ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ಹೆಚ್ಚಳ: ಪೆಟ್ರೋಲ್‌, ಡೀಸೆಲ್‌ ದರ ಏರಿಕೆ

ಕೇಂದ್ರ ಬಜೆಟ್‌ನಲ್ಲಿ ಇಂಧನದ ಮೇಲಿನ ಸೆಸ್‌ ಏರಿಕೆ ಪರಿಣಾಮ
Last Updated 6 ಜುಲೈ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಬಜೆಟ್‌ನಲ್ಲಿ ಇಂಧನಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಿರುವುದರಿಂದ ದೇಶದಾದ್ಯಂತ ಶನಿವಾರದಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳಲ್ಲಿ ಏರಿಕೆಯಾಗಿದೆ.

ಪೆಟ್ರೋಲ್‌ ಮತ್ತು ಡೀಸೆಲ್‌ ಪ್ರತಿ ಲೀಟರ್‌ ಮೇಲೆ ವಿಶೇಷ ಹೆಚ್ಚುವರಿ ಎಕ್ಸೈಸ್‌ ಸುಂಕ ₹ 1 ಮತ್ತು ರಸ್ತೆ ಮತ್ತು ಮೂಲಸೌಕರ್ಯ ಸೆಸ್‌ ₹ 1ರಂತೆ ಹೆಚ್ಚಿಸಲಾಗಿದೆ.ಇದಕ್ಕೆ ರಾಜ್ಯಗಳು ವಿಧಿಸುವ ಮಾರಾಟ ತೆರಿಗೆ ಸೇರಿಸಿ ಅಂತಿಮ ಮಾರಾಟ ದರ ನಿಗದಿಯಾಗುತ್ತದೆ.

ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ ₹ 2.54 ಮತ್ತು ಡೀಸೆಲ್‌ ದರ ₹2.43ರಂತೆ ಏರಿಕೆಯಾಗಿವೆ. ದೆಹಲಿಯಲ್ಲಿ ಪೆಟ್ರೋಲ್‌ಗೆ ₹2.45 ಮತ್ತು ಡೀಸೆಲ್‌ಗೆ ₹ 2.36ರಂತೆ, ಮುಂಬೈನಲ್ಲಿ ಪೆಟ್ರೋಲ್‌ಗೆ ₹2.42 ಮತ್ತು ಡೀಸೆಲ್‌ಗೆ ₹2.50ರಂತೆ ಏರಿಕೆಯಾಗಿವೆ.

2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಎಕ್ಸೈಸ್‌ ಸುಂಕವನ್ನು ಎರಡು ಬಾರಿ ಮಾತ್ರವೇ ಕಡಿತ ಮಾಡಿದೆ. ಆದರೆ 10 ಬಾರಿ ಏರಿಕೆ ಮಾಡಿದೆ. 2017ರ ಅಕ್ಟೋಬರ್‌ನಲ್ಲಿ ಪ್ರತಿ ಲೀಟರ್ ಮೇಲೆ ₹ 2 ರಂತೆ ಹಾಗೂ 2018ರ ಅಕ್ಟೋಬರ್‌ನಲ್ಲಿ ಪ್ರತಿ ಲೀಟರ್‌ ಮೇಲೆ ₹ 1.50ರಂತೆ ಕಡಿತ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT