ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ | 'ಗೃಹ ಸಾಲ ಪಡೆಯಲು ಟೌನ್‌ ನಿವೇಶನವೇ ಆಗಬೇಕಿಲ್ಲ'

Last Updated 30 ಜೂನ್ 2020, 19:45 IST
ಅಕ್ಷರ ಗಾತ್ರ

* ನಾನು ಪೊಲೀಸ್‌ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ ಹಳ್ಳಿ ಜೀವನ ಎಂದರೆ ಇಷ್ಟ. ಆದ್ದರಿಂದ ನನ್ನ ಕೆಲಸಕ್ಕೆ ಓಡಾಲು ಅನುಕೂಲವಾಗುವಂತೆ ನಮ್ಮ ಊರಿನ ಪಕ್ಕದ ರಾಜ್ಯ ಹೆದ್ದಾರಿಯಲ್ಲಿ 2014ನೇ ಸಾಲಿನಲ್ಲಿ 13 ಗುಂಟೆ ಜಾಗವನ್ನು ₹ 3.50 ಲಕ್ಷಕ್ಕೆ ನನ್ನ ಅಣ್ಣ ಹಾಗೂ ನನ್ನ ಹೆಸರಿಗೆ ಜಂಟಿ ಕ್ರಯಪತ್ರ ಮಾಡಿಕೊಂಡಿದ್ದೇವೆ. ನನ್ನ ಅಣ್ಣ ಶಿಕ್ಷಣ ಇಲಾಖೆಯಲ್ಲಿ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದಾನೆ. ನನಗೆ ಆಶ್ಚರ್ಯವೆಂದರೆ ಯಾವ ಬ್ಯಾಂಕ್‌ನಲ್ಲಿ ಕೇಳಿದರೂ ಮನೆ ಸಾಲ ಪಡೆಯಲು ಟೌನ್‌ನಲ್ಲಿ ನಿವೇಶನ ಬೇಕು ಎನ್ನುತ್ತಾರೆ. ನಮ್ಮಿಬ್ಬರಿಂದ ₹ 15 ಲಕ್ಷ ಸಾಲ ಸಿಕ್ಕಿದರೆ ಸಾಕು. ಮಾರ್ಗದರ್ಶನ ಮಾಡಿ.

-ಎ.ಎಂ. ಮೋಹನ್‌ ಕುಮಾರ್, ಸಿಂದನಹಳ್ಳಿ, ಹೊಳೇನರಸೀಪುರ

ಉತ್ತರ: ಗೃಹ ಸಾಲ ಪಡೆಯಲು ಟೌನ್‌ ನಿವೇಶನವೇ ಆಗಬೇಕು ಎನ್ನುವ ಕಾನೂನು ಇರುವುದಿಲ್ಲ. ನಿವೇಶನವು ಭೂ ಪರಿವರ್ತನೆ (ನಾನ್ ಅಗ್ರಿಕಲ್ಚರ್‌) ಆಗಿರಬೇಕು. ರೆವಿನ್ಯೂ ನಿವೇಶನ ಆಗಿರಬಾರದು. ಜತೆಗೆ ಸಾಲ ಪಡೆಯುವವರು ಸಾಲ ಮರುಪಾವತಿಸುವ ಸಾಮರ್ಥ್ಯ ಹೊಂದಿರಬೇಕು. ಗೃಹ ಸಾಲ ಪಡೆಯುವಾಗ ನಿವೇಶನದ ಕಾಗದದ ಪತ್ರ ಬ್ಯಾಂಕಿಗೆ ಒದಗಿಸಬೇಕು. ಹಾಗೂ ಜಾಗವನ್ನು ಬ್ಯಾಂಕಿಗೆ ಅಡಮಾನ ಮಾಡಬೇಕು. ಜಾಮೀನು ಕೂಡಾ ಅವಶ್ಯವಿಲ್ಲ. ನೀವಿಬ್ಬರೂ ಸರ್ಕಾರಿ ನೌಕರರಾಗಿದ್ದು, ನಿಮಗೆ ಗೃಹ ಸಾಲ ಬ್ಯಾಂಕಿನಿಂದ ಪಡೆಯಲು ಸಾಧ್ಯವಿಲ್ಲ ಎಂದು ಕೇಳಿ ಆಶ್ಚರ್ಯವಾಯಿತು. ಗೃಹ ಸಾಲ ಆದ್ಯತಾರಂಗದ ವ್ಯಾಪ್ತಿಯಲ್ಲಿ ಇರುವುದರಿಂದ ಬ್ಯಾಂಕ್‌ಗಳು ಅರ್ಹ ವ್ಯಕ್ತಿಗಳಿಗೆ ನಿರಾಕರಿಸುವಂತಿಲ್ಲ. ಮತ್ತೊಮ್ಮೆ ನಿಮ್ಮ ಸಂಬಳ ಪಡೆಯುವ ಬ್ಯಾಂಕ್‌ ಅನ್ನು ವಿಚಾರಿಸಿ.

* ನನಗೆ ಬಳುವಳಿಯಾಗಿ ಬಂದ ₹ 20 ಲಕ್ಷ ಕರ್ನಾಟಕ ವಿಕಾಸ ಬ್ಯಾಂಕ್‌ನಲ್ಲಿ ಒಂದು ವರ್ಷದ ಅವಧಿಗೆ ಇರಿಸಿದ್ದೇನೆ. ಬ್ಯಾಂಕ್‌ಗಳು ಸಂಕಷ್ಟಕ್ಕೆ ಸಿಲುಕಿದಲ್ಲಿ ಅಥವಾ ದಿವಾಳಿ ಆದಲ್ಲಿ ಡಿಪಾಸಿಟ್‌ ಇನ್ಶುರೆನ್ಸ್‌ ಪ್ರಕಾರ ಗ್ರಾಹಕರಿಗೆ ₹ 5 ಲಕ್ಷ ಮಾತ್ರ ಬರುತ್ತದೆ ಎಂದು ಪತ್ರಿಕೆಗಳಲ್ಲಿ ಬರುತ್ತಿದೆ. ನನ್ನ ಠೇವಣಿಗೆ ಸುರಕ್ಷತೆ ಇದೆಯೇ. ಇದಕ್ಕೆ ಪರಿಹಾರವೇನು?

- ವೇದಾವತಿ, ಲಕ್ಷ್ಮೇಶ್ವರ

ಉತ್ತರ: ಕರ್ನಾಟಕ ವಿಕಾಸ ಬ್ಯಾಂಕ್‌ ಸರ್ಕಾರಿ ಸ್ವಾಮ್ಯದ ಗ್ರಾಮೀಣ ಬ್ಯಾಂಕ್‌ ಆಗಿದ್ದು, ನನಗೆ ತಿಳಿದಂತೆ ಈ ಬ್ಯಾಂಕ್‌ನಲ್ಲಿ ಹಣವಿರಿಸಲು ಭಯಪಡುವ ಅಗತ್ಯವಿಲ್ಲ. ಬ್ಯಾಂಕ್‌ ದಿವಾಳಿಯಾದಲ್ಲಿಗ್ರಾಹಕರಿಗೆ ನೀಡುವ ವಿಮೆ ಮೊತ್ತ ₹ 1 ಲಕ್ಷದಿಂದ ₹ 5 ಲಕ್ಕಕ್ಕೆ ಹೆಚ್ಚಿಸಲಾಗಿದೆ. ಎಲ್ಲಾ ಮೊಟ್ಟೆಗಳನ್ನೂ ಒಂದೇ ಬುಟ್ಟಿಯಲ್ಲಿ ಇರಿಸಬಾರದು ಎನ್ನುವ ಗಾದೆ ಮಾತಿನಂತೆ, ನೀವು ಒಂದು ವರ್ಷದ ನಂತರ ₹ 20 ಲಕ್ಷವನ್ನು ವಿಂಗಡಿಸಿ 4–5 ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಿ. ಒಟ್ಟಿನಲ್ಲಿ ಗಾಬರಿ ಆಗುವ ಅವಶ್ಯಕತೆ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT