ಅಮೆರಿಕ–ಭಾರತ ನಡುವಿನ ವ್ಯಾಪಾರ ಒಪ್ಪಂದವು ಬಂಡವಾಳ ಮಾರುಕಟ್ಟೆಗಳ ಮೇಲಿದ್ದ ತೂಗುಕತ್ತಿಯೊಂದನ್ನು ಇನ್ನಿಲ್ಲವಾಗಿಸಿದೆ. ಒಳ್ಳೆಯ ಬಜೆಟ್ ನಂತರದಲ್ಲಿ ಇದು ಘೋಷಣೆ ಆಗಿದೆ. ಇದು ಬಂಡವಾಳದ ಹರಿಯುವಿಕೆಯ ಬಗ್ಗೆ ಸ್ಪಷ್ಟತೆ ನೀಡುತ್ತಿದೆ.
– ಎ. ಬಾಲಸುಬ್ರಮಣಿಯನ್ ಆದಿತ್ಯ ಬಿರ್ಲಾ ಸನ್‌ಲೈಫ್ ಎಎಂಸಿ ಲಿ. ಕಂಪನಿಯ ಸಿಇಒ
ಒಪ್ಪಂದದಿಂದಾಗಿ ವಾಹನ ಬಿಡಿಭಾಗ ರಕ್ಷಣೆ ಜವಳಿ ಗ್ರಾಹಕ ಬಳಕೆ ಉಪಕರಣಗಳು ಇಎಂಎಸ್ ಐ.ಟಿ ಸೇವೆಗಳ ವಲಯಕ್ಕೆ ಅನುಕೂಲ ಆಗಲಿದೆ. ಹಣಕಾಸು ವಲಯ ಕೂಡ ಪ್ರಯೋಜನ ಪಡೆಯಬಹುದು.
– ಸಿದ್ಧಾರ್ಥ ಖೇಮ್ಕ ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ ಲಿ. ಕಂಪನಿಯ ಸಂಪತ್ತು ನಿರ್ವಹಣಾ ವಿಭಾಗದ ಸಂಶೋಧನಾ ಮುಖ್ಯಸ್ಥ
ಸಂಪತ್ತು ₹12.10 ಲಕ್ಷ ಕೋಟಿ ಏರಿಕೆ
ಷೇರುಪೇಟೆ ಸೂಚ್ಯಂಕಗಳ ಜಿಗಿತದ ಪರಿಣಾಮವಾಗಿ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ ₹12.10 ಲಕ್ಷ ಕೋಟಿಯಷ್ಟು ಹೆಚ್ಚಳ ಆಗಿದೆ. ಬಿಎಸ್‌ಇ ನೋಂದಾಯಿತ ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯವು ₹467 ಲಕ್ಷ ಕೋಟಿಗೆ ಹೆಚ್ಚಳ ಕಂಡಿದೆ.