ಮುಂಬೈ: ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರವಾಗಿದ್ದರೂ, ಐ.ಟಿ ಮತ್ತು ತೈಲ ಕಂಪನಿಗಳ ಷೇರು ಖರೀದಿ ಹೆಚ್ಚಳದಿಂದ ದೇಶದ ಷೇರುಪೇಟೆ ಸೂಚ್ಯಂಕಗಳು ಸೋಮವಾರದ ವಹಿವಾಟಿನಲ್ಲಿ ಶೇ 1ರವರೆಗೆ ಏರಿಕೆ ಕಂಡಿವೆ.

ಏಷ್ಯಾದ ಮಾರುಕಟ್ಟೆಗಳು ಗಳಿಕೆ ಕಂಡಿರುವುದು ಮತ್ತು ಬ್ರೆಂಟ್ ಕಚ್ಚಾ ತೈಲದ ಬೆಲೆ ಇಳಿಕೆಯಾಗಿರುವುದು ದೇಶದ ಷೇರು ಸೂಚ್ಯಂಕಗಳ ಏರಿಕೆಗೆ ನೆರವಾಗಿವೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 677 ಅಂಶ (ಶೇ 0.84) ಏರಿಕೆಯಾಗಿ, 81,796ಕ್ಕೆ ವಹಿವಾಟು ಅಂತ್ಯಗೊಂಡಿದೆ. ದಿನದ ವಹಿವಾಟಿನ ನಡುವಿನಲ್ಲಿ 747 ಅಂಶದವರೆಗೆ (ಶೇ 0.92) ಜಿಗಿತ ಕಂಡಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 227 ಅಂಶ (ಶೇ 0.92) ಹೆಚ್ಚಳವಾಗಿ, 24,946ಕ್ಕೆ ಕೊನೆಗೊಂಡಿದೆ.

ಸೆನ್ಸೆಕ್ಸ್ ಗುಚ್ಛದ ಕಂಪನಿಗಳಲ್ಲಿ ಅಲ್ಟ್ರಾಟೆಕ್ ಸಿಮೆಂಟ್, ಟೆಕ್ ಮಹೀಂದ್ರ, ಎಚ್ಸಿಎಲ್ ಟೆಕ್, ಟಿಸಿಎಸ್, ಎಟರ್ನಲ್, ಏಷ್ಯನ್ ಪೇಂಟ್ಸ್, ಟಾಟಾ ಸ್ಟೀಲ್ ಮತ್ತು ಕೋಟಕ್ ಮಹೀಂದ್ರ ಬ್ಯಾಂಕ್ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ. ಟಾಟಾ ಮೋಟರ್ಸ್, ಅದಾನಿ ಪೋರ್ಟ್ಸ್ ಮತ್ತು ಸನ್ ಫಾರ್ಮಾ ಷೇರಿನ ಮೌಲ್ಯದಲ್ಲಿ ಇಳಿಕೆಯಾಗಿದೆ.

ಏಷ್ಯಾದ ಮಾರುಕಟ್ಟೆಯಲ್ಲಿ ದಕ್ಷಿಣ ಕೊರಿಯಾದ ಕೊಸ್ಪಿ, ಜಪಾನ್ನ ನಿಕ್ಕೈ, ಶಾಂಘೈನ ಕಾಂಪೊಸಿಟ್ ಇಂಡೆಕ್ಸ್ ಮತ್ತು ಹಾಂಗ್ಕಾಂಗ್ನ ಹ್ಯಾಂಗ್ ಸೆಂಗ್ ಸಕಾರಾತ್ಮಕ ವಹಿವಾಟು ನಡೆಸಿವೆ.

‘ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಬಿಕ್ಕಟ್ಟಿನಿಂದ ಜಾಗತಿಕ ಅನಿಶ್ಚಿತತೆ ಉಂಟಾಗಿದ್ದರೂ, ದೇಶದ ಷೇರುಪೇಟೆ ಚೇತರಿಕೆ ಕಂಡಿದೆ’ ಎಂದು ಆಶಿಕಾ ಸ್ಟಾಕ್ ಬ್ರೋಕಿಂಗ್ ಸಮೂಹದ ವಿಶ್ಲೇಷಕ ಸುಂದರ್ ಕೇವತ್ ಹೇಳಿದ್ದಾರೆ.

‘ಇಸ್ರೇಲ್ ಮತ್ತು ಇರಾನ್ ನಡುವಿನ ಬಿಕ್ಕಟ್ಟಿನ ನಡುವೆಯೂ ದೇಶದ ಷೇರು ಸೂಚ್ಯಂಕಗಳು ಏರಿಕೆ ಕಂಡಿವೆ. ಲಾರ್ಜ್ಕ್ಯಾಪ್ ಕಂಪನಿಗಳ ಷೇರು ಗಳಿಕೆಯು ಸೂಚ್ಯಂಕದ ಏರಿಕೆಗೆ ನೆರವಾದವು. ಜಾಗತಿಕ ಚಂಚಲತೆಯ ಸ್ಥಿತಿಯಿಂದಾಗಿ ಹೂಡಿಕೆದಾರರು ದೀರ್ಘಾವಧಿಗೆ ಹೂಡಿಕೆ ಮಾಡಲು ಮುಂದಾಗಿದ್ದಾರೆ’ ಎಂದು ಜಿಯೋಜಿತ್ ಇನ್ವೆಸ್ಟ್ಮೆಂಟ್ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಬೆಳವಣಿಗೆಯು ಮುಂದಿನ ದಿನಗಳಲ್ಲಿ ಮಾರುಕಟ್ಟೆ ಮೇಲೆ ಪ್ರಭಾವ ಬೀರುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

ಕಚ್ಚಾ ತೈಲ ದರ ಇಳಿಕೆ

ಮುಂಬೈ/ಲಂಡನ್ (ರಾಯಿಟರ್ಸ್/ಎಎಫ್ಪಿ): ಜಾಗತಿಕ ಮಾರುಕಟ್ಟೆಯಲ್ಲಿ ಸೋಮವಾರ ಬ್ರೆಂಟ್ ಕಚ್ಚಾ ತೈಲ ದರವು ಶೇ 0.81ರಷ್ಟು ಇಳಿಕೆಯಾಗಿದೆ. ಪ್ರತೀ ಬ್ಯಾರೆಲ್ ದರ 73.63 ಡಾಲರ್ ಆಗಿದೆ. ಇರಾನ್–ಇಸ್ರೇಲ್ ಸಂಘರ್ಷದಿಂದ ಶುಕ್ರವಾರದ ವಹಿವಾಟಿನಲ್ಲಿ ಕಚ್ಚಾ ತೈಲ ದರವು ಪ್ರತಿ ಬ್ಯಾರೆಲ್ಗೆ 78.50 ಡಾಲರ್ವರೆಗೂ ಏರಿಕೆಯಾಗಿತ್ತು. ಆದರೆ ವಹಿವಾಟಿನ ಅಂತ್ಯದ ವೇಳೆಗೆ 74.23 ಡಾಲರ್ ಆಗಿತ್ತು. ಗುರುವಾರದ ವಹಿವಾಟಿನಲ್ಲಿ ಪ್ರತಿ ಬ್ಯಾರೆಲ್ ದರವು 68.77 ಡಾಲರ್ ಇತ್ತು. ಇಸ್ರೇಲ್–ಇರಾನ್ ಸಂಘರ್ಷ ವಿಸ್ತರಿಸುತ್ತದೆ ಎನ್ನುವ ಭೀತಿ ಕಡಿಮೆ ಆಗಿದೆ. ಹೀಗಾಗಿ ತೈಲ ದರವು ಇಳಿಕೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.