ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 25 ಸಾವಿರ ಟನ್‌ ಈರುಳ್ಳಿ ಸಂಗ್ರಹ: ನಾಫೆಡ್

Last Updated 14 ಜೂನ್ 2020, 12:54 IST
ಅಕ್ಷರ ಗಾತ್ರ

ನವದಹೆಲಿ: ಈ ಬಾರಿ ದಾಖಲೆಯ 1 ಲಕ್ಷ ಟನ್‌ ಈರುಳ್ಳಿ ಹೆಚ್ಚುವರಿ ದಾಸ್ತಾನು ಮಾಡುವ ಗುರಿ ನಿಗದಿಪಡಿಸಲಾಗಿದ್ದು, ಇದುವರೆಗೆ ₹ 25 ಸಾವಿರ ಟನ್‌ ಖರೀದಿಸಲಾಗಿದೆ ಎಂದು ನಾಫೆಡ್‌ ತಿಳಿಸಿದೆ.

2018–19ರ ಹಿಂಗಾರು ಅವಧಿಯಲ್ಲಿ ರೈತರಿಂದ ಒಟ್ಟಾರೆ 57 ಸಾವಿರ ಟನ್‌ ಖರೀದಿಸಲಾಗಿತ್ತು. ಈ ಬಾರಿ 1 ಲಕ್ಷ ಟನ್‌ ಸಂಗ್ರಹಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದೆ.

ಈರುಳ್ಳಿಯ ಕಾಪು ದಾಸ್ತಾನು ಹೆಚ್ಚಳಗಿಂದ ದೇಶಿ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆ ಮೂಡಲಿದೆ. ಸಾರ್ವಕಾಲಿಕ ದಾಖಲೆ ಮಟ್ಟದ 1 ಲಕ್ಷ ಟನ್‌ ದಾಸ್ತಾನು ಕೊರತೆ ಸಂದರ್ಭದಲ್ಲಿ ಬಳಸಲು ಬರಲಿದೆ. ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಗುಜರಾತ್‌ನಿಂದ ಈಗಾಗಲೇ ಖರೀದಿ ನಡೆಸಲಾಗಿದೆ.

ಈರುಳ್ಳಿ ದರ

₹1,000–₹1,400: ಕ್ವಿಂಟಲ್‌ಗೆ

₹ 20–30:ಪ್ರತಿ ಕೆ.ಜಿಗೆ ಚಿಲ್ಲರೆ ಮಾರಾಟ ದರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT