ನವದೆಹಲಿ: ಜಿಎಸ್ಟಿ ಪರಿಷ್ಕರಣೆಯನ್ನು ಲಾಭವನ್ನು ಗ್ರಾಹರಿಗೆ ವರ್ಗಾಯಿಸುವುದಾಗಿ ಸುಜುಕಿ ಇಂಡಿಯಾ ಹೇಳಿದ್ದು, ತನ್ನೆಲ್ಲಾ ಮಾದರಿಯ ವಾಹನಗಳ ದರವನ್ನು ₹ 18,024ರ ವರೆಗೆ ಕಡಿತಗೊಳಿಸುವುದಾಗಿ ಶುಕ್ರವಾರ ತಿಳಿಸಿದೆ.
.ಜಿಎಸ್ಟಿ ಪರಿಷ್ಕರಣೆ: ಸೆ.22ರಿಂದ ನಂದಿನಿ ಮೊಸರು, ತುಪ್ಪದ ದರ ಇಳಿಕೆ.
ಸೆಪ್ಟೆಂಬರ್ 22ರಿಂದ ಕಡಿತ ಅನ್ವಯವಾಗಲಿದ್ದು, ಮಾಡೆಲ್ಗಳನ್ವಯ ಗ್ರಾಹಕರಿಗೆ ಗರಿಷ್ಠ ₹ 18,024 ಉಳಿತಾಯವಾಗಲಿದೆ ಎಂದು ಸುಜುಕಿ ಮೊಟರ್ಸೈಕಲ್ ಇಂಡಿಯಾ ಪ್ರೈವೆಟ್ ಲಿಮಿಟೆಟ್ ಪ್ರಕಟಣೆಯಲ್ಲಿ ತಿಳಿಸಿದೆ.

ದ್ವಿಚಕ್ರ ವಾಹನಗಳ ಜೊತೆಗೆ, ಬಿಡಿಭಾಗಗಳು ಮತ್ತು ಪರಿಕರಗಳ ಮೇಲಿನ ಜಿಎಸ್ಟಿ ಕಡಿತದಿಂದ ನಿರ್ವಹಣಾ ವೆಚ್ಚ ಕಡಿಮೆಯಾಗಲಿದೆ ಎಂದು ಕಂಪನಿ ಹೇಳಿದೆ.
.ಜಿಎಸ್ಟಿ ಪರಿಷ್ಕರಣೆಯಿಂದಾಗಿ ಎಫ್ಎಂಸಿಜಿ ಉತ್ಪನ್ನಗಳ ಬೆಲೆ ಇಳಿಕೆ.
"ಜನಸಾಮಾನ್ಯರಿಗೆ ಸಂಚಾರವನ್ನು ಹೆಚ್ಚು ಕೈಗೆಟುಕುವಂತೆ ಮಾಡಲು ಪ್ರಗತಿಪರ ಹೆಜ್ಜೆಯಾಗಿರುವ ಭಾರತ ಸರ್ಕಾರದ ಜಿಎಸ್ಟಿ 2.0 ಸುಧಾರಣೆಗಳನ್ನು ನಾವು ಸ್ವಾಗತಿಸುತ್ತೇವೆ’ ಎಂದು ಮಾರಾಟ ಮತ್ತು ಮಾರುಕಟ್ಟೆ ಉಪಾಧ್ಯಕ್ಷ ದೀಪಕ್ ಮುಟ್ರೆಜಾ ಹೇಳಿದ್ದಾರೆ.

ಹಬ್ಬದ ಋತುವಿಗೆ ಸ್ವಲ್ಪ ಮುಂಚಿತವಾಗಿ ಜಿಎಸ್ಟಿ ಕಡಿತ ಬಂದಿದೆ. ಇದರಿಂದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಬೇಡಿಕೆಗೆ ಇನ್ನಷ್ಟು ಉತ್ತೇಜನ ನೀಡಲಿದೆ ಎಂದು ಹೇಳಿದ್ದಾರೆ.
.ಜಿಎಸ್ಟಿ ಪಾವತಿಸದ 850 ಚೀಲ ಪಾನ್ ಮಸಾಲ ವಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.