ಮುಂಬೈ: ಐದನೇ ಮತ್ತು ಕೊನೆಯ ಕಂತಿನಲ್ಲಿ ‘ನರೇಗಾ’ ಯೋಜನೆಗೆ ಹೆಚ್ಚುವರಿ ಅನುದಾನ ರೂಪದಲ್ಲಿ ₹ 40 ಸಾವಿರ ಕೋಟಿ ನೀಡಿರುವುದೂ ಸೇರಿದಂತೆ ಸರ್ಕಾರ ಪ್ರಕಟಿಸಿದ ಕೊಡುಗೆಗಳ ಒಟ್ಟಾರೆ ಮೊತ್ತ ₹ 1.50 ಲಕ್ಷ ಕೋಟಿಗಳಷ್ಟೇ ಇರಲಿದೆ.

ಇದು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 0.75ರಷ್ಟಾಗಲಿದೆ. ₹ 20 ಲಕ್ಷ ಕೋಟಿ ಮೊತ್ತದ ಪರಿಹಾರ ಕೊಡುಗೆಗಳು ‘ಜಿಡಿಪಿ’ಯ ಶೇ 10ರಷ್ಟು ಇರಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಕಳೆದ ವಾರ ಪ್ರಕಟಿಸಿದ್ದರು. ಐದು ಕಂತುಗಳಲ್ಲಿನ ಬಹುತೇಕ ಕೊಡುಗೆಗಳು ಸಾಲ ಖಾತರಿ ಒಳಗೊಂಡಿವೆ. ಇದು ತಕ್ಷಣಕ್ಕೆ ಸರ್ಕಾರಕ್ಕೆ ಹೊರೆಯಾಗುವುದಿಲ್ಲ.

‘ಹಣಕಾಸು ವ್ಯವಸ್ಥೆಯಲ್ಲಿ ₹ 8.01 ಲಕ್ಷ ಕೋಟಿ ನಗದು ಲಭ್ಯತೆಗೆ ಆರ್ಬಿಐ ಕೈಗೊಂಡ ಕ್ರಮಗಳೂ ಈ ಕೊಡುಗೆಗಳಲ್ಲಿ ಸೇರಿವೆ’ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

‘ಸರಣಿ ಪ್ರಕಟಣೆಗಳಿಗೆ ಸಂಬಂಧಿಸಿದ ನಮ್ಮ ಊಹೆ ಮತ್ತು ಲೆಕ್ಕಾಚಾರ ಆಧರಿಸಿ ಹೇಳುವುದಾದರೆ ಕೇಂದ್ರದ ಬಜೆಟ್ ಮೇಲಿನ ವೆಚ್ಚವು ಕೇವಲ ₹ 1.5 ಲಕ್ಷ ಕೋಟಿಗಳಷ್ಟು (ಜಿಡಿಪಿಯ ಶೇ 0.75) ಇರಲಿದೆ’ ಎಂದು ಬಾರ್ಕ್ಲೇಸ್ನ ಮುಖ್ಯ ಆರ್ಥಿಕ ತಜ್ಞ ರಾಹುಲ್ ಬಜೊರಿಯಾ ಹೇಳಿದ್ದಾರೆ.

ಇಲ್ಲಿಯವರೆಗೆ ಸರ್ಕಾರ ಮತ್ತು ಆರ್ಬಿಐ ಪ್ರಕಟಿಸಿದ ಕೊಡುಗೆಗಳ ವಿವರಗಳನ್ನು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ.

ಕೊಡುಗೆಗಳ ಕಂತು; ಮೊತ್ತ (₹ ಕೋಟಿಗಳಲ್ಲಿ)

1. ಮೊದಲ ಕಂತು;5,94,550

2. ಎರಡನೇ ಕಂತು;3,10,000

3. ಮೂರನೇ ಕಂತು;1,50,000

4. ನಾಲ್ಕು ಮತ್ತು ಐದನೇ ಕಂತು;48,100

ಒಟ್ಟು; 11,02,650

ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಸೇರಿದಂತೆ ಈ ಮೊದಲಿನ ಕ್ರಮಗಳು;1,92,800

ಭಾರತೀಯ ರಿಸರ್ವ್ ಬ್ಯಾಂಕ್ ಕ್ರಮಗಳು;8,01,603

ಒಟ್ಟು;9,94,403

ಒಟ್ಟಾರೆ ಕೊಡುಗೆ 11,02,650 + 9,94,403 = 20,97,053

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.