ಬುಧವಾರ, ಅಕ್ಟೋಬರ್ 20, 2021
25 °C

ಫೋನ್‌ಪೆ ಮೂಲಕ ಬೆಳ್ಳಿ ಖರೀದಿಗೆ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಯುಪಿಐ ಮೂಲಕ ಪಾವತಿ ಸೇರಿದಂತೆ ಹಲವು ಹಣಕಾಸು ಸೇವೆಗಳನ್ನು ಒದಗಿಸುತ್ತಿರುವ ಫೋನ್‌ಪೆ, ಬೆಳ್ಳಿ ನಾಣ್ಯಗಳು ಮತ್ತು ಗಟ್ಟಿಗಳನ್ನು ಖರೀದಿಸಲು ತನ್ನ ಆ್ಯಪ್‌ ಮೂಲಕ ಅವಕಾಶ ಕಲ್ಪಿಸಿರುವುದಾಗಿ ಹೇಳಿದೆ.

ಶುದ್ಧತೆಯ ವಿಚಾರದಲ್ಲಿ ಪ್ರಮಾಣೀಕೃತ ಆಗಿರುವ ಬೆಳ್ಳಿ ನಾಣ್ಯಗಳು ಮತ್ತು ಗಟ್ಟಿಗಳಲ್ಲಿ ಹೂಡಿಕೆ ಮಾಡಲು ಇದು ಗ್ರಾಹಕರಿಗೆ ಅವಕಾಶ ಕಲ್ಪಿಸಲಿದೆ. ಗ್ರಾಹಕರು ತಾವು ಖರೀದಿಸಿದ ನಾಣ್ಯ ಅಥವಾ ಗಟ್ಟಿಗಳನ್ನು ಮನೆಗೆ ತರಿಸಿಕೊಳ್ಳಲು ತೀರ್ಮಾನಿಸಿದರೆ, ಸಾಗಾಟದ ಮೇಲೆ ವಿಮೆ ಸೌಲಭ್ಯವೂ ಇರುತ್ತದೆ ಎಂದು ಕಂಪನಿ ಪ್ರಕಟಣೆ ತಿಳಿಸಿದೆ.

10 ಗ್ರಾಂ, 20 ಗ್ರಾಂ, 50 ಗ್ರಾಂ ಮತ್ತು 100 ಗ್ರಾಂ ತೂಕದ ಬೆಳ್ಳಿಯ ನಾಣ್ಯ ಅಥವಾ ಗಟ್ಟಿಗಳನ್ನು ಖರೀದಿಸಿ, ಮನೆಗೆ ತರಿಸಿಕೊಳ್ಳಲು ಅವಕಾಶ ಇದೆ.

‘ದೇಶದ ಸಂಸ್ಕೃತಿಯಲ್ಲಿ ಬೆಳ್ಳಿಗೆ ಮಹತ್ವವಿದೆ. ಅತ್ಯಂತ ಶುದ್ಧವಾದ ಬೆಳ್ಳಿಯ ಖರೀದಿಗೆ ಅವಕಾಶ ಕಲ್ಪಿಸಿರುವ ಮೊದಲ ಪಾವತಿ ವೇದಿಕೆ ನಮ್ಮದು’ ಎಂದು ಫೋನ್‌ಪೆ ಕಂಪನಿಯ ಮ್ಯೂಚುವಲ್‌ ಫಂಡ್‌ ವಿಭಾಗದ ಮುಖ್ಯಸ್ಥ ಟೆರೆನ್ಸ್‌ ಲೂಸಿಯನ್ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು