ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿಯವರು ಇಂದು ಉದ್ಯಮಿ ವಿರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಜತೆ ನಿಶ್ಚಿತಾರ್ಥ ಮಾಡಿಕೊಂಡರು.
ರಾಜಸ್ಥಾನದ ನಥ್‌ದ್ವಾರದ ಶ್ರೀನಾಥ್‌ಜಿ ದೇಗುಲದಲ್ಲಿ ಸಾಂಪ್ರದಾಯಿಕ ‘ರೋಕಾ‘ ಕಾರ್ಯಕ್ರಮ ನಡೆಯಿತು.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಕಾರ್ಪೊರೇಟ್ ವ್ಯವಹಾರಗಳ ನಿರ್ದೇಶಕ ಪರಿಮಾಲ್ ನತ್ವಾನಿ ಅವರು ಟ್ವಿಟರ್‌ನಲ್ಲಿ ನವ ಜೋಡಿಗಳಿಗೆ ಶುಭ ಹಾರೈಸಿದ್ದಾರೆ.
Heartiest congratulations to dearest Anant and Radhika for their Roka ceremony at the Shrinathji temple in Nathdwara. May Lord Shrinath ji’s blessings be with you always. #AnantAmbanipic.twitter.com/BmgKDFsPYh
ಇದೇ ವರ್ಷ ಜೂನ್‌ನಲ್ಲಿ ಮುಂಬೈನಲ್ಲಿರುವ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅವರು, ರಾಧಿಕಾ ಅವರಿಗಾಗಿ ‘ಅರಾಂಜೇತ್ರಂ‘ ಎನ್ನುವ ಸಾಂಪ್ರದಾಯಿಕ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಮುಕೇಶ್ ಅಂಬಾನಿಯವರ ಕಿರಿಯ ಪುತ್ರನಾಗಿರುವ ಅನಂತ್, ಅಂಬಾನಿ ಒಡೆತನದ ಎನರ್ಜಿ ಉದ್ಯಮವನ್ನು ಮುನ್ನಡೆಸಲಿದ್ದಾರೆ. ರಾಧಿಕಾ ಮರ್ಚೆಂಟ್ ಅವರು ಶ್ರೀ ನಿಭಾ ಆರ್ಟ್ಸ್‌ನ ಗುರುಭವನ ಥಾಕರ್ ಅವರ ಅನುಯಾಯಿ.
ಹೊಸ ಜೋಡಿಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳು ಹರಿದು ಬರುತ್ತಿವೆ.