ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಕ್ಕೆ ಜಿಎಸ್‌ಟಿ ಪರಿಹಾರ ಬಾಕಿ ಮೊತ್ತ ₹ 12,702 ಕೋಟಿ

2020–21: ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ಬಾಕಿ ₹ 81,179 ಕೋಟಿ
Last Updated 19 ಜುಲೈ 2021, 20:09 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರವು ವಿವಿಧ ರಾಜ್ಯಗಳಿಗೆ ಬಾಕಿ ಉಳಿಸಿಕೊಂಡಿರುವ ಜಿಎಸ್‌ಟಿ ಪರಿಹಾರ ಮೊತ್ತದಲ್ಲಿ ಕರ್ನಾಟಕಕ್ಕೆ ₹ 12,702 ಕೋಟಿ ಬರಬೇಕಿದೆ. ಅತಿ ಹೆಚ್ಚಿನ ಬಾಕಿ ಮಹಾರಾಷ್ಟ್ರಕ್ಕೆ ಬರಬೇಕಿದೆ.

2020–21ನೇ ಹಣಕಾಸು ವರ್ಷಕ್ಕೆ ಕೇಂದ್ರ ಸರ್ಕಾರವು ರಾಜ್ಯಗಳಿಗೆ ನೀಡಬೇಕಿರುವ ಜಿಎಸ್‌ಟಿ ಪರಿಹಾರದ ಬಾಕಿ ಮೊತ್ತವು ಒಟ್ಟು ₹ 81,179 ಕೋಟಿಗಳಷ್ಟಿದೆ. ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌–ಮೇ ಅವಧಿಯಲ್ಲಿ ನೀಡಬೇಕಿರುವ ಬಾಕಿಯು ₹ 55,345 ಕೋಟಿ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್‌ ಚೌಧರಿ ಅವರು ಸೋಮವಾರ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

ಹಿಂದಿನ ಹಣಕಾಸು ವರ್ಷಕ್ಕೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟಾರೆ ₹ 91 ಸಾವಿರ ಕೋಟಿ ಜಿಎಸ್‌ಟಿ ಪರಿಹಾರ ಮೊತ್ತ ಬಿಡುಗಡೆ ಮಾಡಲಾಗಿದೆ.

ಕೋವಿಡ್‌ ಸಾಂಕ್ರಾಮಿಕದಿಂದಾಗಿ ಜಿಎಸ್‌ಟಿ ಸಂಗ್ರಹ ಕಡಿಮೆ ಆಗಿದ್ದರಿಂದ ಹೆಚ್ಚಿನ ಪ್ರಮಾಣದ ಜಿಎಸ್‌ಟಿ ಪರಿಹಾರ ಮೊತ್ತದ ಅಗತ್ಯ ಎದುರಾಗಿದೆ. ಇದೇ ವೇಳೆ ಜಿಎಸ್‌ಟಿ ಪರಿಹಾರ ಸೆಸ್‌ ಸಂಗ್ರಹವೂ ಕಡಿಮೆ ಆಗಿದೆ ಎಂದು ಅವರು ಹೇಳಿದ್ದಾರೆ.

2020–21ಕ್ಕೆ ಯಾವ ರಾಜ್ಯಗಳಿಗೆ ಎಷ್ಟು ಬಾಕಿ? (ಕೋಟಿಗಳಲ್ಲಿ)
ಮಹಾರಾಷ್ಟ್ರ
; ₹ 15,138
ಕರ್ನಾಟಕ; ₹ 7,202
ಉತ್ತರಪ್ರದೇಶ; ₹7,109
ಗುಜರಾತ್; ₹ 6,583
ತಮಿಳುನಾಡು; ₹6,155
ದೆಹಲಿ; ₹5,190
ಪಶ್ಚಿಮ ಬಂಗಾಳ; ₹ 3,911
ಪಂಜಾಬ್‌; ₹ 3,752

***

2021ರ ಏಪ್ರಿಲ್‌–ಮೇ ಅವಧಿಗೆ ಬಾಕಿ (ಕೋಟಿಗಳಲ್ಲಿ)
ಮಹಾರಾಷ್ಟ್ರ;
₹ 7,995
ಕರ್ನಾಟಕ; ₹ 5,500
ಗುಜರಾತ್‌; ₹ 3,603

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT