ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಬಿಐ ಗೃಹ ಸಾಲದ ಬಡ್ಡಿದರ ಶೇ 0.1ರವರೆಗೂ ಇಳಿಕೆ

Last Updated 1 ಮಾರ್ಚ್ 2021, 19:32 IST
ಅಕ್ಷರ ಗಾತ್ರ

ಮುಂಬೈ: ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ತನ್ನ ಗೃಹ ಸಾಲಗಳ ಮೇಲಿನ ಬಡ್ಡಿದರವನ್ನು ಶೇ 0.1ರವರೆಗೂ ಇಳಿಕೆ ಮಾಡಿದೆ.

₹ 75 ಲಕ್ಷದವರೆಗಿನ ಮೊತ್ತದ ಗೃಹ ಸಾಲಕ್ಕೆ ಶೇ 6.70ರಷ್ಟು ಬಡ್ಡಿದರ ಇರಲಿದೆ. ₹ 75 ಲಕ್ಷದಿಂದ ₹ 5 ಕೋಟಿಗಳವರೆಗಿನ ಗೃಹ ಸಾಲದ ಮೊತ್ತಕ್ಕೆ ಶೇ 6.75ರಷ್ಟು ಬಡ್ಡಿದರ ನೀಡಬೇಕಾಗುತ್ತದೆ ಎಂದು ಬ್ಯಾಂಕ್‌ ತಿಳಿಸಿದೆ.

ಹೊಸ ಬಡ್ಡಿದರಗಳು ಸಾಲದ ಮೊತ್ತ ಮತ್ತು ಸಿಬಿಲ್‌ ಸ್ಕೋರ್‌ ಆಧರಿಸಿದ್ದು, ಮಾರ್ಚ್‌ 31ರವರೆಗೂ ಲಭ್ಯವಿರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಹಬ್ಬದ ಋತುವಿನ ಅದರಲ್ಲಿಯೂ ವಿಶೇಷವಾಗಿ ಹೋಳಿಯ ಲಾಭವನ್ನು ಪಡೆಯಲು ನಾವು ಬಯಸುತ್ತೇವೆ’ ಎಂದು ಬ್ಯಾಂಕ್‌ನ ರಿಟೇಲ್‌ ವಹಿವಾಟಿನ ಉಪ ವ್ಯವಸ್ಥಾಪಕ ನಿರ್ದೇಶಕ ಸಲೋನಿ ನಾರಾಯಣ್ ತಿಳಿಸಿದ್ದಾರೆ.

ಸಂಸ್ಕರಣಾ ಶುಲ್ಕದಲ್ಲಿ ಶೇ 100 ರಷ್ಟು ವಿನಾಯಿತಿಯನ್ನೂ ಬ್ಯಾಂಕ್‌ ನೀಡುತ್ತಿದೆ.

ಯುನೊ ಆ್ಯಪ್‌ ಬಳಸಿ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಿದರೆ ಬಡ್ಡಿದರದಲ್ಲಿ ಹೆಚ್ಚುವರಿಯಾಗಿ ಶೇ 0.05ರಷ್ಟು ರಿಯಾಯಿತಿ ಸಿಗಲಿದೆ.

ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಹಿಳೆಯರಿಗೆ ಶೇ 0.05ರಷ್ಟು ವಿಶೇಷ ರಿಯಾಯಿತಿ ಕೊಡುಗೆಯನ್ನೂ ಬ್ಯಾಂಕ್‌ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT