ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಬಾಕು: ₹237 ಕೋಟಿ ವಹಿವಾಟು

Last Updated 7 ಮಾರ್ಚ್ 2023, 20:47 IST
ಅಕ್ಷರ ಗಾತ್ರ

ಕೊಣನೂರು (ಹಾಸನ ಜಿಲ್ಲೆ): ರಾಮನಾಥಪುರದ ತಂಬಾಕು ಹರಾಜು ಮಾರುಕಟ್ಟೆಯ 2022-23ನೇ ಸಾಲಿನ ವಹಿವಾಟು ಸೋಮವಾರ ಮುಕ್ತಾಯಗೊಂಡಿದ್ದು ₹ 237.95 ಕೋಟಿ ವಹಿವಾಟು ದಾಖಲಿಸಿವೆ.

ಅ.10ರಿಂದ ವಹಿವಾಟು ಆರಂಭಿಸಿದ ಮಾರುಕಟ್ಟೆಯು, ಅಂಕಣ ನಂ.7ರಲ್ಲಿ ಒಟ್ಟು 5,900 ಟನ್‌ ತಂಬಾಕು ಮಾರಾಟವಾಗಿದ್ದು, ₹ 135.62 ಕೋಟಿ ವಹಿವಾಟು ನಡೆದಿದೆ. ಉತ್ತಮ ದರ್ಜೆಯ ಹೊಗೆಸೊಪ್ಪಿಗೆ ₹ 270 ಗರಿಷ್ಠ ಬೆಲೆ, ₹ 60 ಕನಿಷ್ಠ ಬೆಲೆ, ಸರಾಸರಿ ₹ 229.75 ದರ ದೊರೆತಿದೆ. ವಹಿವಾಟಿನಲ್ಲಿ 23 ಕಂಪನಿಗಳು ಭಾಗವಹಿಸಿದ್ದವು. ಅಂಕಣ ಸಂಖ್ಯೆ 63ರಲ್ಲಿ ಒಟ್ಟು 4,430 ಟನ್‌ ತಂಬಾಕು (ಸೊಪ್ಪು) ಮಾರಾಟವಾಗಿದ್ದು, ₹ 102.33 ಕೋಟಿ ವಹಿವಾಟು ನಡೆದಿದೆ.

ಉತ್ತಮ ದರ್ಜೆಯ ತಂಬಾಕಿಗೆ ಗರಿಷ್ಠ ₹ 270, ಕನಿಷ್ಠ ₹ 55 ಮತ್ತು ಸರಾಸರಿ ₹ 231 ದರ ದೊರೆತಿದೆ. 20 ಕಂಪನಿಗಳು ಖರೀದಿಸಿದವು ಎಂದು ಮಾರುಕಟ್ಟೆ ಸೂಪರಿಂಟೆಂಡೆಂಟ್‌ಗಳಾದ ಐಸಾಕ್ ಸ್ವರ್ಣದತ್, ನಿವೇಶ್ ಕುಮಾರ್ ಪಾಂಡೆ ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT