ಗುರುವಾರ , ಅಕ್ಟೋಬರ್ 29, 2020
20 °C

ದಿನದ ಬಿಡುವಿನ ಬಳಿಕ ಮತ್ತೆ ಏರಿಕೆಯಾದ ಪೆಟ್ರೋಲ್‌, ಡೀಸೆಲ್‌ ದರ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಪೆಟ್ರೋಲ್‌, ಡೀಸೆಲ್‌ ದರ ಏರಿಕೆ–ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಸತತ 21 ದಿನಗಳು ಏರಿಕೆಯಾಗಿದ್ದ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಭಾನುವಾರದಂದು ಬ್ರೇಕ್‌ ತೆಗೆದುಕೊಂಡಿತ್ತು. ಸೋಮವಾರ ಮತ್ತೆ ಓಟ ಮುಂದುವರಿದಿದ್ದು, ಲೀಟರ್‌ ಪೆಟ್ರೋಲ್‌ಗೆ ₹0.05 ಹಾಗೂ ಲೀಟರ್‌ ಡೀಸೆಲ್‌ಗೆ ₹0.13ರಷ್ಟು ಬೆಲೆ ಏರಿಕೆಯಾಗಿದೆ.

ಈ ಮೂಲಕ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ ₹80.43 ಹಾಗೂ ಡೀಸೆಲ್‌ಗೆ ₹80.53 ಆಗಿದೆ. ಪೆಟ್ರೋಲ್‌ಗಿಂತಲೂ ಡೀಸೆಲ್‌ ದರ ಹೆಚ್ಚಳ ಸಹ ಮುಂದುವರಿದಿದೆ. ಬೆಂಗಳೂರಿನಲ್ಲಿ ಲೀಟರ್‌ ಪೆಟ್ರೋಲ್‌ಗೆ ₹83.02 ಮತ್ತು ಡೀಸೆಲ್‌ಗೆ ₹76.56 ಇದೆ.

ನಿತ್ಯ ತೈಲ ದರ ಪರಿಷ್ಕರಿಸುವ ಪ್ರಕ್ರಿಯೆಯನ್ನು ತೈಲ ಮಾರಾಟ ಕಂಪನಿಗಳು ಜೂನ್‌  7ರಿಂದ ಪುನರಾರಂಭಿಸಿದವು. ಅಂದಿನಿಂದ ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಪ್ರತಿ ಲೀಟರ್‌ಗೆ ಸುಮಾರು ₹10ರಷ್ಟು ಏರಿಕೆ ಕಂಡಿದೆ.  ಡೀಸೆಲ್‌ ದರ ಏರಿಕೆಯು ಸರಕು ಸಾಗಣೆ ವೆಚ್ಚದ ಮೇಲೆ ನೇರ ಪರಿಣಾಮ ಬೀರಬಹುದಾಗಿದೆ.

2017ರ ಮೇನಿಂದ ಪ್ರತಿ ದಿನ ದರ ಪರಿಷ್ಕರಣೆ ಕ್ರಮ ಅನುಸರಿಸಲಾಗುತ್ತಿದೆ.

ಡೀಸೆಲ್‌ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸಿರುವ ಸುಂಕದಿಂದಾಗಿ ಗ್ರಾಹಕರು ಮೂಲ ಬೆಲೆಯ ಶೇ 255ರಷ್ಟು ಹಾಗೂ ಪೆಟ್ರೋಲ್‌ಗೆ ಶೇ 275ರಷ್ಟು ತೆರಿಗೆ ಪಾವತಿಸುವಂತಾಗಿದೆ.  ಎರಡೂ ತೆರಿಗೆಗಳ ಪ್ರಮಾಣವು ಪೆಟ್ರೋಲ್‌ ಪಂಪ್‌ಗಳಲ್ಲಿ ಗ್ರಾಹಕರು ಪ್ರತಿ ಲೀಟರ್‌ ಖರೀದಿ ವೇಳೆ ತೆರುವ ಒಟ್ಟು ಬೆಲೆಯ ಶೇ 69ರಷ್ಟಾಗುತ್ತದೆ. ಇಷ್ಟೊಂದು ಪ್ರಮಾಣದ ತೆರಿಗೆ ವಿಶ್ವದಲ್ಲೇ ಹೆಚ್ಚಿನದ್ದು.

ತೈಲ ಬೆಲೆ ಕುಸಿತದ ಲಾಭ ಪಡೆಯಲು ಸರ್ಕಾರ ಮಾರ್ಚ್‌ನಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಸುಂಕ ಪ್ರತಿ ಲೀಟರ್‌ಗೆ ₹3ರಂತೆ ಹೆಚ್ಚಿಸಿತ್ತು. ಮೇ 6 ರಂದು ಮತ್ತೆ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಕ್ರಮವಾಗಿ ₹10 ಮತ್ತು ₹13ರಂತೆ ಎಕ್ಸೈಸ್‌ ಡ್ಯೂಟಿ ವಿಧಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.