ಬುಧವಾರ, ಜೂನ್ 23, 2021
30 °C

ಸತತ ಎರಡನೇ ದಿನವೂ ತೈಲ ಬೆಲೆ ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ದೇಶದಾದ್ಯಂತ ಸತತ ಎರಡನೇ ದಿನವೂ ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಿಸಿವೆ.

ದೆಹಲಿಯಲ್ಲಿ ಪೆಟ್ರೋಲ್‌ ದರ ಲೀಟರಿಗೆ 19 ಪೈಸೆ ಹೆಚ್ಚಾಗಿ ₹ 90.74ಕ್ಕೆ ತಲುಪಿದೆ. ಡೀಸೆಲ್‌ ದರ 21 ಪೈಸೆ ಹೆಚ್ಚಾಗಿ ₹ 81.12ಕ್ಕೆ ತಲುಪಿದೆ. ಬೆಂಗಳೂರಿನಲ್ಲಿ ಪೆಟ್ರೋಲ್‌ ದರ 10 ಪೈಸೆ ಮತ್ತು ಡೀಸೆಲ್‌ ದರ 14 ಪೈಸೆ ಹೆಚ್ಚಾಗಿದ್ದು, ಕ್ರಮವಾಗಿ ₹ 93.77 ಮತ್ತು ₹ 86.01ರಂತೆ ಮಾರಾಟವಾಗಿವೆ.

ಭಾರತದಲ್ಲಿ ಹೆಚ್ಚುತ್ತಿರುವ ಕೋವಿಡ್–19 ಪ್ರಕರಣಗಳು ಇಂಧನ ಬೇಡಿಕೆಯನ್ನು ತಗ್ಗಿಸುತ್ತಿವೆ ಎನ್ನುವ ಆತಂಕದ ಇದ್ದರೂ, ಅಮೆರಿಕದಲ್ಲಿ ತೈಲ ಬೇಡಿಕೆ ಹೆಚ್ಚಳ ಮತ್ತು ಡಾಲರ್‌ ಮೌಲ್ಯ ಇಳಿಕೆ ಆಗುತ್ತಿರುವ ಕಾರಣಗಳಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಆಗಿದೆ. ಏಪ್ರಿಲ್ 27ರ ನಂತರ ಕಚ್ಚಾತೈಲ ದರ ಏರಿಕೆ ಆಗುತ್ತಲೇ ಇದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು