ಗುರುವಾರ , ಆಗಸ್ಟ್ 6, 2020
28 °C
ಆಟೊಮೊಬೈಲ್‌ ವಲಯ

ಜನರ ಓಲಾ, ಉಬರ್‌ ಪ್ರಯಾಣವೇ ವಾಹನ ಮಾರಾಟ ಕುಸಿಯಲು ಕಾರಣ: ನಿರ್ಮಲಾ ಸೀತಾರಾಮನ್‌

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಚೆನ್ನೈ: ಹೊಸ ಪೀಳಿಗೆಯವರು ಸಂಚಾರಕ್ಕೆ ಉಬರ್‌ ಮತ್ತು ಓಲಾ ಕ್ಯಾಬ್‌ಗಳನ್ನು ನೆಚ್ಚಿಕೊಳ್ಳುತ್ತಿರುವುದರಿಂದ ಹೊಸ ಕಾರುಗಳ ಖರೀದಿಯಿಂದ ಹಿಂದೆ ಸರಿದಿದ್ದಾರೆ. ಆಟೊಮೊಬೈಲ್‌ ವಲಯದಲ್ಲಿ ಮಾರಾಟ ಕುಸಿತಕ್ಕೆ ಇದೂ ಸಹ ಕಾರಣ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. 

‘ಆಟೊಮೊಬೈಲ್‌ ವಲಯದ ಮೇಲೆ ಹಲವು ಸಂಗತಿಗಳು ಪರಿಣಾಮ ಬೀರಿವೆ. ಭಾರತ್‌ ಸ್ಟೇಜ್‌ 6(ಬಿಎಸ್‌6) ಪರಿಮಾಣ ವಾಹನಗಳಿಗೆ ಕಾದಿರುವುದು, ನೋಂದಣಿ ಶುಲ್ಕ, ಇಎಂಐ ಕಟ್ಟಿ ವಾಹನ ಕೊಳ್ಳುವುದಕ್ಕಿಂತ ಓಲಾ ಅಥವಾ ಉಬರ್‌ ಅಥವಾ ಮೆಟ್ರೊ ಬಳಕೆಗೆ ಮುಂದಾಗಿರುವ ಹೊಸ ಪೀಳಿಗೆಯವರ ಯೋಚನೆ ಸಹ ಪರಿಣಾಮ ಬೀರಿರುವ ಸಂಗತಿಗಳು‘ ಎಂದಿದ್ದಾರೆ.  

ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳ ಮಾರಾಟದಲ್ಲಿ ಭಾರೀ ಕುಸಿತ ಕಂಡಿದೆ. ದೇಶದ ಟ್ರಕ್‌ ತಯಾರಿಕಾ ಸಂಸ್ಥೆ ಅಶೋಕ ಲೇಲ್ಯಾಂಡ್‌ ವಾಹನಗಳ ಮಾರಾಟದಲ್ಲಿ ಶೇ 70ರಷ್ಟು ಕಡಿಮೆಯಾಗಿದೆ. ’ಲಕ್ಷಾಂತರ ಉದ್ಯೋಗ ನಷ್ಟಕ್ಕೂ ಕಾರಣವಾಗಿರುವ ಆಟೋಮೊಬೈಲ್‌ ವಲಯದಲ್ಲಿನ ಪರಿಸ್ಥಿತಿ ಸುಧಾರಿಸಲು ಕೇಂದ್ರ ಸರ್ಕಾರ ಕಾರ್ಯನಿರತವಾಗಿದೆ‘ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. 

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎರಡನೇ ಅವಧಿಯ 100 ದಿನಗಳಲ್ಲಿ ಮಾಡಿರುವ ಸಾಧನೆಗಳನ್ನು ಹಂಚಿಕೊಳ್ಳುವ ‘ಜನ್ ಕನೆಕ್ಟ್‌’ ಬಿಡುಗಡೆ ಮಾಡಿ ನಿರ್ಮಲಾ ಸೀತಾರಾಮನ್‌ ಚೆನ್ನೈನಲ್ಲಿ ಮಾತನಾಡಿದರು. 

ನಿರ್ಮಲಾ ಸೀತಾರಾಮನ್‌ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ ಮಾಡಲಾಗಿದೆ. ಬಸ್‌, ಟ್ರಕ್‌ ಮಾರಾಟ ಕುಸಿತಕ್ಕೂ ಇದೇ ಕಾರಣವೇ ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿ ಪ್ರಶ್ನಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು