ ಬಳಿಕ 3 ಸಾವಿರ ವಾಹನಗಳನ್ನು ತಯಾರಿಸುತ್ತಿದ್ದೇವೆ. ಈ ತಿಂಗಳಿನಲ್ಲಿ ಇದುವರೆಗೆ 2,500 ವಾಹನಗಳು ತಯಾರಾಗಿವೆ. ಶೇ 75–80ರಷ್ಟು ಚೇತರಿಕೆ ಕಂಡಿದೆ. ಮುಂದಿನ ಎರಡು ಅಥವಾ ಮೂರು ತಿಂಗಳಿನಲ್ಲಿ ಶೇ 100ರಷ್ಟು ತಯಾರಿಕೆ ಆರಂಭಿಸುವ ಗುರಿ ಹೊಂದಿದ್ದೇವೆ.

‘ಸದ್ಯ 13 ಸಾವಿರ ಬುಕಿಂಗ್‌ ಬಾಕಿ ಇದ್ದು, ಶೇ 25ರಷ್ಟು ಬುಕಿಂಗ್‌ ರದ್ದಾಗಿದೆ. ದಿನಕ್ಕೆ 50 ಹೊಸ ಬುಕಿಂಗ್‌ ಆಗುತ್ತಿದೆ. ಸ್ಥಳೀಯವಾಗಿ ಬಿಡಿಭಾಗಗಳ ಕೊರತೆಯು ತಯಾರಿಕೆ ಮೇಲೆ ಪರಿಣಾಮ ಬೀರುತ್ತಿದೆ. ಎರಡು ಮತ್ತು ಮೂರನೇ ಶ್ರೇಣಿಯ ಎಂಎಸ್‌ಎಂಇಗಳ ಸಾಮರ್ಥ್ಯ ವೃದ್ಧಿಗೆ ಬೆಂಬಲ ನೀಡಲಾಗುತ್ತಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT