ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ದೇಶದಾದ್ಯಂತ ಶನಿವಾರವೂ ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸಿವೆ.

ಐದು ದಿನಗಳಲ್ಲಿ ನಾಲ್ಕನೇ ಬಾರಿಗೆ ದರ ಹೆಚ್ಚಳ ಮಾಡಿದಂತಾಗಿದ್ದು ಪ್ರತಿ ಲೀಟರಿಗೆ ₹ 3.20ರಷ್ಟು ಹೆಚ್ಚಾದಂತಾಗಿದೆ.

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳ ದರ ಅಧಿಸೂಚನೆಯ ಪ್ರಕಾರ, ದೆಹಲಿಯಲ್ಲಿ ಶನಿವಾರ ಪೆಟ್ರೋಲ್ ದರ ಲೀಟರಿಗೆ ₹ 98.61 ಮತ್ತು ಡೀಸೆಲ್ ದರ ಲೀಟರಿಗೆ ₹ 89.87ಕ್ಕೆ ತಲುಪಿದೆ.

ಎಚ್‌ಪಿಸಿಎಲ್ ಜಾಲತಾಣದಲ್ಲಿ ಇರುವ ಮಾಹಿತಿಯ ಪ್ರಕಾರ, ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರಿಗೆ ₹ 103.91 ಮತ್ತು ಡೀಸೆಲ್ ದರ ಲೀಟರಿಗೆ ₹ 88.12ಕ್ಕೆ ಏರಿಕೆ ಆಗಿದೆ.

ಐದು ರಾಜ್ಯಗಳ ಚುನಾವಣೆಯ ಕಾರಣಕ್ಕಾಗಿ 2021ರ ನವೆಂಬರ್ 4ರಿಂದ 2022ರ ಮಾರ್ಚ್ 21ರವರೆಗೆ ಬೆಲೆ ಪರಿಷ್ಕರಣೆಯನ್ನು ತಡೆಹಿಡಿಯಲಾಗಿತ್ತು. ಈ ಅವಧಿಯಲ್ಲಿ ಕಚ್ಚಾತೈಲ ದರವು ಬ್ಯಾರಲ್‌ಗೆ 82 ಡಾಲರ್‌ಗಳಿಂದ 117 ಡಾಲರ್‌ಗಳಿಗೆ ಏರಿಕೆ ಆಗಿದೆ.

ಕೋಟಕ್ ಇನ್‌ಸ್ಟಿಟ್ಯೂಷನಲ್ ಈಕ್ವಿಟೀಸ್ ಕಂಪನಿಯ ಪ್ರಕಾರ, ಕಚ್ಚಾತೈಲ ದರವು ಬ್ಯಾರಲ್‌ಗೆ 100–120 ಡಾಲರ್‌ಗಳ ಮಟ್ಟದಲ್ಲಿ ಇರುವುದರಿಂದ ತೈಲ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್ ದರವನ್ನು ₹ 10.6 ರಿಂದ ₹ 22.3ರವರೆಗೆ ಹಾಗೂ ಡೀಸೆಲ್ ದರವನ್ನು ₹ 13.1 ರಿಂದ ₹ 24.9ರವರೆಗೆ ಹೆಚ್ಚಿಸಬೇಕಿದೆ.

ಕಚ್ಚಾ ತೈಲದ ಸರಾಸರಿ ದರವು ಬ್ಯಾರಲ್‌ಗೆ 100 ಡಾಲರ್‌ಗಳ ಮಟ್ಟದಲ್ಲಿ ಇದ್ದರೆ ಇಂಧನದ ರಿಟೇಲ್ ಮಾರಾಟ ದರವು ಪ್ರತಿ ಲೀಟರಿಗೆ ₹ 9 ರಿಂದ ₹ 12ರವರೆಗೆ ಹೆಚ್ಚಿಸಬೇಕಾಗಲಿದೆ. ಒಂದೊಮ್ಮೆ ಕಚ್ಚಾತೈಲ ದರವು ಬ್ಯಾರಲ್‌ಗೆ 110–120 ಡಾಲರ್‌ಗಳ ಮಟ್ಟದಲ್ಲಿ ಏರಿಕೆ ಕಂಡರೆ ಆಗ ಪ್ರತಿ ಲೀಟರ್ ಇಂಧನ ದರವನ್ನು ₹ 15 ರಿಂದ ₹ 20ರವರೆಗೆ ಹೆಚ್ಚಿಸಬೇಕಾಗುತ್ತದೆ ಎಂದು ಕ್ರಿಸಿಲ್ ರಿಸರ್ಚ್ ಹೇಳಿದೆ.

ದೇಶದ ಒಟ್ಟಾರೆ ಇಂಧನ ಬೇಡಿಕೆಯ ಶೇ 85ರಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.