ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಿಲಯನ್ಸ್‌ ಜುವೆಲ್ಸ್‌ನಿಂದ ‘ಆಭಾರ್ʼ ಸಂಗ್ರಹ ಬಿಡುಗಡೆ

Published 10 ಆಗಸ್ಟ್ 2024, 19:33 IST
Last Updated 10 ಆಗಸ್ಟ್ 2024, 19:33 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ವಿಶ್ವಾಸಾರ್ಹ ಆಭರಣ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ರಿಲಯನ್ಸ್‌ ಜ್ಯುವೆಲ್ಸ್, ಹೊಸ ಆಭರಣಗಳ ಸಂಗ್ರಹವಾದ ‘ಆಭಾರ್ʼ ಅನ್ನು ಬಿಡುಗಡೆಗೊಳಿಸಿದೆ.

‘ಕಂಪನಿಯು 17ನೇ ವರ್ಷದ ಸಂಭ್ರಮದಲ್ಲಿದೆ. ಇದಕ್ಕಾಗಿ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಈ ಸಂಗ್ರಹವನ್ನು ಪರಿಚಯಿಸಲಾಗಿದೆ. ಈ ವರ್ಷದ ಸಂಗ್ರಹವು ವಿಶೇಷ ಶ್ರೇಣಿಯ ಕಿವಿಯೋಲೆಗಳನ್ನು ಒಳಗೊಂಡಿದೆ’ ಎಂದು ರಿಲಯನ್ಸ್‌ ಜ್ಯುವೆಲ್ಸ್‌ನ ಸಿಇಒ ಸುನಿಲ್‌ ನಾಯಕ್ ತಿಳಿಸಿದ್ದಾರೆ.

ಕಾಲೇಜು ವಿದ್ಯಾರ್ಥಿನಿಯರಿಗೆ ಮತ್ತು ವೃತ್ತಿಪರರಿಗೆ ಸೂಕ್ತವಾದ ಕ್ಯಾಷುವಲ್‌ ಸ್ಟಡ್‌ಗಳು ಮತ್ತು ಹೂಪ್‌ಗಳಿಂದ ಹಿಡಿದು ಸ್ತ್ರೀ ಶೈಲಿಯನ್ನು ಹೊರಸೂಸುವ ಸೊಗಸಾದ ಡ್ಯಾಂಗ್ಲರ್‌ಗಳು, ಸಾಂಪ್ರದಾಯಿಕ ಜುಮ್ಕಿಗಳಿಂದ  ಜೆ-ಬಾಲಿ ವಿನ್ಯಾಸದವರೆಗೆ ಈ ಸಂಗ್ರಹವು ಪ್ರತಿ ಮಹಿಳೆಗೂ ಆಯಾ ಸಂದರ್ಭಕ್ಕೆ ಅನುಗುಣವಾಗಿ ವಿಶಿಷ್ಟ ಶೈಲಿ ಪ್ರದರ್ಶಿಸಲು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದ್ದಾರೆ.

ಚಿನ್ನದ ಮೇಕಿಂಗ್ ಶುಲ್ಕ ಮತ್ತು ವಜ್ರದ ಮೌಲ್ಯದ ಮೇಲೆ ಶೇ 17ರಷ್ಟು ರಿಯಾಯಿತಿ ಸಿಗಲಿದೆ. ಜೊತೆಗೆ, ಸೆಪ್ಟೆಂಬರ್ 2ರ ವರೆಗೆ ₹5 ಲಕ್ಷಕ್ಕಿಂತ ಹೆಚ್ಚಿನ ಇನ್‌ವಾಯ್ಸ್‌ಗಳಿಗೆ ಹೆಚ್ಚುವರಿ ಶೇ 5ರಷ್ಟು ರಿಯಾಯಿತಿ ದೊರೆಯಲಿದೆ ಎಂದು ಕಂಪನಿ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT