ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಸಂಸ್ಥಾಪನಾ ದಿನ ಆಚರಣೆ

Last Updated 13 ಏಪ್ರಿಲ್ 2022, 16:58 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಎರಡನೆಯ ಅತಿದೊಡ್ಡ ಬ್ಯಾಂಕ್ ಆಗಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್, ಈಚೆಗೆ ತನ್ನ 128ನೆಯ ಸಂಸ್ಥಾಪನಾ ದಿನ ಆಚರಿಸಿತು.

ಇದರ ಅಂಗವಾಗಿ, ಬ್ಯಾಂಕ್‌ನ ಬೆಂಗಳೂರು ವೃತ್ತದ ಅಧೀನದ ಶಾಖೆಗಳು ಗ್ರಾಹಕ ಸೇವೆಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದವು. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಗೆ ಸಂಬಂಧಿಸಿದ ಕೆಲವು ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿತ್ತು ಎಂದು ಬ್ಯಾಂಕ್‌ನ ಪ್ರಕಟಣೆ ತಿಳಿಸಿದೆ.

ಹೈದರಾಬಾದ್ ವಲಯದ ವ್ಯವಸ್ಥಾಪಕ ಸಂಜೀವನ್ ನಿಖಾರ್, ಬೆಂಗಳೂರು ಪಶ್ಚಿಮ ವೃತ್ತದ ಮುಖ್ಯಸ್ಥ ಬಸಂತ ಕುಮಾರ್ ಅವರು ಹಿರಿಯ ನಾಗರಿಕರಿಗೆ ವಿದ್ಯುತ್ ಚಾಲಿತ ವಾಹನಗಳನ್ನು ವಿತರಿಸಿದರು. ‘ನೆಲೆ’ ಅನಾಥಾಶ್ರಮಕ್ಕೆ ₹ 25 ಸಾವಿರ ದೇಣಿಗೆ ನೀಡಲಾಯಿತು.

ಬೆಂಗಳೂರು ಪಶ್ಚಿಮ ವೃತ್ತ ಕಚೇರಿಯ ಅಧಿಕಾರಿಗಳಾದ ಜಾನ್ ಅಬ್ರಹಾಂ ಮತ್ತು ಸಂತೋಷ್ ಸಿಂಗ್ ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT