ಮುಂಬೈ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಸೋಮವಾರ ನಡೆದ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

ಒಂದೇ ದಿನದ ವಹಿವಾಟಿನಲ್ಲಿ ರೂಪಾಯಿ ಮೌಲ್ಯ 58 ಪೈಸೆ ಕುಸಿದಿದ್ದು ಎರಡು ವರ್ಷಗಳಲ್ಲಿ ಇದೇ ಮೊದಲು. ಡಾಲರ್ ಮೌಲ್ಯವು ₹86.62ಕ್ಕೆ ಮುಟ್ಟಿದೆ. 2024ರ ಡಿಸೆಂಬರ್ 30ರಂದು ರೂಪಾಯಿ ಮೌಲ್ಯ ₹85.52 ಇತ್ತು. ಕಳೆದ ಎರಡು ವಾರದ ವಹಿವಾಟಿನಲ್ಲಿ ₹1 ಗಿಂತ ಹೆಚ್ಚು ಕುಸಿದಿದೆ.

ದೇಶದ ಈಕ್ವಿಟಿ ಮಾರುಕಟ್ಟೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಶುಕ್ರವಾರದ ವಹಿವಾಟಿನಲ್ಲಿ ₹2,254 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಇದರಿಂದ ಡಾಲರ್ ಮೌಲ್ಯ ಬಲಗೊಂಡಿದ್ದು, ರೂಪಾಯಿ ಮೌಲ್ಯ ಇಳಿಕೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ಮತ್ತೊಂದೆಡೆ ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಶೇ 1.42ರಷ್ಟು ಹೆಚ್ಚಳವಾಗಿದ್ದು, ಪ್ರತಿ ಬ್ಯಾರೆಲ್ಗೆ 80.92 ಡಾಲರ್ (₹7,005) ಆಗಿದೆ. ದೇಶೀಯ ಷೇರು ಸೂಚ್ಯಂಕಗಳ ಇಳಿಕೆಯಿಂದಾಗಿ ರೂಪಾಯಿಯು ಒತ್ತಡಕ್ಕೆ ಸಿಲುಕಿದೆ ಎಂದು ಹೇಳಿದ್ದಾರೆ.

2023ರ ಫೆಬ್ರುವರಿ 6ರಂದು ರೂಪಾಯಿ ಮೌಲ್ಯ 68 ಪೈಸೆ ಕುಸಿತವಾಗಿತ್ತು. ಇದು ದಿನವೊಂದರಲ್ಲಿ ಆಗಿರುವ ರೂಪಾಯಿ ಮೌಲ್ಯದ ಅತಿದೊಡ್ಡ ಕುಸಿತವಾಗಿದೆ. 2025ರ ಜನವರಿ 10ರ ವಹಿವಾಟಿನಲ್ಲಿ 18 ಪೈಸೆ ಇಳಿಕೆಯಾಗಿತ್ತು.

ಡಾಲರ್ ಪ್ರಾಬಲ್ಯದ ಎದುರು ರೂಪಾಯಿ ಮೌಲ್ಯವು ಕುಸಿಯುತ್ತಿರುವುದನ್ನು ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮಧ್ಯಪ್ರವೇಶಿಸುವ ಸಾಧ್ಯತೆಯಿದೆ.

ಸೋಮವಾರದ ವಹಿವಾಟಿನ ಆರಂಭದಲ್ಲಿ ₹86.12 ಇದ್ದ ರೂಪಾಯಿ ಮೌಲ್ಯವು ದಿನದ ವಹಿವಾಟಿನಲ್ಲಿ ₹86.50ಕ್ಕೆ ತಲುಪಿತ್ತು. ಬಳಿಕ ಅತಿ ಕನಿಷ್ಠ ಮಟ್ಟವಾದ ₹86.59ಕ್ಕೆ ಮುಟ್ಟಿತು.

ಅಮೆರಿಕದ ಉದ್ಯೋಗ ಮಾರುಕಟ್ಟೆಯಲ್ಲಿ ನಿರೀಕ್ಷಿಸಿದ್ದಕ್ಕಿಂತಲೂ ಉತ್ತಮ ಬೆಳವಣಿಗೆ ಆಗಿದೆ. ಅಮೆರಿಕದ ಬಾಂಡ್ಗಳ ಗಳಿಕೆಯಲ್ಲಿ ಹೆಚ್ಚಳವಾಗಿದೆ. ಇದರಿಂದ ಡಾಲರ್ ಮೌಲ್ಯ ವೃದ್ಧಿಗೊಂಡಿದೆ ಎಂದು ಹೇಳಲಾಗಿದೆ.

ಅಮೆರಿಕವು, ರಷ್ಯಾದ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಿದ್ದು, ಬ್ರೆಂಟ್ ಕಚ್ಚಾ ತೈಲದ ದರವನ್ನು ಪ್ರತಿ ಬ್ಯಾರೆಲ್ಗೆ 81 ಡಾಲರ್ಗೆ (₹7,016) ಹೆಚ್ಚಿಸಿದೆ.

ಕರಗಿದ ₹24 ಲಕ್ಷ ಕೋಟಿ ಸಂಪತ್ತು

ಮುಂಬೈ: ವಿದೇಶಿ ಬಂಡವಾಳದ ಹೊರಹರಿವು, ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಿಂದ ದೇಶದ ಷೇರು ಸೂಚ್ಯಂಕಗಳು ಸೋಮವಾರ ವಹಿವಾಟಿನಲ್ಲಿ ಶೇ 1ಕ್ಕಿಂತಲೂ ಹೆಚ್ಚು ಇಳಿಕೆ ಕಂಡಿವೆ.

ಷೇರು ಸೂಚ್ಯಂಕಗಳ ಇಳಿಕೆಯಿಂದ ಸೋಮವಾರ ಒಂದೇ ದಿನದ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ₹12 ಲಕ್ಷ ಕೋಟಿ ಕರಗಿದ್ದರೆ, ಕಳೆದ ನಾಲ್ಕು ದಿನದ ವಹಿವಾಟಿನಲ್ಲಿ ₹24.69 ಲಕ್ಷ ಕೋಟಿ ಕರಗಿದೆ. ಬಿಎಸ್ಇ ನೋಂದಾಯಿತ ಕಂಪನಿಗಳ ಮಾರುಕಟ್ಟೆ ಮೌಲ್ಯ ₹417 ಲಕ್ಷ ಕೋಟಿಗೆ ಇಳಿದಿದೆ.

ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್ಇ) ಸೆನ್ಸೆಕ್ಸ್ 1,048 ಅಂಶ (ಶೇ 1.36) ಕುಸಿತವಾಗಿ, 76,330ಕ್ಕೆ ವಹಿವಾಟು ಅಂತ್ಯಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್ಎಸ್ಇ) ನಿಫ್ಟಿ 345 ಅಂಶ (ಶೇ 1.47) ಇಳಿಕೆಯಾಗಿ, 23,085ಕ್ಕೆ ಕೊನೆಗೊಂಡಿತು.

ಜೊಮಾಟೊ ಕಂಪನಿಯ ಷೇರಿನ ಮೌಲ್ಯ ಶೇ 7ರಷ್ಟು ಇಳಿಕೆಯಾಗಿದೆ. ಪವರ್ ಗ್ರಿಡ್, ಅದಾನಿ ಪೋರ್ಟ್ಸ್, ಟಾಟಾ ಸ್ಟೀಲ್, ಎನ್ಟಿಪಿಸಿ, ಟಾಟಾ ಮೋಟರ್ಸ್, ಟೆಕ್ ಮಹೀಂದ್ರ, ಮಹೀಂದ್ರ ಆ್ಯಂಡ್ ಮಹೀಂದ್ರ, ಏಷ್ಯನ್ ಪೇಂಟ್ಸ್, ಸನ್ ಫಾರ್ಮಾ ಮತ್ತು ಅಲ್ಟ್ರಾಟೆಕ್ ಸಿಮೆಂಟ್ನ ಷೇರಿನ ಮೌಲ್ಯದಲ್ಲಿ ಇಳಿಕೆಯಾಗಿದೆ. ಎಕ್ಸಿಸ್ ಬ್ಯಾಂಕ್, ಹಿಂದುಸ್ತಾನ್ ಯುನಿಲಿವರ್, ಟಿಸಿಎಸ್ ಮತ್ತು ಇಂಡಸ್ಇಂಡ್ ಬ್ಯಾಂಕ್ ಷೇರಿನ ಮೌಲ್ಯದಲ್ಲಿ ಏರಿಕೆ ಆಗಿದೆ. ಏಷ್ಯನ್ ಮಾರುಕಟ್ಟೆಯಲ್ಲಿ ಸೋಲ್, ಶಾಂಘೈ ಮತ್ತು ಹಾಂಗ್ ಕಾಂಗ್ ನಕಾರಾತ್ಮಕ ವಹಿವಾಟಿನಲ್ಲಿ ಅಂತ್ಯಗೊಂಡಿವೆ. ಜನವರಿ ಆರಂಭದಿಂದ 10ರ ವರೆಗೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ದೇಶದ ಈಕ್ವಿಟಿ ಮಾರುಕಟ್ಟೆಯಿಂದ ₹22,194 ಕೋಟಿ ಮೌಲ್ಯದ ಬಂಡವಾಳವನ್ನು ವಾಪಸ್ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.