ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ: 13 ದಿನಗಳಲ್ಲಿ ₹8 ಹೆಚ್ಚಳ

Last Updated 3 ಏಪ್ರಿಲ್ 2022, 2:17 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಭಾನುವಾರ ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು ಲೀಟರ್‌ಗೆ ತಲಾ 80 ಪೈಸೆಯಷ್ಟು ಹೆಚ್ಚಿಸಿವೆ. ಇದರೊಂದಿಗೆ ಕಳೆದ 13 ದಿನಗಳಲ್ಲಿ ಎರಡು ಇಂಧನಗಳ ದರ ಪ್ರತಿ ಲೀಟರ್‌ಗೆ ₹ 8ರಷ್ಟು ಹೆಚ್ಚಾದಂತಾಗಿದೆ.

ಮಾರ್ಚ್‌ 22ರಿಂದ ಇಂಧನ ದರ ಪರಿಷ್ಕರಣೆ ಮತ್ತೆ ಆರಂಭವಾಗಿದ್ದು, ದೆಹಲಿಯಲ್ಲಿ ಪೆಟ್ರೋಲ್‌ ದರ ಲೀಟರಿಗೆ ₹ 103.41ಕ್ಕೆ, ಡೀಸೆಲ್‌ ದರ ಲೀಟರಿಗೆ ₹ 94.67ಕ್ಕೆ ಏರಿಕೆ ಆಗಿದೆ.

ಮುಂಬೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ 84 ಪೈಸೆ ಏರಿಕೆಯಾಗಿದ್ದು, ₹118.41ಕ್ಕೆ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 85 ಪೈಸೆ ಏರಿಕೆಯಾಗಿ ಪ್ರತಿ ಲೀಟರ್‌ಗೆ ₹102.64ಕ್ಕೆ ತಲುಪಿದೆ.

ಚೆನ್ನೈನಲ್ಲಿ ಪೆಟ್ರೋಲ್ ದರ ₹108.21 ಮತ್ತು ಡೀಸೆಲ್ ದರ ₹99.04 (ಕ್ರಮವಾಗಿ 75 ಪೈಸೆ ಮತ್ತು 76 ಪೈಸೆ ಹೆಚ್ಚಾಗಿದೆ). ಕೋಲ್ಕತ್ತದಲ್ಲಿ ಪೆಟ್ರೋಲ್ ಬೆಲೆ ₹113.03 (84 ಪೈಸೆ ಹೆಚ್ಚಳ) ಮತ್ತು ಡೀಸೆಲ್ ಬೆಲೆ ₹97.82 (80 ಪೈಸೆ ಏರಿಕೆ) ಆಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ದರ ₹108.99 ಮತ್ತು ಡೀಸೆಲ್ ದರ ₹92.83ಕ್ಕೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT