ಮುಂಬೈ: ಸಂಪತ್ತಿನಲ್ಲಿ ಶೇ 6ರಷ್ಟು ಕುಸಿತದ ಹೊರತಾಗಿಯೂ, ರಿಲಯನ್ಸ್ ಇಂಡಸ್ಟ್ರೀಸ್ನ ಮುಖೇಶ್ ಅಂಬಾನಿ ತಮ್ಮ ಪ್ರತಿಸ್ಪರ್ಧಿ ಗೌತಮ್ ಅದಾನಿಯನ್ನು ಹಿಂದಿಕ್ಕಿ 2025ರ ಅತ್ಯಂತ ಶ್ರೀಮಂತ ಭಾರತೀಯ ಎಂಬ ಖ್ಯಾತಿಯನ್ನು ಮರಳಿ ಪಡೆದಿದ್ದಾರೆ ಎಂದು ಬುಧವಾರ ಪ್ರಕಟವಾದ ದೇಶದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ತಿಳಿಸಲಾಗಿದೆ.

68 ವರ್ಷದ ಅಂಬಾನಿಯವರ ಸಂಪತ್ತಿನ ಮೌಲ್ಯ ₹9.55 ಲಕ್ಷ ಕೋಟಿಗಳಾಗಿದ್ದು, ಅದಾನಿಯವರ ಸಂಪತ್ತಿನ ಮೌಲ್ಯ ₹ 8.14 ಲಕ್ಷ ಕೋಟಿ ಆಗಿದೆ ಎಂದು M3M ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿ 2025ರಲ್ಲಿ ಉಲ್ಲೇಖಿಸಲಾಗಿದೆ.

ಹಿಂಡೆನ್ಬರ್ಗ್ನ ವರದಿ ಬಳಿಕ ಉಂಟಾದ ನಷ್ಟದ ಬಳಿಕ ಅದಾನಿ ಸಮೂಹದ ಷೇರುಗಳು ಭಾತಿ ಪ್ರಮಾಣದಲ್ಲಿ ಚೇತರಿಸಿಕೊಂಡು ಅದಾನಿ ಸಂಪತ್ತಿನ ಮೌಲ್ಯ

₹11.6 ಲಕ್ಷ ಕೋಟಿಗೆ ತಲುಪಿತ್ತು.

ಹೀಗಾಗಿ, ಕಳೆದ ವರ್ಷ ಅವರು(ಅದಾನಿ) ಅಂಬಾನಿಯನ್ನು ಹಿಂದಿಕ್ಕಿ ಅತ್ಯಂತ ಶ್ರೀಮಂತ ಭಾರತೀಯರಾಗಿದ್ದರು.

HCLನ ರೋಶ್ನಿ ನಾಡರ್ ಮಲ್ಹೋತ್ರಾ ಅವರು ₹2.84 ಲಕ್ಷ ಕೋಟಿ ರೂಪಾಯಿ ಸಂಪತ್ತಿನೊಂದಿಗೆ ಮೂರನೇ ಸ್ಥಾನ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.