ನವದೆಹಲಿ: ದೇಶೀಯ ಸಗಟು ಮಾರುಕಟ್ಟೆಯಲ್ಲಿ ಟನ್ ಉಕ್ಕು ಬೆಲೆಯು ₹47 ಸಾವಿರದಿಂದ ₹48 ಸಾವಿರದವರೆಗೆ ಮಾರಾಟವಾಗುತ್ತಿದೆ. ಈ ಬೆಲೆ ಇಳಿಕೆ ಐದು ವರ್ಷದ ಕನಿಷ್ಠ ಮಟ್ಟದ್ದಾಗಿದೆ ಎಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆ ಬಿಗ್ಮಿಂಟ್ ಶುಕ್ರವಾರ ತಿಳಿಸಿದೆ.

ಹಾಟ್ ರೋಲ್ಡ್ ಕಾಯಿಲ್ (ಎಚ್ಆರ್ಸಿ) ಪ್ರತಿ ಟನ್ಗೆ ₹47,150, ಟಿಎಂಟಿ ಬಾರ್ಗಳು (ರಿ-ಬಾರ್) ₹46,500ರಿಂದ ₹47 ಸಾವಿರದಂತೆ ಸಗಟು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. 2020ರಲ್ಲಿ ಪ್ರತಿ ಟನ್ ಹಾಟ್ ರೋಲ್ಡ್ ಕಾಯಿಲ್ ಬೆಲೆ ₹46 ಸಾವಿರ ಇದ್ದರೆ, ಬಾರ್ಗಳು ಟನ್ಗೆ ₹45 ಸಾವಿರದಷ್ಟಿತ್ತು ಎಂದು ತಿಳಿಸಿದೆ.

ರಫ್ತು ಪ್ರಮಾಣ ಮಂದಗೊಂಡಿರುವುದು, ಹೆಚ್ಚಿದ ಆಮದು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಉಕ್ಕಿನ ಹೆಚ್ಚಿನ ಪೂರೈಕೆಯೇ ದರ ಇಳಿಕೆಗೆ ಕಾರಣ ಎಂದು ತಿಳಿಸಿದೆ.

ಸರ್ಕಾರ ವಿವಿಧ ಕ್ರಮ ತೆಗೆದುಕೊಂಡಿದ್ದರೂ, ಉಕ್ಕು ಆಮದು ಪ್ರಮಾಣ ಸಕ್ರಿಯವಾಗಿದೆ. ಚೀನಾದಂತಹ ದೇಶಗಳ ರಫ್ತು ಹೆಚ್ಚಳದಿಂದಾಗಿ ದೇಶದ ಉಕ್ಕಿನ ರಫ್ತು ತೀವ್ರವಾಗಿ ಕುಸಿದಿದೆ ಎಂದು ತಿಳಿಸಿದೆ.

ಅಕ್ಟೋಬರ್ 27ರಂದು ನವದೆಹಲಿಯಲ್ಲಿ ಕೇಂದ್ರ ಉಕ್ಕು ಸಚಿವಾಲಯವು ಉಕ್ಕು ಆಮದು ಸಂಬಂಧಿತ ಸಮಸ್ಯೆಗಳನ್ನು ಚರ್ಚಿಸಲು ಉದ್ಯಮದ ಪಾಲುದಾರರೊಂದಿಗೆ ಮಾತುಕತೆ ನಡೆಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.