ನವದೆಹಲಿ: ಭಾರತದ ಅತಿದೊಡ್ಡ ಫಿನ್ಟೆಕ್ ಕಂಪನಿ ಫೋನ್ಪೇ ಸಾರ್ವಜನಿಕ ಷೇರು ಹಂಚಿಕೆ (ಐಪಿಒ) ಮೂಲಕ ₹13,018 ಕೋಟಿ ಬಂಡವಾಳ ಸಂಗ್ರಹಿಸಲು ಸಿದ್ಧತೆ ನಡೆಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಆಗಸ್ಟ್ನಲ್ಲಿ ಈ ಕುರಿತ ಐಪಿಒ ಅರ್ಜಿಯನ್ನು ಫೋನ್ಪೇ ಕಂಪನಿಯು ಷೇರುಪೇಟೆಗೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಫೋನ್ ಪೇ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

2015ರಲ್ಲಿ ಸ್ಥಾಪನೆಯಾದ ಫೋನ್ಪೇ ಕಂಪನಿ ಸದ್ಯ 610 ಮಿಲಿಯನ್ಗಿಂತಲೂ ಹೆಚ್ಚು ನೋಂದಾಯಿತ ಬಳಕೆದಾರರನ್ನು ಹೊಂದಿದೆ. ಪ್ರತಿದಿನ ₹340 ಕೋಟಿಯಷ್ಟು ವಹಿವಾಟು ನಡೆಸುತ್ತಿದೆ.

2023ರಲ್ಲಿ ರಿಬ್ಬಿಟ್ ಕ್ಯಾಪಿಟಲ್, ಟೈಗರ್ ಗ್ಲೋಬಲ್ ಮ್ಯಾನೇಜ್ಮೆಂಟ್ ಮತ್ತು ಟಿವಿಎಸ್ ಕ್ಯಾಪಿಟಲ್ ಫಂಡ್ಗಳಿಂದ ₹867 ಕೋಟಿ ಸಂಗ್ರಹಿಸಿದೆ. ಆಗ ಕಂಪನಿಯ ಮೌಲ್ಯ ₹1,04,149 ಕೋಟಿಯಷ್ಟಿತ್ತು ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.