ಬೆಂಗಳೂರು: ಮಹಿಳಾ ಉದ್ಯಮಿಗಳನ್ನು ಇ–ವಾಣಿಜ್ಯ ಕ್ಷೇತ್ರದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ನಾಸ್ಕಾಂ ಫೌಂಡೇಷನ್ ಮತ್ತು ಒಎನ್ಡಿಸಿ ನೆಟ್ವರ್ಕ್ ಜೊತೆಯಾಗಿ ಹೊಸ ಯೋಜನೆಯೊಂದನ್ನು ರೂಪಿಸಿವೆ. ಇದು ಕರ್ನಾಟಕದ ಮಹಿಳಾ ಉದ್ಯಮಿಗಳನ್ನು ಆದ್ಯತೆಯನ್ನಾಗಿ ಇರಿಸಿಕೊಂಡಿದೆ.

ಈ ಯೋಜನೆಯ ಮೂಲಕ ಮಹಿಳೆಯರ ನೇತೃತ್ವದ 200 ಉದ್ಯಮಗಳನ್ನು ಒಎನ್ಡಿಸಿ ನೆಟ್ವರ್ಕ್ ವ್ಯಾಪ್ತಿಗೆ ತರಲಾಗಿದೆ, ಅವರಿಗೆ ಇ–ವಾಣಿಜ್ಯ ಮಾರುಕಟ್ಟೆ ಲಭ್ಯವಾಗುವಂತೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

‘ಭಾರತದ ಇ–ವಾಣಿಜ್ಯ ಮಾರುಕಟ್ಟೆಯು 2034ರ ವೇಳೆಗೆ ಅಮೆರಿಕದ ಇ–ವಾಣಿಜ್ಯ ಮಾರುಕಟ್ಟೆಯನ್ನು ಮೀರಿ ಬೆಳೆಯುವ ಅಂದಾಜು ಇದೆ. ಹೀಗಿದ್ದರೂ, ಈ ವಲಯದಲ್ಲಿ ಬೆಳೆಯಲು ಬೇಕಿರುವ ಡಿಜಿಟಲ್ ಪರಿಣತಿಯು ಸಣ್ಣ ಹಾಗೂ ಮಧ್ಯಮ ಗಾತ್ರದ ವ್ಯಾಪಾರಿಗಳ ಪೈಕಿ ಹಲವರಿಗೆ ಈಗಲೂ ಇಲ್ಲ. ಒಎನ್ಡಿಸಿ ಜೊತೆಗಿನ ನಮ್ಮ ಪಾಲುದಾರಿಕೆಯು 200ಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳಿಗೆ ಆನ್ಲೈನ್ ಮಾರುಕಟ್ಟೆಯಲ್ಲಿ ಬೆಳವಣಿಗೆ ಸಾಧಿಸಲು ನೆರವಾಗಿದೆ’ ಎಂದು ನಾಸ್ಕಾಂ ಫೌಂಡೇಷನ್ನ ಸಿಇಒ ಜ್ಯೋತಿ ಶರ್ಮಾ ಹೇಳಿದ್ದಾರೆ.

ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಉಡುಪಿ ಸೇರಿದಂತೆ 22 ಜಿಲ್ಲೆಗಳ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.