ನವದೆಹಲಿ: 2025ನೇ ಸಾಲಿನ ‘ವಿಶ್ವದ ಅತ್ಯುತ್ತಮ ಗ್ರಾಹಕ ಬ್ಯಾಂಕ್’ ಮತ್ತು ‘ಭಾರತದಲ್ಲಿನ ಅತ್ಯುತ್ತಮ ಬ್ಯಾಂಕ್’ ಪ್ರಶಸ್ತಿಗೆ ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಭಾಜನವಾಗಿದೆ.

ವಿಶ್ವ ಬ್ಯಾಂಕ್, ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ವಾರ್ಷಿಕ ಸಭೆಯಲ್ಲಿ ನ್ಯೂಯಾರ್ಕ್ ಮೂಲದ ಗ್ಲೋಬಲ್ ಫೈನಾನ್ಸ್ ಸಂಸ್ಥೆ ಈ ಪ್ರಶಸ್ತಿ ಪ್ರದಾನ ಮಾಡಿದೆ.

ಈ ಎರಡು ಪ್ರಶಸ್ತಿಗಳು ನಾವೀನ್ಯ, ಆರ್ಥಿಕ ಒಳಗೊಳ್ಳುವಿಕೆ ಮತ್ತು ಗ್ರಾಹಕರಿಗೆ ಶ್ರೇಷ್ಠವಾಗಿದ್ದನ್ನು ನೀಡುವುದಕ್ಕೆ ಬದ್ಧವಾಗಿರುವ ಜಾಗತಿಕ ಬ್ಯಾಂಕಿಂಗ್ ನಾಯಕನಾಗಿ ಎಸ್ಬಿಐ ಸ್ಥಾನವನ್ನು ಸದೃಢಗೊಳಿಸುತ್ತದೆ ಎಂದು ಬ್ಯಾಂಕ್ ಗುರುವಾರ ತಿಳಿಸಿದೆ.

ಗ್ಲೋಬಲ್ ಫೈನಾನ್ಸ್ನಿಂದ ಎಸ್ಬಿಐಗೆ ಈ ಪ್ರಶಸ್ತಿ ಬಂದಿದ್ದಕ್ಕಾಗಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಪ್ರಸ್ತುತ ಬ್ಯಾಂಕ್ 52 ಕೋಟಿ ಗ್ರಾಹಕರನ್ನು ಹೊಂದಿದೆ.