ಗುರುವಾರ , ಜೂಲೈ 9, 2020
28 °C

ಆರ್ಥಿಕ ಚಟುವಟಿಕೆಗಳ ಭಾಗಶಃ ಕಾರ್ಯಾರಂಭ

ಅನ್ನಪೂರ್ಣ ಸಿಂಗ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದ ಒಟ್ಟಾರೆ ಆಂತರಿಕ ಉತ್ಪನ್ನಕ್ಕೆ (‘ಜಿಡಿಪಿ’) ಶೇ 78ರಷ್ಟು ಕೊಡುಗೆ ನೀಡುವ ಕರ್ನಾಟಕವೂ ಸೇರಿದಂತೆ 10 ರಾಜ್ಯಗಳಲ್ಲಿ ಆರ್ಥಿಕ ಚಟುವಟಿಕೆಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಬೇಕಾಗಿದೆ.

ಈ ರಾಜ್ಯಗಳ  ಒಟ್ಟಾರೆ ಭೂಪ್ರದೇಶದ ಶೇ 5ರಷ್ಟು ಇರುವ ಹಸಿರು ವಲಯಗಳಲ್ಲಿ ಮಾತ್ರ ಈಗ ಚಟುವಟಿಕೆಗಳಿಗೆ ಚಾಲನೆ ಸಿಕ್ಕಿದೆ.

ದೇಶದ ಒಟ್ಟು ‘ಜಿಡಿಪಿ’ ಮೊತ್ತವಾದ ₹ 211 ಲಕ್ಷ ಕೋಟಿಯಲ್ಲಿ ಮೂರು ನಾಲ್ಕಾಂಶದಷ್ಟು ಕೊಡುಗೆ ಈ 10 ರಾಜ್ಯಗಳಿಂದಲೇ ಬರಲಿದೆ. ಕರ್ನಾಟಕ, ಮಹಾರಾಷ್ಟ್ರ, ಗುಜರಾತ್‌, ತಮಿಳುನಾಡು, ಆಂಧ್ರಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ದೆಹಲಿ, ತೆಲಂಗಾಣ ಮತ್ತು ಕೇರಳ ರಾಜ್ಯಗಳ ದೇಶಿ ‘ಜಿಡಿಪಿ’ಯಲ್ಲಿನ ಒಟ್ಟಾರೆ ಪಾಲು ₹ 163 ಲಕ್ಷ ಕೋಟಿ ಇದೆ. ಉಳಿದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ  ಕೊಡುಗೆ ₹ 48 ಲಕ್ಷ ಕೋಟಿಗಳಷ್ಟಿದೆ.

10 ರಾಜ್ಯಗಳಲ್ಲಿನ 327 ಜಿಲ್ಲೆಗಳ ಪೈಕಿ ಕೇವಲ 72 ಜಿಲ್ಲೆಗಳು ದಿಗ್ಬಂಧನದ ಹಸಿರು ವಲಯದಲ್ಲಿ ಇವೆ. ಕೆಂಪು ವಲಯದಲ್ಲಿ ಇರುವ ಜಿಲ್ಲೆಗಳೆಲ್ಲ ಕೈಗಾರಿಕಾ ಜಿಲ್ಲೆಗಳಾಗಿವೆ.

ಹಸಿರು ಜಿಲ್ಲೆಗಳಲ್ಲಿ ಕೈಗಾರಿಕಾ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ‘ಜಿಡಿಪಿ’ಗೆ ಶೇ 27ರಷ್ಟು ಕೊಡುಗೆ ನೀಡುವ ಕೈಗಾರಿಕಾ ವಲಯದಲ್ಲಿ ಸರಕುಗಳ ಪೂರೈಕೆಯೇ ಪ್ರಮುಖ ಅಡಚಣೆಯಾಗಿದೆ. ಕೆಂಪು ವಲಯಗಳಲ್ಲಿ ಉದ್ದಿಮೆ ವಹಿವಾಟು ಪೂರ್ಣ ಪ್ರಮಾಣದಲ್ಲಿ ಚಾಲನೆಗೊಳ್ಳುವವರೆಗೆ ಹಸಿರು ವಲಯದಲ್ಲಿನ ತಯಾರಿಕಾ ಚಟುವಟಿಕೆಗಳಿಗೆ ಅಡಚಣೆ ಎದುರಾಗಲಿದೆ. ಇದೇ ಕಾರಣಕ್ಕೆ ಮಾರುತಿ ಸೇರಿದಂತೆ ಪ್ರಮುಖ ತಯಾರಿಕಾ ಕಂಪನಿಗಳು ಕಾರ್ಯಾರಂಭ ಮಾಡಿಲ್ಲ.

ಅಂಕಿ ಅಂಶ
₹ 211 ಲಕ್ಷ ಕೋಟಿ:
ದೇಶಿ ಜಿಡಿಪಿ ಮೊತ್ತ
₹ 163 ಲಕ್ಷ ಕೋಟಿ: 10 ರಾಜ್ಯಗಳ ಕೊಡುಗೆ
₹ 48 ಲಕ್ಷ ಕೋಟಿ: ಉಳಿದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಾಲು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು