ಮಂಗಳವಾರ, ಫೆಬ್ರವರಿ 25, 2020
19 °C
ರಿಸರ್ವ್‌ ಬ್ಯಾಂಕ್‌ ಸಲಹೆ ಪರಿಗಣಿಸಲಿರುವ ಹಣಕಾಸು ಸಚಿವಾಲಯ

ಸಣ್ಣ ಉಳಿತಾಯ ಬಡ್ಡಿದರ ಕಡಿತ?

ಅನ್ನಪೂರ್ಣಾ ಸಿಂಗ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರ ಸರ್ಕಾರವು ಶೀಘ್ರದಲ್ಲೇ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರದಲ್ಲಿ ಇಳಿಕೆ ಮಾಡುವ ಸಾಧ್ಯತೆ ಇದೆ. ಸಣ್ಣ ಉಳಿತಾಯದಿಂದ ಬರುವ ಬಡ್ಡಿ ದರವನ್ನೇ ನಂಬಿಕೊಂಡಿರುವ ಹಿರಿಯ ನಾಗರಿಕರು ಇದರಿಂದ ಹೆಚ್ಚು ಸಮಸ್ಯೆಗೆ ಒಳಗಾಗಲಿದ್ದಾರೆ.

ಬ್ಯಾಂಕ್‌ಗಳು ರೆಪೊ ದರ ಕಡಿತದ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಲು ಈ ಕ್ರಮ ಕೈಗೊಳ್ಳುವಂತೆ ಹಣಕಾಸು ಸಚಿವಾಲಯಕ್ಕೆ ಆರ್‌ಬಿಐ ಸಲಹೆ ನೀಡಿದೆ. ಇದನ್ನು ಸಚಿವಾಲಯ ಪರಿಗಣಿಸುವ ಸಾಧ್ಯತೆ ಇದೆ.

ಸಣ್ಣ ಉಳಿತಾಯ ಯೋಜನೆಗಳಿಗೆ ಗರಿಷ್ಠ ಬಡ್ಡಿದರ ಇದ್ದರೆ ಬ್ಯಾಂಕ್‌ಗಳಿಗೆ ಠೇವಣಿಗಳ ಮೇಲಿನ ಬಡ್ಡಿದರದಲ್ಲಿ ಕಡಿತ ಮಾಡಲು ಸಾಧ್ಯವಾಗುವುದಿಲ್ಲ. ಅದರಿಂದಾಗಿ ಸಾಲದ ಮೇಲಿನ ಬಡ್ಡಿದರದಲ್ಲಿಯೂ ಇಳಿಕೆ ಮಾಡಲು ಆಗುವುದಿಲ್ಲ. ಈ ಯೋಜನೆಗಳಿಂದ ಸರ್ಕಾರ ಹೆಚ್ಚಿನ ಬಂಡವಾಳವನ್ನು ಸಂಗ್ರಹಿಸುತ್ತಿದೆ. ಹೀಗಾಗಿ ಬಡ್ಡಿದರವನ್ನು ಗರಿಷ್ಠ ಮಟ್ಟದಲ್ಲಿಯೇ ಇಟ್ಟು ಇನ್ನೂ ಹೆಚ್ಚಿನ ಬಂಡವಾಳ ಆಕರ್ಷಿಸುವ ಯೋಜನೆ ಸರ್ಕಾರದ್ದು. ಹೀಗಾಗಿ ಜುಲೈ ನಂತರ ಬಡ್ಡಿದರಗಳಲ್ಲಿ ಪರಿಷ್ಕರಣೆ ಮಾಡಿಲ್ಲ.

ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಬಡ್ಡಿದರಗಳಲ್ಲಿ ಇಳಿಕೆ ಮಾಡಬೇಕು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಅವರು ಹಣಕಾಸು ನೀತಿ ಪರಾಮರ್ಶೆಯ ಸಂದರ್ಭದಲ್ಲಿ ಹೇಳಿದ್ದಾರೆ. 

ಬ್ಯಾಂಕ್‌ ಠೇವಣಿಗಳ ಬಡ್ಡಿದರವು ಸಣ್ಣ ಉಳಿತಾಯ ಯೋಜನೆಗಳಿಗಿಂತಲೂ ಕಡಿಮೆ ಇದೆ. ಉದಾಹರಣೆಗೆ 2 ರಿಂದ 5 ವರ್ಷಗಳ ಅವಧಿ ಠೇವಣಿಗೆ ಎಸ್‌ಬಿಐ ಶೇ 6.25ರಷ್ಟು ಬಡ್ಡಿದರ ನೀಡುತ್ತಿದೆ. ಹೀಗಾಗಿ ಸಣ್ಣ ಉಳಿತಾಯಗಳಿಗೆ ಗರಿಷ್ಠ ಬಡ್ಡಿದರ ಇದ್ದರೆ ಬ್ಯಾಂಕ್‌ಗಳಿಗೆ ಠೇವಣಿ ಸಂಗ್ರಹ ಹೆಚ್ಚಿಸಲು ಕಷ್ಟವಾಗಲಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು