ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈಲ ದರ ಮತ್ತೆ ಏರಿಕೆ: ಮುಂಬೈನಲ್ಲಿ ₹100ರ ಗಡಿ ದಾಟಿದ ಪೆಟ್ರೋಲ್‌ ಬೆಲೆ

Last Updated 29 ಮೇ 2021, 5:55 IST
ಅಕ್ಷರ ಗಾತ್ರ

ಮುಂಬೈ: ಈ ತಿಂಗಳಲ್ಲಿ 15ನೇ ಬಾರಿಗೆ ತೈಲ ಬೆಲೆ ಏರಿಕೆಯಾಗಿದ್ದು, ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ ₹100 ಗಡಿಯನ್ನು ದಾಟಿದೆ ಮತ್ತು ಡೀಸೆಲ್‌ ದರ ಲೀಟರ್‌ಗೆ ₹92.17ಕ್ಕೆ ಏರಿಕೆಯಾಗಿದೆ.

ದೇಶದ ಮಹಾನಗರಗಳಲ್ಲಿ ಪೆಟ್ರೋಲ್‌ ದರವು ಲೀಟರ್‌ಗೆ 26 ಪೈಸೆ ಮತ್ತು ಡೀಸೆಲ್‌ ದರವು ಲೀಟರ್‌ಗೆ 30 ಪೈಸೆ ಹೆಚ್ಚಾಗಿದೆ ಎಂದು ಭಾರತೀಯ ತೈಲ ನಿಗಮ ತಿಳಿಸಿದೆ.

ದೆಹಲಿಯಲ್ಲಿ ಪೆಟ್ರೋಲ್ ಬೆಲೆಯು ಲೀಟರ್‌ಗೆ ₹93.94 ಆಗಿದೆ. ಡೀಸೆಲ್ ದರವು ಲೀಟರ್‌ಗೆ ₹91.87 ಇದೆ.

ಮಧ್ಯಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರ ರಾಜ್ಯಗಳ ಹಲವು ನಗರಗಳಲ್ಲಿ ಪೆಟ್ರೋಲ್‌ ದರವು ಈಗಾಗಲೇ ₹ 100ರ ಗಡಿ ದಾಟಿ ಮಾರಾಟವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT