ಶನಿವಾರ, ಏಪ್ರಿಲ್ 1, 2023
32 °C

ಮಹಿಳೆಯರ ಉಡುಪು ವಿಭಾಗಕ್ಕೆ ಮರುಪ್ರವೇಶ: ಪಿ.ಎನ್‌. ರಾವ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪ್ರಮುಖ ಫ್ಯಾಷನ್‌ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ಪಿ.ಎನ್‌. ರಾವ್‌ ತನ್ನ ಶತಮಾನೋತ್ಸವದ ಪ್ರಯುಕ್ತ ಮಹಿಳೆಯರ ಉಡುಪಿನ ವಿಭಾಗವನ್ನು ಮತ್ತೆ ಪ್ರವೇಶಿಸುವ ಉದ್ದೇಶ ಹೊಂದಿದೆ. ಈ ಮೂಲಕ ಪುರುಷರಿಗೂ ಮಹಿಳೆಯರಿಗೂ ಒಪ್ಪುವಂತಹ ಉಡುಪುಗಳನ್ನು ನೀಡುವ ಬ್ರ್ಯಾಂಡ್‌ ಆಗಿ ರೂಪುಗೊಳ್ಳಲಿದೆ ಎಂದು ಕಂಪ‍ನಿ ತಿಳಿಸಿದೆ.

ಕಂಪನಿಯು ಬೆಂಗಳೂರಿನಲ್ಲಿ ಐದು ಮತ್ತು ಚೆನ್ನೈನಲ್ಲಿ ಎರಡು ಮಳಿಗೆಗಳನ್ನು ಹೊಂದಿದೆ.

‘ಶತಮಾನೋತ್ಸವವು ನಮ್ಮ ಬ್ರ್ಯಾಂಡ್‌ ಮೌಲ್ಯ, ದೂರದೃಷ್ಟಿ ಮತ್ತು ಗುರಿಯನ್ನು ತಿಳಿಸುತ್ತದೆ. ಗ್ರಾಹಕರ ಮನಃಸ್ಥಿತಿಯನ್ನು ಅರ್ಥಮಾಡಿಕೊಂಡು ಅವರಿಗೆ ಉತ್ತಮ ಉಡುಪುಗಳನ್ನು ನೀಡಲು ನಾವು ಬದ್ಧರಾಗಿದ್ದೇವೆ’ ಎಂದು ಕಂಪನಿಯ ಪಾಲುದಾರ ಕೇತನ್‌ ಪಿಶೆ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘1923ರಲ್ಲಿ ಲೇಡಿಸ್‌ ಟೈಲರಿಂಗ್‌ ಬ್ರ್ಯಾಂಡ್‌ ಆಗಿ ಆರಂಭವಾದ ಪಿ.ಎನ್‌. ರಾವ್‌, ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್‌ ಮಹಿಳೆಯರಿಗೆ ಉಡುಪುಗಳನ್ನು ಒದಗಿಸುತ್ತಿತ್ತು. ಸ್ವಾತಂತ್ರ್ಯಾನಂತರ ಪಿ.ಎನ್‌. ಪಾಂಡುರಂಗ ರಾವ್‌ ಅವರಿಂದಾಗಿ ಪುರುಷರ ಉಡುಪುಗಳಿಗೂ ಬ್ರ್ಯಾಂಡ್ ವಿಸ್ತರಣೆ ಆಯಿತು. ಆ ಬಳಿಕ ಪುರುಷರ ಸೂಟ್ಸ್‌ ಬ್ರ್ಯಾಂಡ್‌ ಆಗಿ ಜನಪ್ರಿಯವಾಗಿದೆ’ ಎಂದು ಕೇತನ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು