ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಕೆಗೆ ಸಿಗದ ಆಹಾರ ಹಣದುಬ್ಬರ: 9ನೇ ಸಲ ರೆಪೊ ದರ ಯಥಾಸ್ಥಿತಿ; ಆರ್‌ಬಿಐ ನಿರ್ಧಾರ

Published : 8 ಆಗಸ್ಟ್ 2024, 23:30 IST
Last Updated : 8 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯು, ಸತತ ಒಂಬತ್ತನೇ ಬಾರಿಗೆ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ.

ಗುರುವಾರ ಮುಕ್ತಾಯಗೊಂಡ ಸಭೆಯಲ್ಲಿ ಆರು ಸದಸ್ಯರ ಪೈಕಿ ನಾಲ್ವರು ಸದಸ್ಯರು, ರೆಪೊ ದರವನ್ನು ಶೇ 6.5ರಲ್ಲಿಯೇ ಉಳಿಸಿಕೊಳ್ಳಲು ಸಹಮತ ಸೂಚಿಸಿದ್ದಾರೆ.  2023ರ ಫೆಬ್ರುವರಿಯಿಂದಲೂ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಆಹಾರ ಪದಾರ್ಥಗಳ ಬೆಲೆಯು ನಿರಂತರವಾಗಿ ಏರಿಕೆಯಾಗುತ್ತಿದೆ. ಇದರ ನಿಯಂತ್ರಣದ ಮೇಲೆ ನಿಗಾವಹಿಸಲಾಗಿದೆ. ಮತ್ತೊಂದೆಡೆ ಚಿಲ್ಲರೆ ಹಣದುಬ್ಬರವನ್ನು ಶೇ 4ರ ಮಿತಿಯಲ್ಲಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಭೆ ಹೇಳಿದೆ.  

ಸರ್ಕಾರಿ ಸಾಲ ಪತ್ರಗಳನ್ನು ವಾಣಿಜ್ಯ ಬ್ಯಾಂಕ್‌ಗಳಲ್ಲಿ ಅಡಮಾನ ಇಡದೆ ಅವುಗಳ ಬಳಿ ಇರುವ ಹೆಚ್ಚುವರಿ ಹಣವನ್ನು ಆರ್‌ಬಿಐ ತನ್ನ ವಶಕ್ಕೆ ಪಡೆಯುತ್ತದೆ (ಸ್ಟ್ಯಾಂಡಿಂಗ್‌ ಡಿಪಾಸಿಟ್‌ ಫೆಸಿಲಿಟಿ– ಎಸ್‌ಡಿಎಫ್‌). ಇದರಿಂದ ನಗದು ಹರಿವಿನ ಪ್ರಮಾಣ ತಗ್ಗಲಿದೆ. ಈ ಹಣಕ್ಕೆ ನೀಡುವ ಶೇ 6.25ರಷ್ಟು ಬಡ್ಡಿದರದಲ್ಲೂ ಬದಲಾವಣೆ ಮಾಡಿಲ್ಲ.

ಬ್ಯಾಂಕ್‌ಗಳು ತುರ್ತು ಸಮಯದಲ್ಲಿ ಆರ್‌ಬಿಐನಿಂದ ಪಡೆಯುವ ಸಾಲಕ್ಕೆ ನಿಗದಿಪಡಿಸಿರುವ ಶೇ 6.75ರಷ್ಟು ಬಡ್ಡಿದರವನ್ನು ಪರಿಷ್ಕರಿಸಿಲ್ಲ.

ಜೂನ್‌ನಲ್ಲಿ ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಚಿಲ್ಲರೆ ಹಣದುಬ್ಬರವು ಶೇ 5.08ರಷ್ಟು ದಾಖಲಾಗಿದೆ. 

‘ಆಹಾರದ ಹಣದುಬ್ಬರವು ಅಂಕೆಗೆ ಸಿಗುತ್ತಿಲ್ಲ. ಚಿಲ್ಲರೆ ಹಣದುಬ್ಬರದ ಹೆಚ್ಚಳಕ್ಕೆ ಆಹಾರ ಪದಾರ್ಥಗಳ ದರ ಏರಿಕೆಯು ಶೇ 46ರಷ್ಟು ಕೊಡುಗೆ ನೀಡಿದೆ. ಜೂನ್‌ನಲ್ಲಿ ತರಕಾರಿಗಳ‌ ಬೆಲೆ ಏರಿಕೆಯು ಶೇ 35ರಷ್ಟು ಕೊಡುಗೆ ನೀಡಿದೆ’ ಎಂದು ಗವರ್ನರ್‌ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.

ಆಹಾರ ಪದಾರ್ಥಗಳ ಬೆಲೆ ಏರಿಕೆ ನಿಯಂತ್ರಿಸದ ಹೊರತು ಸುಸ್ಥಿರ ಬೆಳವಣಿಗೆಯು ಅಸಾಧ್ಯ. ಬೆಲೆ ಇಳಿಸುವುದೇ ಸಭೆಯ ಮೂಲ ಧ್ಯೇಯವಾಗಿದೆ‌ ಎಂದು ತಿಳಿಸಿದ್ದಾರೆ.

‌‘ಚಿಲ್ಲರೆ ಹಣದುಬ್ಬರ ಮತ್ತು ಆರ್ಥಿಕತೆ ಬೆಳವಣಿಗೆಯು ಸಮತೋಲಿತವಾಗಿದೆ. ಜಿಡಿ‍ಪಿ, ಹಣದುಬ್ಬರ, ಬಡ್ಡಿದರ, ನಿರುದ್ಯೋಗ ಆಧಾರಿತ ಸ್ಥೂಲ ಆರ್ಥಿಕ ಸ್ಥಿತಿಯು ಸ್ಥಿರವಾಗಿದೆ. ಜಿಡಿಪಿ ಬೆಳವಣಿಗೆಯು ಚೇತರಿಕೆ ಕಂಡಿದೆ. ಹಣದುಬ್ಬರವು ಇಳಿಕೆಯ ಪಥದಲ್ಲಿದೆ. ಆಹಾರ ಪದಾರ್ಥಗಳ ಬೆಲೆ ಏರಿಕೆ ನಿಯಂತ್ರಿಸುವ ಹಾದಿಯಲ್ಲಿದ್ದೇವೆ. ಆದರೆ, ಸಾಗುವ ದಾರಿಯು ಬಹಳಷ್ಟು ದೂರವಿದೆ’ ಎಂದು ಹೇಳಿದ್ದಾರೆ.

‘ಆಹಾರ ಹಣದುಬ್ಬರದ ಏರಿಕೆಯು ಶಾಶ್ವತವಲ್ಲ. ಇದರ ಅನುಭವವೂ ನಮಗಿದೆ. ಸದ್ಯದಮಟ್ಟಿಗೆ ಎಂಪಿಸಿಗೆ ಇದರ ನಿರ್ವಹಣೆಯು ಕಷ್ಟಕರವಾಗಿದೆ’ ಎಂದು ಹೇಳಿದ್ದಾರೆ.

‘ರೆಪೊ ದರ ಕಡಿತದ ಬಗ್ಗೆ ಅಕ್ಟೋಬರ್‌ನಲ್ಲಿ ನಡೆಯುವ ಎಂಪಿಸಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಡಿಸೆಂಬರ್‌ನಿಂದ ಬಡ್ಡಿದರ ಕಡಿತಗೊಳಿಸುವ ನಿರೀಕ್ಷೆಯಿದೆ. ದೇಶೀಯ ಮಟ್ಟದಲ್ಲಿನ ಹಣದುಬ್ಬರ ಮತ್ತು ಜಾಗತಿಕ ಸ್ಥಿತಿಗತಿಯ ಆಧಾರದ ಮೇಲೆ ಈ ನಿರ್ಧಾರ ತಳೆಯುವ ನಿರೀಕ್ಷೆಯಿದೆ’ ಎಂದು ಕೋಟಕ್‌ ಮಹೀಂದ್ರ ಬ್ಯಾಂಕ್‌ನ ಮುಖ್ಯ ಅರ್ಥಶಾಸ್ತ್ರಜ್ಞೆ ಉಪಾಸನಾ ಭಾರದ್ವಾಜ್ ಹೇಳಿದ್ದಾರೆ.

ಜಿಡಿಪಿ ಬೆಳವಣಿಗೆ

2024–25ನೇ ಆರ್ಥಿಕ ವರ್ಷದ ಜಿಡಿಪಿ ಬೆಳವಣಿಗೆ ಮತ್ತು ಚಿಲ್ಲರೆ ಹಣದುಬ್ಬರಕ್ಕೆ ಸಂಬಂಧಿಸಿದಂತೆ ಆರ್‌ಬಿಐ ಪರಿಷ್ಕರಣೆ ಮಾಡಿಲ್ಲ. ಹಿಂದಿನ ಸಭೆಯಲ್ಲಿ ಅಂದಾಜಿಸಿದ್ದಂತೆ ಜಿಡಿಪಿಯು ಶೇ 7.2ರಷ್ಟು ಪ್ರಗತಿ ಕಾಣಲಿದೆ. ಚಿಲ್ಲರೆ ಹಣದುಬ್ಬರವು ಶೇ 4.5ರಷ್ಟು ಇರಲಿದೆ ಎಂದು ಹೇಳಿದೆ.

ಯುಪಿಐ ಮಿತಿ ಏರಿಕೆ ಸದ್ಯ ಯುಪಿಐ ಮೂಲಕ ₹1 ಲಕ್ಷದವರೆಗೆ ಹಣ ಪಾವತಿಗೆ ಮಿತಿ ನಿಗದಿಪಡಿಸಲಾಗಿದೆ. ಇದನ್ನು ₹5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಹೊಸ ವ್ಯವಸ್ಥೆಯು ತೆರಿಗೆ ಪಾವತಿಗಷ್ಟೇ ಸೀಮಿತವಾಗಿದೆ. ಅಕ್ಟೋಬರ್‌ 7ಕ್ಕೆ ಸಭೆ ಹಣಕಾಸು ನೀತಿ ಸಮಿತಿಯಲ್ಲಿ ಆರ್‌ಬಿಐನಿಂದ ಮೂವರು ಹಾಗೂ ಬಾಹ್ಯವಾಗಿ ಮೂವರು ಸದಸ್ಯರು ಇರುತ್ತಾರೆ. ಈ ಸಮಿತಿಯ ಕಾಲಾವಧಿ ನಾಲ್ಕು ವರ್ಷವಾಗಿದೆ. ಈಗಿನ ಸಮಿತಿಯ ಅವಧಿಯು ಅಕ್ಟೋಬರ್‌ಗೆ ಮುಕ್ತಾಯವಾಗಲಿದೆ.

ಮುಂದಿನ  ಎಂಪಿಸಿ ಸಭೆಯು ಅಕ್ಟೋಬರ್‌ 7ರಿಂದ 9ರವರೆಗೆ ನಡೆಯಲಿದೆ. ನಿಯೋಜಿತ ಪಾವತಿ ಯುಪಿಐ ಮೂಲಕ ಸಂಯೋಜಿತ ಪಾವತಿ ವ್ಯವಸ್ಥೆಗೆ ಆರ್‌ಬಿಐ ಅವಕಾಶ ಕಲ್ಪಿಸಿದೆ. ಅಂದರೆ ಒಬ್ಬರ ಬದಲಿಗೆ ಬೇರೊಬ್ಬರು ಹಣ ಪಾವತಿಸುವ ವ್ಯವಸ್ಥೆ ಇದಾಗಿದೆ.  ಉದಾಹರಣೆಗೆ ಒಂದು ಬ್ಯಾಂಕ್‌ ಖಾತೆ ಹೊಂದಿರುವ ವ್ಯಕ್ತಿಯನ್ನು ಪ್ರಾಥಮಿಕ ಬಳಕೆದಾರ ಎಂದು ಪರಿಗಣಿಸಲಾಗುತ್ತದೆ. ಈ ವ್ಯಕ್ತಿಯು ತನ್ನ ಖಾತೆಯನ್ನು ಯುಪಿಐ ಮೂಲಕ ಎರಡನೇ ವ್ಯಕ್ತಿಗೆ ಬಳಸಲು (ಯುಪಿಐ ವ್ಯವಸ್ಥೆ ಹೊಂದಿರುವವರ) ಅವಕಾಶ ಕೊಡಬಹುದಾಗಿದೆ.

ಯುಪಿಐ ಮೂಲಕ ಎಷ್ಟು ಮೊತ್ತದ ವಹಿವಾಟು ನಡೆಸಬಹುದು ಎನ್ನುವುದನ್ನು ಪ್ರಾಥಮಿಕ ಸದಸ್ಯ ನಿರ್ಧರಿಸಬಹುದಾಗಿದೆ. ಚೆಕ್‌ ತ್ವರಿತ ವಿಲೇವಾರಿ ಪ್ರಸ್ತುತ ಬ್ಯಾಂಕ್‌ಗಳು ಸಿಟಿಎಸ್‌ (ಚೆಕ್‌ ಟ್ರಂಕೇಷನ್ ಸಿಸ್ಟಂ) ಮೂಲಕ ಎರಡು ದಿನದಲ್ಲಿ ಚೆಕ್‌ ಕ್ಲಿಯರೆನ್ಸ್‌ ಮಾಡುತ್ತವೆ. ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುವ ಅವಧಿಯಲ್ಲಿಯೇ ಚೆಕ್‌ಗಳನ್ನು ಸ್ಕ್ಯಾನ್ ಮಾಡಿ ಕೆಲವೇ ಗಂಟೆಗಳಲ್ಲಿ ಅವುಗಳ ತ್ವರಿತ ವಿಲೇವಾರಿಗೆ ಆರ್‌ಬಿಐ ಕ್ರಮವಹಿಸಿದೆ. ಇದರಿಂದ ಚೆಕ್‌ ಪಾವತಿದಾರರು ಮತ್ತು ಹಣ ಪಡೆಯುವವರಿಗೆ ಅನುಕೂಲವಾಗಲಿದೆ.

2021ರಲ್ಲಿ ಸಿಟಿಎಸ್‌ ವ್ಯವಸ್ಥೆ ಜಾರಿಗೆ ಬಂದಿದೆ. ಸಿಟಿಎಸ್‌ ಸೌಲಭ್ಯದ ಚೆಕ್‌ಗಳನ್ನು ಸ್ಕ್ಯಾನ್‌ ಮಾಡಿದರೆ ಚೆಕ್‌ ಕುರಿತ ದತ್ತಾಂಶಗಳ ಮಾಹಿತಿಯು ಕ್ಲಿಯರಿಂಗ್‌ ಹೌಸ್‌ಗೆ ನೇರವಾಗಿ ಹೋಗುತ್ತದೆ. ಬೇರೆ ಖಾತೆಗೆ ಹಣ ಸಂದಾಯವಾಗುವ ಸಾಧ್ಯತೆ ಕಡಿಮೆ. 

ಚೆಕ್‌ ತ್ವರಿತ ವಿಲೇವಾರಿ
ಪ್ರಸ್ತುತ ಬ್ಯಾಂಕ್‌ಗಳು ಸಿಟಿಎಸ್‌ (ಚೆಕ್‌ ಟ್ರಂಕೇಷನ್ ಸಿಸ್ಟಂ) ಮೂಲಕ ಎರಡು ದಿನದಲ್ಲಿ ಚೆಕ್‌ ಕ್ಲಿಯರೆನ್ಸ್‌ ಮಾಡುತ್ತವೆ. ಇನ್ನು ಮುಂದೆ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುವ ಅವಧಿಯಲ್ಲಿಯೇ ಚೆಕ್‌ಗಳನ್ನು ಸ್ಕ್ಯಾನ್ ಮಾಡಿ, ಕೆಲವೇ ಗಂಟೆಗಳಲ್ಲಿ ಅವುಗಳ ತ್ವರಿತ ವಿಲೇವಾರಿಗೆ ಆರ್‌ಬಿಐ ಕ್ರಮವಹಿಸಿದೆ. ಇದರಿಂದ ಚೆಕ್‌ ಪಾವತಿದಾರರು ಮತ್ತು ಹಣ ಪಡೆಯುವವರಿಗೆ ಅನುಕೂಲವಾಗಲಿದೆ. 2021ರಲ್ಲಿ ಸಿಟಿಎಸ್‌ ವ್ಯವಸ್ಥೆ ಜಾರಿಗೆ ಬಂದಿದೆ. ಸಿಟಿಎಸ್‌ ಸೌಲಭ್ಯದ ಚೆಕ್‌ಗಳನ್ನು ಸ್ಕ್ಯಾನ್‌ ಮಾಡಿದರೆ ಚೆಕ್‌ ಕುರಿತ ದತ್ತಾಂಶಗಳ ಮಾಹಿತಿಯು ಕ್ಲಿಯರಿಂಗ್‌ ಹೌಸ್‌ಗೆ ನೇರವಾಗಿ ಹೋಗುತ್ತದೆ. ಬೇರೆ ಖಾತೆಗೆ ಹಣ ಸಂದಾಯವಾಗುವ ಸಾಧ್ಯತೆ ಕಡಿಮೆ.
ನಿಯೋಜಿತ ಪಾವತಿ
ಯುಪಿಐ ಮೂಲಕ ನಿಯೋಜಿತ ಪಾವತಿ ವ್ಯವಸ್ಥೆಗೆ ಆರ್‌ಬಿಐ ಅವಕಾಶ ಕಲ್ಪಿಸಿದೆ. ಅಂದರೆ ಒಬ್ಬರ ಬದಲಿಗೆ ಬೇರೊಬ್ಬರು ಹಣ ಪಾವತಿಸುವ ವ್ಯವಸ್ಥೆ ಇದಾಗಿದೆ. ಉದಾಹರಣೆಗೆ ಒಂದು ಬ್ಯಾಂಕ್‌ ಖಾತೆ ಹೊಂದಿರುವ ವ್ಯಕ್ತಿಯನ್ನು ಪ್ರಾಥಮಿಕ ಬಳಕೆದಾರ ಎಂದು ಪರಿಗಣಿಸಲಾಗುತ್ತದೆ. ಈ ವ್ಯಕ್ತಿಯು ತನ್ನ ಖಾತೆಯನ್ನು ಯುಪಿಐ ಮೂಲಕ ಎರಡನೇ ವ್ಯಕ್ತಿಗೆ ಬಳಸಲು (ಯುಪಿಐ ವ್ಯವಸ್ಥೆ ಹೊಂದಿದವರು) ಅವಕಾಶ ಕೊಡಬಹುದಾಗಿದೆ. ಯುಪಿಐ ಮೂಲಕ ಎಷ್ಟು ಮೊತ್ತದ ವಹಿವಾಟು ನಡೆಸಬಹುದು ಎನ್ನುವುದನ್ನು ಪ್ರಾಥಮಿಕ ಸದಸ್ಯ ನಿರ್ಧರಿಸಬಹುದಾಗಿದೆ.
ಯುಪಿಐ ಮಿತಿ ಏರಿಕೆ
ಸದ್ಯ ಯುಪಿಐ ಮೂಲಕ ₹1 ಲಕ್ಷದವರೆಗೆ ಹಣ ಪಾವತಿಗೆ ಮಿತಿ ನಿಗದಿಪಡಿಸಲಾಗಿದೆ. ಇದನ್ನು ₹5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಹೊಸ ವ್ಯವಸ್ಥೆಯು ತೆರಿಗೆ ಪಾವತಿಗಷ್ಟೇ ಸೀಮಿತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT