ಗುರುವಾರ , ಫೆಬ್ರವರಿ 25, 2021
31 °C

ಲಾಕ್‌ಡೌನ್‌ | ಪೆಟ್ರೋಲ್, ಡೀಸೆಲ್‌ ಮಾರಾಟ ಇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಲಾಕ್‌ಡೌನ್‌ನಿಂದಾಗಿ ಏಪ್ರಿಲ್‌ನಲ್ಲಿ ಇಂಧನ‌ ಬಳಕೆ ಶೇ 70ರಷ್ಟು ಕಡಿಮೆಯಾಗಿದೆ.

ಎಲ್‌ಪಿಜಿ ಹೊರತುಪಡಿಸಿ ಉಳಿದಂತೆ ಎಲ್ಲಾ ಇಂಧನಗಳ ಬಳಕೆಯಲ್ಲಿಯೂ ಇಳಿಕೆ ಕಂಡುಬಂದಿದೆ. ಲಾಕ್‌ಡೌನ್‌ ನಿಯಮಗಳಲ್ಲಿ ಸಡಿಲಿಕೆ ಮಾಡುತ್ತಿರುವುದರಿಂದ ಏಪ್ರಿಲ್‌ ತಿಂಗಳ ಕೊನೆಯ 10 ದಿನಗಳಿಂದ ಬೇಡಿಕೆಯಲ್ಲಿ ತುಸು ಏರಿಕೆ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಬೇಡಿಕೆಯಲ್ಲಿ ಸುಧಾರಣೆ ಕಂಡುಬರಲಿದೆ ಎಂದು ಉದ್ಯಮ ತಿಳಿಸಿದೆ.

ಏಪ್ರಿಲ್‌ ತಿಂಗಳ 15 ದಿನಗಳಲ್ಲಿ ಸರ್ಕಾರಿ ಸ್ವಾಮ್ಯದ ಕಂಪನಿಗಳ ಪೆಟ್ರೋಲ್‌ ಮಾರಾಟ ಶೇ 64ರಷ್ಟು ಇಳಿಕೆಯಾಗಿತ್ತು. ಒಟ್ಟಾರೆ ತಿಂಗಳ ಮಾರಾಟ ಶೇ 61ರಷ್ಟು ಕಡಿಮೆಯಾಗಿದೆ. ಡೀಸೆಲ್‌ ಮಾರಾಟವು    ಶೇ 56.5ರಷ್ಟು ಇಳಿಕೆ ಕಂಡಿದೆ. 

ವಿಮಾನಗಳ ಹಾರಾಟ ಸಂಪೂರ್ಣವಾಗಿ ಸ್ಥಗಿತಗೊಂಡಿರುವುದರಿಂದ ಜೆಟ್‌ ಇಂಧನ ಬಳಕೆ ಶೇ 91.5ರಷ್ಟು ಕುಸಿದಿದೆ. ಆದರೆ, ಎಲ್‌ಪಿಜಿ ಬಳಕೆ ಪ್ರಮಾಣ ಶೇ 12ರಷ್ಟು ಹೆಚ್ಚಾಗಿದ್ದು, 21.1 ಲಕ್ಷ ಟನ್‌ಗಳಷ್ಟಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು