ಕೊಲಂಬೊ: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಲೈವ್ ಕಾಮೆಂಟರಿ ವೇಳೆ 'ಆಜಾದ್ ಕಾಶ್ಮೀರ' ಉಲ್ಲೇಖ ಮಾಡಿರುವ ಪಾಕಿಸ್ತಾನದ ಮಾಜಿ ನಾಯಕಿ ಸನಾ ಮಿರ್ ವಿವಾದಕ್ಕೆ ಒಳಗಾಗಿದ್ದಾರೆ.

ಸನಾ ಮಿರ್ ವಿರುದ್ಧ ಭಾರತ ಮೂಲದ ಸಾಮಾಜಿಕ ಖಾತೆಗಳಲ್ಲಿ ಭಾರಿ ಪ್ರತಿಭಟನೆ ವ್ಯಕ್ತವಾಗುತ್ತಿದ್ದು, ಐಸಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.

ಏನಿದು ವಿವಾದ?

ಕೊಲಂಬೊದಲ್ಲಿ ಗುರುವಾರ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ನಡುವೆ ನಡೆದ ಪಂದ್ಯದ ವೇಳೆ ಸನಾ, ಆಜಾದ್ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ್ದರು.

ಪಾಕಿಸ್ತಾನದ ನತಲಿಯಾ ಪರ್ವೇಜ್ ಬ್ಯಾಟಿಂಗ್ ಮಾಡಲು ಕ್ರೀಸಿಗೆ ಬಂದಾಗ ವೀಕ್ಷಕ ವಿವರಣೆ ಮಾಡುತ್ತಿದ್ದ ಸನಾ, ಆಕೆ ಆಜಾದ್ ಕಾಶ್ಮೀರ ಮೂಲದವರು ಎಂದು ಹೇಳಿಕೆ ನೀಡಿದ್ದರು.

'ಪಾಕ್ ಆಕ್ರಮಿತ ಕಾಶ್ಮೀರ'ವನ್ನು ಸನಾ ಮಿರ್ 'ಆಜಾದ್ ಕಾಶ್ಮೀರ' ಎಂದು ಉಲ್ಲೇಖಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಸಂಬಂಧ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಸನಾ ಹೇಳಿದ್ದೇನು?

ನತಾಲಿಯಾ ಕಾಶ್ಮೀರ ಮೂಲದವರು ಎಂದು ಹೇಳಿದ ಸನಾ, ತಕ್ಷಣವೇ ಆಜಾದ್ ಕಾಶ್ಮೀರ ಎಂದು ಉಲ್ಲೇಖ ಮಾಡುತ್ತಾರೆ. ಆಕೆ ಲಾಹೋರ್ಗೆ ಬಂದು ಹೆಚ್ಚು ಕ್ರಿಕೆಟ್ ಆಡುತ್ತಾರೆ ಎಂದು ಹೇಳಿದ್ದಾರೆ.

ಇದೀಗ ಕ್ರಿಕೆಟ್ ಅನ್ನು ರಾಜಕೀಯದಿಂದ ಹೊರತುಪಡಿಸಬೇಕು ಎಂದು ಹೇಳುವ ಪಾಕಿಸ್ತಾನದವರಿಂದಲೇ ಈ ರೀತಿಯ ಹೇಳಿಕೆಗಳನ್ನು ಸಮರ್ಥಿಸಲು ಸಾಧ್ಯವೇ ಎಂದು ಭಾರತದ ಮೂಲದ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಟೀಕೆ ವ್ಯಕ್ತವಾಗಿದೆ.

ಸನಾ ಮಿರ್ ಅವರನ್ನು ಐಸಿಸಿ ಕಾಮೆಂಟರಿ ಪ್ಯಾನೆಲ್ನಿಂದ ವಜಾಗೊಳಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಯೂ ವ್ಯಕ್ತವಾಗಿದೆ.

ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನ ತನ್ನೆಲ್ಲ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡುತ್ತಿದೆ. ಈ ಮಧ್ಯೆ ಪಾಕಿಸ್ತಾನ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಸೋಲನುಭವಿಸಿದೆ.

ಇತ್ತೀಚೆಗೆ ಯುಎಇನಲ್ಲಿ ಅಂತ್ಯಗೊಂಡ ಪುರುಷರ ಏಷ್ಯಾ ಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ಆಟಗಾರರೊಂದಿಗೆ ಹಸ್ತಲಾಘವ ಮಾಡಲು ಭಾರತೀಯ ಆಟಗಾರರು ನಿರಾಕರಿಸಿದ್ದರು. ಏಷ್ಯಾ ಕಪ್ ಗೆದ್ದ ಬಳಿಕ ಪಾಕಿಸ್ತಾನ ಮೂಲದ ಮೊಹಸಿನ್ ನಖ್ವಿ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಲಿಲ್ಲ. ಬಳಿಕ ನಖ್ವಿ ಟ್ರೋಫಿ ಎತ್ತಿಕೊಂಡು ಹೋಗಿರುವುದು ವಿವಾದಕ್ಕೆ ಕಾರಣವಾಗಿತ್ತು. ಮೈದಾನದಲ್ಲಿ ಪಾಕಿಸ್ತಾನದ ಆಟಗಾರರ ವರ್ತನೆಯ ಬಗ್ಗೆಯೂ ಟೀಕೆ ವ್ಯಕ್ತವಾಗಿತ್ತು.
.ICC Women's Wc | ಮರೂಫಾ ದಾಳಿ: ಬಾಂಗ್ಲಾಗೆ ಪಾಕ್ ಶರಣು.IND vs WI 1st Test: ಸಿರಾಜ್ಗೆ 4 ವಿಕೆಟ್; ವಿಂಡೀಸ್ 162ಕ್ಕೆ ಆಲೌಟ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.