ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂಗಳ ಜಿಎಸ್‌ಟಿ ರಿಟರ್ನ್ಸ್‌ ಸಲ್ಲಿಕೆ: ಜೂನ್‌ 26ರವರೆಗೆ ಅವಕಾಶ

Last Updated 31 ಮೇ 2021, 16:36 IST
ಅಕ್ಷರ ಗಾತ್ರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯ (ಜಿಎಸ್‌ಟಿ) ಅಡಿಯಲ್ಲಿ, ಮೇ ತಿಂಗಳ ಮಾರಾಟಕ್ಕೆ ಸಂಬಂಧಿಸಿದ ವಿವರಗಳಿರುವ ಜಿಎಸ್‌ಟಿಆರ್‌–1ಸಲ್ಲಿಸಲು ಗಡುವನ್ನು ಜೂನ್‌ 26ರವರೆಗೆ ವಿಸ್ತರಣೆ ಮಾಡಲಾಗಿದೆ.

ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿಯು (ಸಿಬಿಐಸಿ) ಜಿಎಸ್‌ಟಿ ಮಂಡಳಿಯು ನೀಡಿರುವ ವಿವಿಧ ವಿನಾಯಿತಿಗಳ ಕುರಿತು ಸರಣಿ ಟ್ವೀಟ್‌ ಮಾಡಿದೆ.

ವಹಿವಾಟು ನಡೆಸುವವರು ನಿರ್ದಿಷ್ಟ ತಿಂಗಳಿನಲ್ಲಿ ಪೂರೈಕೆ ಮಾಡಿರುವುದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಮುಂದಿನ ತಿಂಗಳಿನ 11ನೇ ತಾರೀಕಿನ ಒಳಗಾಗಿ ಜಿಎಸ್‌ಟಿಆರ್‌–1ರಲ್ಲಿ ತುಂಬಬೇಕು. ಈಗ ಇದಕ್ಕೆ 15 ದಿನಗಳ ಹೆಚ್ಚುವರಿ ಕಾಲಾವಕಾಶ ದೊರೆತಂತಾಗಿದೆ. ಪಾವತಿಗೆ ಸಂಬಂಧಿಸಿದ ಜಿಎಸ್‌ಟಿಆರ್‌–3ಬಿಯನ್ನು ಮುಂದಿನ ತಿಂಗಳು 20ರಿಂದ 24ನೇ ದಿನದೊಳಗೆ ಸಲ್ಲಿಸಬೇಕು.

2020–21ನೇ ಹಣಕಾಸು ವರ್ಷಕ್ಕೆ ವಾರ್ಷಿಕ ರಿಟರ್ನ್ಸ್‌ ಸಲ್ಲಿಕೆಗೆ ಇದ್ದ ಗಡುವನ್ನು ಜುಲೈ 31ರವರೆಗೂ ವಿಸ್ತರಣೆ ಮಾಡಲಾಗಿದೆ.

ಕೋವಿಡ್‌–19 ಸಾಂಕ್ರಾಮಿಕದಿಂದ ಎದುರಾಗಿರುವ ಸಮಸ್ಯೆಗಳನ್ನು ಪರಿಗಣಿಸಿ, ರಿಟರ್ನ್ಸ್‌ ಸಲ್ಲಿಕೆಗೆ ನೀಡಿದ್ದ ಗಡುವನ್ನು ವಿಸ್ತರಿಸಲು ಮೇ 28ರಂದು ನಡೆದಿದ್ದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT