ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದ ಅಗ್ರ 10 ಸಿರಿವಂತರ ಪಟ್ಟಿಗೆ ಸೇರಿದ ಮುಕೇಶ್‌ ಅಂಬಾನಿ

Last Updated 23 ಜೂನ್ 2020, 14:28 IST
ಅಕ್ಷರ ಗಾತ್ರ

ಬೆಂಗಳೂರು: ರಿಲಯನ್ಸ್‌ ಇಂಡಸ್ಟ್ರೀಸ್‌ನ (ಆರ್‌ಐಎಲ್‌) ಅಧ್ಯಕ್ಷ ಮುಕೇಶ್‌ ಅಂಬಾನಿ (63) ಅವರು, ವಿಶ್ವದ ಮುಂಚೂಣಿ 10 ಸಿರಿವಂತರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಬ್ಲೂಮ್‌ಬರ್ಗ್‌ ಕೋಟ್ಯಧಿಪತಿಗಳ ಸೂಚ್ಯಂಕದ ಪ್ರಕಾರ, ಮುಕೇಶ್ ಅವರು ₹ 4,83,750‬ ಕೋಟಿ ಮೊತ್ತದ ಸಂಪತ್ತಿನ ಒಡೆಯರಾಗಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ವಿಶ್ವದ ಮೊದಲ 10 ಮಂದಿ ಸಿರಿವಂತರ ಸಾಲಿಗೆ ಸೇರ್ಪಡೆಯಾಗಿರುವ ಏಷ್ಯಾದ ಏಕೈಕ ಉದ್ಯಮಿ ಇವರಾಗಿದ್ದಾರೆ.

ಒರಾಕಲ್‌ ಕಾರ್ಪೊರೇಷನ್ನಿನ ಲ್ಯಾರಿ ಎಲಿಸನ್‌ ಮತ್ತು ಫ್ರಾನ್ಸ್‌ನ ಸಿರಿವಂತ ಮಹಿಳೆ ಫ್ರೆನ್ಸ್‌ವಾಸ್‌ ಬೆಟೆನ್‌ಕೋರ್ಟ್‌ ಮೆಯೆರ್ಸ್‌ ಅವರನ್ನು ಹಿಂದಿಕ್ಕಿ 9ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.

ಕಂಪನಿಯ ಡಿಜಿಟಲ್‌ ಘಟಕ ಜಿಯೊ ಪ್ಲಾಟ್‌ಫಾರ್ಮ್ಸ್‌ನಲ್ಲಿ ಇತ್ತೀಚೆಗೆ ನಡೆದ ಬಂಡವಾಳ ಹೂಡಿಕೆಯ ಫಲವಾಗಿ ರಿಲಯನ್ಸ್‌ನಲ್ಲಿ ಶೇ 42ರಷ್ಟು ಪಾಲು ಬಂಡವಾಳ ಹೊಂದಿರುವ ಮುಕೇಶ್‌ ಅವರ ಸಂಪತ್ತು ಏರಿಕೆಯಾಗಿದೆ. ಮಾರ್ಚ್‌ನಲ್ಲಿನ ಕಂಪನಿಯ ಷೇರು ಬೆಲೆಯು ಸದ್ಯಕ್ಕೆ ದುಪ್ಪಟ್ಟು ಹೆಚ್ಚಳಗೊಂಡಿದೆ. ಇನ್ನೊಂದೆಡೆ ಕೋವಿಡ್‌ ಪಿಡುಗಿನಿಂದಾಗಿ ವಿಶ್ವದ ಸಿರಿವಂತರ ಪಟ್ಟಿಯಲ್ಲಿರುವ ಅನೇಕರ ಸಂಪತ್ತು ಕರಗಿದೆ.

‘ಲಾಕ್‌ಡೌನ್‌ ಸಂದರ್ಭದಲ್ಲಿ ದೇಶದ ಆರ್ಥಿಕತೆ ಕುಸಿತದತ್ತ ಸಾಗಿದ್ದರೆ, ಮುಕೇಶ್‌ ಒಡೆತನದ ಕಂಪನಿಯು ಅದರಲ್ಲೂ ವಿಶೇಷವಾಗಿ ದೂರಸಂಪರ್ಕದ ದೈತ್ಯ ಕಂಪನಿ ಜಿಯೊದ ಹಣಕಾಸು ಪರಿಸ್ಥಿತಿಯು ಸಮೃದ್ಧವಾಗಿದೆ. ಹೀಗಾಗಿ ಮುಕೇಶ್‌ ಅವರ ವೈಯಕ್ತಿಕ ಸಂಪತ್ತು ಗಮನಾರ್ಹವಾಗಿ ಹೆಚ್ಚಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT