ಶನಿವಾರ, ಮೇ 15, 2021
25 °C

ಸೌದಿ ಅರೇಬಿಯಾ- ರಷ್ಯಾ ಮಧ್ಯೆ ಬೆಲೆ ಸಮರ: ಕಚ್ಚಾ ತೈಲ ಬೆಲೆ ಗಮನಾರ್ಹ ಏರಿಕೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಗುರುವಾರ ಗಮನಾರ್ಹ ಏರಿಕೆ ಕಂಡಿತು.

ತೈಲ ಉತ್ಪಾದನೆ ಕಡಿಮೆ ಮಾಡುವ ಕುರಿತು ಸೌದಿ ಅರೇಬಿಯಾ ಮತ್ತು ರಷ್ಯಾ ಮಧ್ಯೆ ನಡೆಯುತ್ತಿರುವ ತೈಲ ಬೆಲೆ ಸಮರವು ಸದ್ಯದಲ್ಲಿಯೇ ಕೊನೆಗೊಳ್ಳಲಿರುವುದನ್ನು ತಾವು ನಿರೀಕ್ಷಿಸುತ್ತಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಟ್ವೀಟ್‌ ಮಾಡಿದ್ದರು. ಇದರಿಂದಾಗಿ ಬೆಲೆ ಹಠಾತ್ತನೆ ಶೇ 30ರಷ್ಟು ಏರಿಕೆ ದಾಖಲಿಸಿತು. ಬ್ರೆಂಟ್‌ ನಾರ್ತ್‌ ಸೀ  ತೈಲ ಬೆಲೆ ಪ್ರತಿ ಬ್ಯಾರಲ್‌ಗೆ 36.29 ಡಾಲರ್‌ನಂತೆ ಏರಿಕೆ ಕಂಡಿತು.

ತುರ್ತು ಸಭೆ ಕರೆದ ಸೌದಿ: ತೈಲ ಬೆಲೆಯಲ್ಲಿ ಸ್ಥಿರತೆ ತರಲು ತೈಲೋತ್ಪನ್ನಗಳನ್ನು ರಫ್ತು ಮಾಡುವ ದೇಶಗಳ ಸಂಘಟನೆ (ಒಪೆಕ್‌) ಮತ್ತು ಇತರ ತೈಲ ಉತ್ಪಾದನಾ ದೇಶಗಳ ತುರ್ತು ಸಭೆ ಆಯೋಜಿಸಲು ಸೌದಿ ಅರೇಬಿಯಾ ಕರೆ ನೀಡಿದೆ. ಸೌದಿ ಅರೇಬಿಯಾದ ನಿಲುವಿನಲ್ಲಿ ಬದಲಾವಣೆ ಆಗಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು