ನವದೆಹಲಿ: ಎಚ್ಸಿಎಲ್ ಟೆಕ್ನಾಲಜೀಸ್ ನಿರ್ದೇಶಕರ ಮಂಡಳಿಯ ಅಧ್ಯಕ್ಷ ಶಿವ ನಡಾರ್ ಅವರು ಹುದ್ದೆ ತ್ಯಜಿಸಿದ್ದಾರೆ. ಅವರ ಮಗಳು ರೋಶನಿ ನಡಾರ್ ಅವರು ಹುದ್ದೆಯನ್ನು ಅಲಂಕರಿಸಿದ್ದಾರೆ.

‘ಶಿವ ನಡಾರ್ ಅವರು ಹುದ್ದೆ ತ್ಯಜಿಸುವ ಇಚ್ಚೆ ವ್ಯಕ್ತಪಡಿಸಿದ್ದರಿಂದ ನಿರ್ದೇಶಕರ ಮಂಡಳಿಯು ರೋಶನಿ ನಡಾರ್ ಮಲ್ಹೊತ್ರಾ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಜುಲೈ 17ರಿಂದಲೇ ಇದು ಜಾರಿಗೆ ಬರಲಿದೆ’ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

‘ಶಿವ ನಡಾರ್ ಅವರು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಮುಂದುವರಿಯಲಿದ್ದು, ಮುಖ್ಯ ಕಾರ್ಯತಂತ್ರ ಅಧಿಕಾರಿಯಾಗಿರಲಿದ್ದಾರೆ’ ಎಂದೂ ಪ್ರಕಟಣೆ ತಿಳಿಸಿದೆ.

ಜೂನ್ನಲ್ಲಿ ಕೊನೆಗೊಂಡ ತ್ರೈಮಾಸಿಕದಲ್ಲಿ ಎಚ್ಸಿಎಲ್ ಟೆಕ್ನಾಲಜೀಸ್ ನಿವ್ವಳ ಲಾಭದಲ್ಲಿ ಶೇ 7.3ರಷ್ಟು ಕುಸಿತ ದಾಖಲಾಗಿತ್ತು. ಈ ತ್ರೈಮಾಸಿಕ ಅವಧಿಯಲ್ಲಿ ಕಂಪನಿಯ ನಿವ್ವಳ ಲಾಭ ₹2,925 ಕೋಟಿ ಆಗಿದ್ದರೆ, ಮಾರ್ಚ್ಗೆ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ ಕಂಪನಿಯ ನಿವ್ವಳ ಲಾಭ ₹3,154 ಕೋಟಿ ಆಗಿತ್ತು.

ಆದಾಯವೂ ಶೇ 4ರಷ್ಟು ಕುಸಿತವಾಗಿತ್ತು. ಹಿಂದಿನ ತ್ರೈಮಾಸಿಕದಲ್ಲಿ ₹18,590 ಕೋಟಿ ನಿವ್ವಳ ಆದಾಯ ಇದ್ದರೆ ಜೂನ್ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ₹17,841 ಕೋಟಿ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.