ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದರಿ ಬಾಡಿಗೆ ಕಾಯ್ದೆ ಪೂರ್ವಾನ್ವಯ ಆಗದು: ಕೇಂದ್ರ

Last Updated 22 ಜೂನ್ 2021, 20:16 IST
ಅಕ್ಷರ ಗಾತ್ರ

ನವದೆಹಲಿ: ಮಾದರಿ ಬಾಡಿಗೆ ಕಾಯ್ದೆಯು ಪೂರ್ವಾನ್ವಯವಾಗಿ ಜಾರಿಯಾಗುವುದಿಲ್ಲ ಎಂದು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯವು ಹೇಳಿದೆ.

ಮುಂಬೈ ಮತ್ತು ಮಹಾರಾಷ್ಟ್ರದಲ್ಲಿ ಈಗ ಪಾಗ್ಡಿ ಬಾಡಿಗೆ ನಿಯಮಗಳು ಜಾರಿಯಲ್ಲಿವೆ. ಈ ನಿಯಮಗಳ ಅನ್ವಯ ಜಾರಿಯಲ್ಲಿರುವ ಒಪ್ಪಂದಗಳಿಗೆ ಮಾದರಿ ಬಾಡಿಗೆ ಕಾಯ್ದೆಯು ಅನ್ವಯವಾಗುತ್ತದೆಯೇ ಎಂದು ಮುಂಬೈನ ಬಿಜೆಪಿ ಶಾಸಕರ ನಿಯೋಗವೇ ಸಚಿವಾಲಯದ ಸ್ಪಷ್ಟನೆ ಕೇಳಿತ್ತು. ಅದಕ್ಕೆ ಪ್ರತಿಕ್ರಿಯೆಯಾಗಿ ಸಚಿವಾಲಯವು ಈ ಸ್ಪಷ್ಟನೆ ನೀಡಿದೆ.

ದೇಶದಾದ್ಯಂತ ಬಾಡಿಗೆ ನಿಯಮಗಳಲ್ಲಿ ಸುಧಾರಣೆ ತರುವ ಉದ್ದೇಶದಿಂದ ಮಾದರಿ ಬಾಡಿಗೆ ಕಾಯ್ದೆಯನ್ನು ಜಾರಿಗೆ ತರಲು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯವು ಸಿದ್ಧತೆ ನಡೆಸಿದೆ. ದೊಡ್ಡ ಉದ್ಯಮ ಸಂಸ್ಥೆಗಳು ಬಾಡಿಗೆ ಮನೆ ವಲಯದಲ್ಲಿ ಹೂಡಿಕೆ ಮಾಡಲು ನೂತನ ಕಾಯ್ದೆಯು ಅವಕಾಶ ಮಾಡಿಕೊಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT