ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ| ಪ್ಯಾನ್‌ ಮಾಡಿಸಿದರೆ ತೆರಿಗೆ ಬರುತ್ತದೆಯೇ?

Last Updated 11 ಜೂನ್ 2019, 19:30 IST
ಅಕ್ಷರ ಗಾತ್ರ

ನಾನು ಸರ್ಕಾರಿ ನಿವೃತ್ತ ನೌಕರ. ವಾರ್ಷಿಕ ಪಿಂಚಣಿ₹ 4.8 ಲಕ್ಷ.₹ 3,775 ಕಾಮ್ಯೂಟೇಷನ್ ಹಣ ತಿಂಗಳಲ್ಲಿ ಪಿಂಚಣಿಯಲ್ಲಿ ಕಡಿತವಾಗುತ್ತದೆ. ಈ ಹಣ ನನಗೆ ಈಗ ಸಿಗುತ್ತಿಲ್ಲ. ಈ ಹಣವನ್ನು ವಾರ್ಷಿಕ ಆದಾಯಕ್ಕೆ ಸೇರಿಸಿ ತೆರಿಗೆ ಸಲ್ಲಿಸಬೇಕೇ ತಿಳಿಸಿರಿ. ನನ್ನ ಪಿ.ಪಿ.ಎಫ್. ಖಾತೆಯಿಂದ ವಾರ್ಷಿಕವಾಗಿ ಬಡ್ಡಿ ಬರುತ್ತದೆ. ಇದಕ್ಕೆ ತೆರಿಗೆ ಇದೆಯೇ? ಇತ್ತೀಚೆಗೆ ಹಿರಿಯ ನಾಗರಿಕರ ಠೇವಣಿ ಮೇಲಿನ ಬಡ್ಡಿಗೆ₹ 50,000 ವರೆಗೆ ವಿನಾಯ್ತಿ ಬಂದಿದೆ. ಉಳಿತಾಯ ಖಾತೆಗೂ ಇದು ಅನ್ವಯಿಸುವುದೇ ಎಂಬುದನ್ನು ವಿವರವಾಗಿ ತಿಳಿಸಿರಿ.
ಎಚ್.ಎಸ್. ಶಿವಶಂಕರ್, ಚಿಕ್ಕಲಸಂದ್ರ, ಬೆಂಗಳೂರು

ಉತ್ತರ: ನಿವೃತ್ತಿಯಿಂದ ಪಿಂಚಣಿ ಪಡೆಯುವವರು ಮೂಲ ಪಿಂಚಣಿಯ (Basic pension) ಮೂರನೇ ಒಂದಂಶವನ್ನು ಕಾಮ್ಯೂಟೇಷನ್ ರೂಪದಲ್ಲಿ ಪಡೆಯಬಹುದು. ಹೀಗೆ ಬಂದ ಹಣ ಸೆಕ್ಷನ್ 10 (014)(i) ಆಧಾರದ ಮೇಲೆ ಸಂಪೂರ್ಣ ವಿನಾಯ್ತಿ ಹೊಂದಿದೆ. ನಿಮ್ಮ ಪಿಂಚಣಿಯಲ್ಲಿ ಕಡಿತವಾಗುವ₹ 3,775ಕ್ಕೆ ತೆರಿಗೆ ಬರುವುದಿಲ್ಲ. ಪಿಂಚಣಿ ಕಾಮ್ಯೂಟೇಷನ್ ಮಾಡಿ 15 ವರ್ಷ ಕಳೆದು ಮುಂದೆ ಪ್ರತೀ ತಿಂಗಳೂ ಪಡೆಯುವ₹ 3,775ಕ್ಕೆ ತೆರಿಗೆ ಇದೆ. ಪಿಪಿಎಫ್‌ನಲ್ಲಿ ತೊಡಗಿಸಿದ ಗರಿಷ್ಠ ಹಣ₹ 1.50 ಲಕ್ಷ ಸೆಕ್ಷನ್ 80C ಆಧಾರದ ಮೇಲೂ ಇಲ್ಲಿ ಬರುವ ಸಂಪೂರ್ಣ ಬಡ್ಡಿ ಸೆಕ್ಷನ್ 10 (11) ಆಧಾರದ ಮೇಲೆ ಸಂಪೂರ್ಣ ತೆರಿಗೆ ವಿನಾಯ್ತಿ ಹೊಂದಿದೆ. ಇತ್ತೀಚೆಗೆ ಸೆಕ್ಷನ್ 80TTB ಆಧಾರದ ಮೇಲೆ₹ 50,000 ಠೇವಣಿ ಮೇಲಿನ ವಿನಾಯ್ತಿ ಹಿರಿಯ ನಾಗರಿಕರಿಗೆ ಮಾತ್ರ ಸೀಮಿತವಾಗಿದೆ. ಈ ಗರಿಷ್ಠ ಮಿತಿ₹ 50,000, ಠೇವಣಿ ಬಡ್ಡಿ–ಉಳಿತಾಯ ಖಾತೆ ಬಡ್ಡಿ ಒಟ್ಟಿನಲ್ಲಿ ಇರುತ್ತದೆ. ಹಿರಿಯ ನಾಗರಿಕರಲ್ಲದವರು ಸೆಕ್ಷನ್ 80TTA ಆಧಾರದ ಮೇಲೆ ಉಳಿತಾಯ ಖಾತೆಯಲ್ಲಿ ಬರುವ ಗರಿಷ್ಠ₹ 10,000 ತನಕ ವಿನಾಯಿತಿ ಪಡೆಯಬಹುದು. ನಿಮ್ಮ ಪ್ರಶ್ನೆಯಿಂದ ಅನೇಕರಿಗೆ ಉತ್ತರ ಸಿಕ್ಕಿದಂತಾಗಿದೆ. ನಿಮಗೆ ಅಭಿನಂದನೆಗಳು.

**
ನಾನು ಗೃಹಿಣಿ. ವಯಸ್ಸು 47, ಪತಿಯ ವಯಸ್ಸು 53. ಅವರು ಎಂಎನ್‌ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ಅವರ ವಾರ್ಷಿಕ ಸಂಬಳ ₹ 9 ಲಕ್ಷ. ನನ್ನ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ₹ 90 ಸಾವಿರ ಠೇವಣಿ ಇದೆ. ಅಂಚೆ ಕಚೇರಿಯಲ್ಲಿ ₹ 30 ಸಾವಿರ ಇದೆ. ಬ್ಯಾಂಕ್ ಆರ್‌.ಡಿ ₹ 2 ಲಕ್ಷ ಬರಲಿದೆ. ಬ್ಯಾಂಕ್‌ನಲ್ಲಿ ಪ್ಯಾನ್‌ಕಾರ್ಡ್‌ ಕೇಳುತ್ತಾರೆ. ನಾನು ಯಾವ ಉದ್ಯೋಗದಲ್ಲಿಯೂ ಇಲ್ಲ. ಪ್ಯಾನ್‌ ಮಾಡಿಸಿದರೆ ತೆರಿಗೆ ಬರುತ್ತದೆಯೇ ಅಥವಾ ಇನ್ನಿತರ ತೊಂದರೆಗಳು ಬರಬಹುದೇ?
-ಹೆಸರು, ಊರು ಬೇಡ

ಉತ್ತರ: ಬ್ಯಾಂಕ್‌ ಅಥವಾ ಅಂಚೆ ಕಚೇರಿ ಠೇವಣಿ ಇರಿಸಲು ಪ್ಯಾನ್‌ ಕಾರ್ಡ್‌ ಕಡ್ಡಾಯವಾಗಿದೆ. ಹಿಂದೆ ಪ್ಯಾನ್‌ ಪಡೆಯದೇ ಠೇವಣಿ ಇರಿಸಿಕೊಂಡಿದ್ದಲ್ಲಿ ಸೆಕ್ಷನ್‌ 194ಎ ಪ್ರಕಾರ ಬಡ್ಡಿಯ ಶೇ 20 ಮುರಿದು ಆದಾಯ ತೆರಿಗೆ ಇಲಾಖೆಗೆ ಕೊಡಬೇಕಾಗುತ್ತದೆ. ನೀವು ಪ್ಯಾನ್‌ ಕಾರ್ಡ್‌ ಮಾಡಿಸಿ. ತೆರಿಗೆ ಮಿತಿಗೆ ತಲುಪುವ ತನಕ ಆದಾಯ ತೆರಿಗೆ ಕೊಡುವ ಅವಶ್ಯವಿಲ್ಲ. ಪ್ಯಾನ್‌ ಹೊಂದಿದ್ದಲ್ಲಿ ಆದಾಯ ತೆರಿಗೆಗೆ ಒಳಗಾಗುತ್ತಾರೆ ಎನ್ನುವ ವಿಚಾರ ಸತ್ಯಕ್ಕೆ ದೂರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT