ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಗ್ಗಿದ ಜಿಡಿಪಿ ಕುಸಿತ; ಹೊಸ ಎತ್ತರಕ್ಕೆ ಷೇರುಪೇಟೆ

ಕೋವಿಡ್‌ ಲಸಿಕೆ ಸಿಗುವ ಭರವಸೆ
Last Updated 1 ಡಿಸೆಂಬರ್ 2020, 15:10 IST
ಅಕ್ಷರ ಗಾತ್ರ

ಮುಂಬೈ: ಎರಡನೇ ತ್ರೈಮಾಸಿಕಕ್ಕೆ ಸಂಬಂಧಿಸಿದ ಜಿಡಿಪಿ ಅಂಕಿ–ಅಂಶಗಳು ಮಾರುಕಟ್ಟೆಯ ನಿರೀಕ್ಷೆಗಿಂತಲೂ ಉತ್ತಮವಾಗಿದ್ದುದು, ಕೋವಿಡ್‌–19ಕ್ಕೆ ಲಸಿಕೆ ಅಭಿವೃದ್ಧಿಯಲ್ಲಿ ಆಗಿರುವ ಬೆಳವಣಿಗೆಯ ಕಾರಣಗಳಿಂದಾಗಿ ದೇಶದ ಷೇರುಪೇಟೆಗಳು ಮಂಗಳವಾರದ ವಹಿವಾಟಿನಲ್ಲಿ ಹೊಸ ಎತ್ತರವನ್ನು ತಲುಪಿದವು.

ಡಾಲರ್‌ ಎದುರು ರೂಪಾಯಿ ಮೌಲ್ಯ ಹೆಚ್ಚಳ ಹಾಗೂ ವಿದೇಶಿ ಬಂಡವಾಳ ಒಳಹರಿವು ಸಹ ಸಕಾರಾತ್ಮಕ ವಹಿವಾಟಿಗೆ ಕಾರಣವಾದವು ಎಂದು ವರ್ತಕರು ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 506 ಅಂಶ ಜಿಗಿತ ಕಂಡು ಗರಿಷ್ಠ ಮಟ್ಟವಾದ 44,655 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 140 ಅಂಶ ಹೆಚ್ಚಾಗಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 13,109 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಸನ್‌ ಫಾರ್ಮಾ ಷೇರು ಶೇಕಡ 5.51ರಷ್ಟು ಗರಿಷ್ಠ ಏರಿಕೆ ಕಂಡಿತು. ಇಂಡಸ್‌ಇಂಡ್‌ ಬ್ಯಾಂಕ್‌, ಟೆಕ್‌ ಮಹೀಂದ್ರ, ಒಎನ್‌ಜಿಸಿ, ಭಾರ್ತಿ ಏರ್‌ಟೆಲ್‌, ಇನ್ಫೊಸಿಸ್‌, ಐಸಿಐಸಿಐ ಬ್ಯಾಂಕ್‌ ಮತ್ತು ಬಜಾಜ್‌ ಆಟೊ ಕಂಪನಿ ಷೇರುಗಳು ಗಳಿಕೆ ಕಂಡಿವೆ.

ಚೀನಾದ ಫ್ಯಾಕ್ಟರಿ ಉತ್ಪಾದನೆಯು ಚೇತರಿಕೆ ಕಂಡಿದೆ. ಇದರಿಂದಾಗಿ ಜಾಗತಿಕ ಷೇರುಪೇಟೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದವು.

ಕೊರೊನಾ ವೈರಸ್‌ಗೆ ಲಸಿಕೆ ಅಭಿವೃದ್ಧಿಯಲ್ಲಿ ಆಗಿರುವ ಮುನ್ನಡೆಯ ಕಾರಣದಿಂದಾಗಿ ಜಾಗತಿಕ ಮಟ್ಟದಲ್ಲಿ ಬಹುತೇಕ ಷೇರುಪೇಟೆಗಳು ಸಕಾರಾತ್ಮಕವಾಗಿ ಡಿಸೆಂಬರ್‌ ತಿಂಗಳ ವಹಿವಾಟು ಆರಂಭಿಸಿದವು. ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ಗಳತ್ತ ಹೂಡಿಕೆದಾರರು ಗಮನ ಹರಿಸಿರುವುದರಿಂದ ಈ ಸಕಾರಾತ್ಮಕ ಚಲನೆಯು ಅಲ್ಪಾವಧಿಯಲ್ಲಿ ಸ್ಥಿರವಾಗಿರುವ ನಂಬಿಕೆ ಇದೆ ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ಬಿಎಸ್‌ಇ ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ ಶೇ 0.94ರವರೆಗೂ ಏರಿಕೆ ಕಂಡಿವೆ. ಡಾಲರ್‌ ಎದುರು ರೂಪಾಯಿ ಮೌಲ್ಯ 37 ಪೈಸೆ ಹೆಚ್ಚಾಗಿ ಒಂದು ಡಾಲರ್‌ಗೆ ₹ 73.68ರಂತೆ ವಿನಿಮಯಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT