ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಚ್ಚಾ ತೈಲದ ಕೊರತೆ: ಅಂತರರಾಷ್ಟ್ರೀಯ ಇಂಧನ ಸಂಸ್ಥೆ

Published 13 ಸೆಪ್ಟೆಂಬರ್ 2023, 15:39 IST
Last Updated 13 ಸೆಪ್ಟೆಂಬರ್ 2023, 15:39 IST
ಅಕ್ಷರ ಗಾತ್ರ

ಪ್ಯಾರಿಸ್: ಕಚ್ಚಾ ತೈಲ ಉತ್ಪಾದನೆಯನ್ನು ತಗ್ಗಿಸಲು ಸೌದಿ ಅರೇಬಿಯಾ ಮತ್ತು ರಷ್ಯಾ ತೀರ್ಮಾನಿಸಿರುವ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ವರ್ಷಾಂತ್ಯದ ಹೊತ್ತಿಗೆ ಕಚ್ಚಾ ತೈಲದ ಕೊರತೆ ಎದುರಾಗಲಿದೆ ಎಂದು ಅಂತರರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ಹೇಳಿದೆ.

ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯನ್ನು ಹೆಚ್ಚಿಸುವ ಉದ್ದೇಶದಿಂದ ಉತ್ಪಾದನೆಯನ್ನು ಈ ವರ್ಷದ ಕೊನೆಯವರೆಗೆ ಕಡಿಮೆ ಮಾಡುವುದಾಗಿ ರಷ್ಯಾ ಮತ್ತು ಸೌದಿ ಅರೇಬಿಯಾ ಹೇಳಿವೆ. ‘ಸೆಪ್ಟೆಂಬರ್‌ನಿಂದ ಪೂರೈಕೆ ಕೊರತೆ ಆಗಲಿದೆ’ ಎಂದು ಐಇಎ ಹೇಳಿದೆ.

‘ತೈಲ ಸಂಗ್ರಹವು ಕಡಿಮೆ ಮಟ್ಟಕ್ಕೆ ಬರಲಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಅಸ್ಥಿರತೆ ನಿರ್ಮಾಣವಾಗುವ ಅಪಾಯ ಹೆಚ್ಚಲಿದೆ. ಆರ್ಥಿಕ ಪರಿಸ್ಥಿತಿ ದುರ್ಬಲವಾಗಿರುವ ಹೊತ್ತಿನಲ್ಲಿ ಈ ಅಸ್ಥಿರತೆಯು ಉತ್ಪಾದಕರಿಗೂ, ಖರೀದಿದಾರರಿಗೂ ಒಳಿತು ಮಾಡದು’ ಎಂದು ಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT