ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಲಯನ್ಸ್‌, ಬಿಪಿಸಿಎಲ್‌ಗೆ ಸೌದಿಯ ಹೆಚ್ಚುವರಿ ತೈಲ?

Last Updated 12 ಮಾರ್ಚ್ 2020, 19:40 IST
ಅಕ್ಷರ ಗಾತ್ರ

ಸಿಂಗಪುರ: ಸೌದಿ ಅರೇಬಿಯಾದ ಪ್ರಮುಖ ಇಂಧನ ಕಂಪನಿ ಅರಾಮ್ಕೊ, ಏಪ್ರಿಲ್‌ನಿಂದ ಉತ್ಪಾದನೆ ಮಾಡಲಿರುವ ಹೆಚ್ಚುವರಿ ತೈಲವು ಭಾರತ ಮತ್ತು ಚೀನಾದ ಕಂಪನಿಗಳಿಗೆ ಲಭ್ಯವಾಗಲಿದೆ ಎಂದು ಮೂಲಗಳು ಹೇಳಿವೆ.

ಹೆಚ್ಚುವರಿ ತೈಲವನ್ನು ತಮಗೆ ನೀಡುವಂತೆಕೊರಿಯಾ, ತೈವಾನ್‌ ಮತ್ತು ಚೀನಾದ ಕಂಪನಿಗಳು ಮಾಡಿದ್ದ ಮನವಿಯನ್ನು ಅರಾಮ್ಕೊ ತಿರಸ್ಕರಿಸಿದೆ. ಹೀಗಾಗಿ ಭಾರತ ಮತ್ತು ಚೀನಾದ ಕಂಪನಿಗಳಿಗೆ ಒಪ್ಪಿಗೆ ನೀಡುವ
ಸಾಧ್ಯತೆ ಇದೆ.

ವಿಶ್ವದಲ್ಲಿಯೇ ಅತಿದೊಡ್ಡ ತೈಲಗಾರ ಹೊಂದಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ (ಆರ್‌ಐಎಲ್‌) ಮತ್ತು ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ (ಬಿಪಿಸಿಎಲ್‌) ಕಂಪನಿಗಳಿಗೆ ತಲಾ 20 ಲಕ್ಷ ಬ್ಯಾರಲ್‌ಗಳಷ್ಟು ಕಚ್ಚಾ ತೈಲವನ್ನು ಸೌದಿ ಅರೇಬಿಯಾ ಪೂರೈಕೆ ಮಾಡಲಿದೆ.

ಈ ಕುರಿತು ಅರಾಮ್ಕೊ ಕಂಪನಿ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ರಷ್ಯಾದ ವಿರುದ್ಧ ತೈಲ ದರ ಸಮರ ಆರಂಭಿಸಿರುವ ಸೌದಿ ಅರೇಬಿಯಾ, ಏಪ್ರಿಲ್‌ನಿಂದ ಕಡಿಮೆ ದರಕ್ಕೆ ತೈಲ ಪೂರೈಸಲು ಉತ್ಪಾದನೆ ಹೆಚ್ಚಳ ಮತ್ತು ದರ ಇಳಿಕೆ ನಿರ್ಧಾರವನ್ನೂ ಈಗಾಗಲೇ ಘೋಷಿಸಿದೆ.

‘ರಷ್ಯಾ ಮತ್ತು ಅಮೆರಿಕದ ಶೆಲ್‌ ಕಂಪನಿಯ ವಿರುದ್ಧ ಸೌದಿ ಅರೇಬಿಯಾ ದರ ಸಮರಕ್ಕೆ ಪ್ರಯತ್ನಿಸುತ್ತಿದೆ’ ಎಂದು ಉತ್ತರ ಏಷ್ಯಾದ ತೈಲ ಸಂಸ್ಕರಣಾಗಾರದ ವರ್ತಕರೊಬ್ಬರು ಹೇಳಿದ್ದಾರೆ.

ಕಚ್ಚಾ ತೈಲ ದರ ಇಳಿಕೆ
ಕೊರೊನಾ-2 ಹರಡುವಿಕೆ ತಡೆಯುವ ಉದ್ದೇಶದಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಯುರೋಪ್‌ ಪ್ರಯಾಣದ ಮೇಲೆ ನಿರ್ಬಂಧ ಹೇರಿದ್ದಾರೆ. ಇದರಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಶೇ 5.6ರಷ್ಟು ಇಳಿಕೆ ಕಂಡಿತು.

ಕಡಿಮೆ ದರಕ್ಕೆ ತೈಲ ಪೂರೈಕೆ ಮಾಡುವ ಸೌದಿ ಅರೇಬಿಯಾದ ನಿರ್ಧಾರವೂ ದರ ಇಳಿಕೆಗೆ ಕಾರಣವಾಗಿದೆ.

ಬ್ರೆಂಟ್‌ ತೈಲ ದರ ಶೇ 5.6ರಷ್ಟು ಇಳಿಕೆಯಾಗಿ ಒಂದು ಬ್ಯಾರಲ್‌ಗೆ 33.78 ಡಾಲರ್‌ಗಳಿಗೆ ತಲುಪಿದೆ. ಅಮೆರಿಕದ ಕಚ್ಚಾ ತೈಲ ದರ ಶೇ 5.4ರಷ್ಟು ಇಳಿಕೆ ಕಂಡು ಒಂದು ಬ್ಯಾರಲ್‌ಗೆ 31.21 ಡಾಲರ್‌ಗಳಷ್ಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT