ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ಆದಾಯ ತೆರಿಗೆ ಉಳಿಸಲು ಯಾವ ಸೆಕ್ಷನ್‌ ಉಪಯೋಗ

Last Updated 28 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

- ಹರ್ಷ, ಊರುಬೇಡ

ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ನಾನು ವಿವಾಹಿತ ಹಾಗೂ 4 ವರ್ಷದ ಹೆಣ್ಣುಮಗು ಇದೆ. ನನ್ನ ತಿಂಗಳ ಸಂಬಳ₹ 60 ಸಾವಿರ (ಎಲ್ಲ ಕಡಿತದ ನಂತರ). ನನ್ನ ಖರ್ಚು – ಮನೆ ಬಾಡಿಗೆ ₹ 12 ಸಾವಿರ. ಪೆಟ್ರೋಲ್‌, ದಿನಸಿ ಇತರೆ ಬಿಲ್ಲುಗಳು₹ 5 ಸಾವಿರ. ತಂದೆ ತಾಯಿಗೆ ₹ 1 ಸಾವಿರ. ಆರೋಗ್ಯ ವಿಮೆ ₹ 4,100. ಎಲ್‌ಐಸಿ₹ 5 ಸಾವಿರ. ಸುಕನ್ಯಾಸಮೃದ್ಧಿ ಯೋಜನೆ₹ 2,500. ಪ್ರಶ್ನೆ. ಆದಾಯ ತೆರಿಗೆ ಉಳಿಸಲು ಯಾವ ಸೆಕ್ಷನ್‌ ಉಪಯೋಗ. ನನ್ನೊಡನೆ ₹ 5 ಲಕ್ಷ ಉಳಿತಾಯ ಮಾಡಿದ ಹಣವಿದೆ. ಇದು ಎಫ್‌ಡಿಯಲ್ಲಿದೆ. ಇದಕ್ಕೂ ಉತ್ತಮ ಹೂಡಿಕೆ ತಿಳಿಸಿ. 5 ವರ್ಷಗಳ ನಂತರ ಮನೆ ಕಟ್ಟುವ ಪ್ಲ್ಯಾನ್‌ ಇದೆ. ನನ್ನ ಬಜೆಟ್‌ ₹ 40 ಲಕ್ಷ. ಸಾಲ ಪಡೆಯುವ ವಿಧಾನ ತಿಳಿಸಿ.

ಉತ್ತರ: ನೌಕರ ವರ್ಗದವರಿಗೆ ಆದಾಯ ತೆರಿಗೆ ಸೆಕ್ಷನ್‌ 80ಸಿ ಹಾಗೂ ಸೆಕ್ಷನ್‌ 80ಸಿಸಿಡಿ (1ಬಿ) ಬಹೂಪಯೋಗಿಯಾಗಿದೆ. ನೀವು ಎಲ್‌ಐಸಿ ₹ 5 ಸಾವಿರ ಹಾಗೂ ಸುಕನ್ಯಾ ಸಮೃದ್ಧಿ ₹ 2,500 ಹೀಗೆ ಕಟ್ಟುವ ಹಣ ಸೆಕ್ಷನ್‌ 80ಸಿ ಅಡಿಯಲ್ಲಿ ವಿನಾಯ್ತಿ ಪಡೆಯಬಹುದು. 80 ಸಿ ಅಡಿಯಲ್ಲಿ ಗರಿಷ್ಠ ₹ 1.5 ಲಕ್ಷ ಉಳಿಸಬಹುದಾಗಿದೆ. ಹೀಗಾಗಿ ಎಲ್‌ಐಸಿ, ಸುಕನ್ಯಾದಲ್ಲಿ ಮಾಡುತ್ತಿರುವ ಹೂಡಿಕೆಯನ್ನು ₹ 1.5 ಲಕ್ಷದಲ್ಲಿ ಕಳೆದು, ಉಳಿದ ಹಣ ಪಿಪಿಎಫ್‌ ಖಾತೆ, ಅಂಚೆ ಕಚೇರಿ ಅಥವಾ ಆಯ್ದ ಬ್ಯಾಂಕ್‌ಗಳಲ್ಲಿ ತುಂಬಿರಿ. ಎನ್‌ಪಿಎಸ್‌ನಲ್ಲಿ ₹50 ಸಾವಿರ ವಾರ್ಷಿಕ ಉಳಿಸಿ ಸೆಕ್ಷನ್‌ 80ಸಿಸಿಡಿ (1ಬಿ) ಆಧಾರದ ಮೇಲೆ ವಿನಾಯ್ತಿ ಪಡೆಯಿರಿ. ಹಾಲಿ ನಿಮ್ಮೊಡನಿರುವ ₹5 ಲಕ್ಷವನ್ನು ಸಂಬಳ ಪಡೆಯುವ ಬ್ಯಾಂಕ್‌ನಲ್ಲಿ ಒಮ್ಮೆಲೆ ಬಡ್ಡಿ ಬರುವ ಠೇವಣಿಯಲ್ಲಿ 5 ವರ್ಷಗಳ ಅವಧಿಗೆ ಇಡಿ. ಇಲ್ಲಿ ಬರುವ ಮೊತ್ತ ಮನೆ ಕಟ್ಟಲು ಉಪಯೋಗವಾಗುತ್ತದೆ. ಗೃಹ ಸಾಲ ₹ 30 ಲಕ್ಷ ಸಿಗಬಹುದು. ಇಎಂಐ ₹ 30 ಸಾವಿರ ಕಟ್ಟಬೇಕಾದೀತು. ಸಾಧ್ಯವಾದರೆ ₹ 10 ಸಾವಿರ ಆರ್‌.ಡಿ 5 ವರ್ಷಗಳ ಅವಧಿಗೆ ಮಾಡಿ. ಇದು ಕೂಡಾ ಮನೆ ಕಟ್ಟಲು ಅನುಕೂಲವಾಗುತ್ತದೆ.

***

- ಚೇತನ್ ಕುಮಾರ್‌, ಬೆಂಗಳೂರು

ನಿಮ್ಮ ಸಲಹೆಯಿಂದ ನಾನು ತೆರಿಗೆ ಉಳಿಸಲು ಪಿಪಿಎಫ್‌ನಲ್ಲಿ ಹಣ ತೊಡಗಿಸಲು ಪ್ರಾರಂಭಿಸಿದೆ. ಆದಾಯ ತೆರಿಗೆ ಉಳಿಸಲು ಸರ್ಕಾರ 80ಸಿಯಲ್ಲಿ ಉಳಿಸಬಹುದಾದ ಹಣ ಈ ಆರ್ಥಿಕ ವರ್ಷದ ವಿನಾಯಿತಿ ಪಡೆಯಲು ಜೂನ್‌ 2020ರ ತನಕ ವಿಸ್ತಿರಿಸಿದೆ. ಆದರೆ ನನಗೆ ಇದರ ಅಗತ್ಯವಿಲ್ಲ. ನನ್ನ ಪ್ರಶ್ನೆ ಏನೆಂದರೆ ಮುಂದಿನ ಆರ್ಥಿಕ ವರ್ಷದ ಸಲುವಾಗಿ 80ಸಿಯಲ್ಲಿ ಹಣ ಹೂಡಲು ಜೂನ್‌ ತನಕ ಕಾಯಬೇಕಾ.

ಉತ್ತರ: 31–3–21ಕ್ಕೆ ಕೊನೆಗೊಳ್ಳುವ ಆರ್ಥಿಕ ವರ್ಷದಲ್ಲಿ ವಿನಾಯಿತಿ ಪಡೆಯಲು 2020–4–1ರಿಂದಲೇ 80ಸಿಯಲ್ಲಿ ಹೂಡಿಕೆ ಮಾಡಬಹುದು. ಜೂನ್‌ ತನಕ ಕಾಯುವ ಅವಶ್ಯವಿಲ್ಲ. 31–3–2020ಕ್ಕೆ ಅಂತ್ಯವಾದ ಹಿಂದಿನ ಆರ್ಥಿಕ ವರ್ಷದಲ್ಲಿ ಜೂನ್‌ ತನಕ ಹಣ ಹೂಡಲು ಅವಕಾಶವಿದ್ದು ಇದನ್ನು ಪ್ರತ್ಯೇಕವಾಗಿ ಬಳಸಿಕೊಳ್ಳಬಹುದು. ಒಟ್ಟಿನಲ್ಲಿ 1–4–2020ರಿಂದ 30–6–2020ರ ತನಕ ತೆರಿಗೆ ಉಳಿಸಲು ಮಾಡಿರುವ ಉಳಿತಾಯ ಎರಡೂ ಬಾರಿ ವಿನಾಯಿತಿ ಪ‍ಡೆಯುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT