ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಿಗ್ಗಿ ನಷ್ಟ ₹3,628.9 ಕೋಟಿಗೆ ಏರಿಕೆ

Last Updated 2 ಜನವರಿ 2023, 15:48 IST
ಅಕ್ಷರ ಗಾತ್ರ

ಹೊಸದಿಲ್ಲಿ: ಆಹಾರ ಮತ್ತು ದಿನಸಿ ವಿತರಣಾ ಆ್ಯಪ್‌ ಸ್ವಿಗ್ಗಿ, 2022ನೇ ಆರ್ಥಿಕ ವರ್ಷದಲ್ಲಿ ₹3,628.9 ಕೋಟಿ ನಷ್ಟ ಅನುಭವಿಸಿರುವುದಾಗಿ ಹೇಳಿದೆ.

ಹಿಂದಿನ ಹಣಕಾಸು ವರ್ಷದಲ್ಲಿ ಕಂಪನಿಯು 1,616.9 ಕೋಟಿ ರೂ ನಿವ್ವಳ ನಷ್ಟ ದಾಖಲಿಸಿತ್ತು.

2022 ನೇ ಹಣಕಾಸು ವರ್ಷದಲ್ಲಿ ಕಂಪನಿಯು ₹5,704.9 ಕೋಟಿ ವಹಿವಾಟು ದಾಖಲಿಸಿದ್ದು, ಹಿಂದಿನ ವರ್ಷ ಈ ಅವಧಿಯಲ್ಲಿ ₹ 2,546.9 ಕೋಟಿ ಆಗಿತ್ತು. ಆದಾಯದಲ್ಲಿ ಏರಿಕೆ ಕಂಡಿದ್ದರೂ ಕೂಡ ನಷ್ಟ ಹೆಚ್ಚಾಗಿದೆ.

ಕಂಪನಿಯ ಹಣಕಾಸು ವರದಿ ಪ್ರಕಾರ ಒಟ್ಟು ಆದಾಯವು ₹2,675.9 ಕೋಟಿಯಿಂದ ಈ ಹಣಕಾಸು ವರ್ಷದಲ್ಲಿ ₹6,119.8 ಕೋಟಿಗೆ ಹೆಚ್ಚಾಗಿದೆ.

‘ನಾವು ಕೋವಿಡ್‌ ನಂತರದ ಚೇತರಿಕೆ ಬಳಿಕ ವಹಿವಾಟು ಬೆಳವಣಿಗೆಯತ್ತ ಗಮನಹರಿಸಿದ್ದೇವೆ, ವಿಶೇಷವಾಗಿ ನಮ್ಮ ತ್ವರಿತ ವಾಣಿಜ್ಯ ಸೇವೆ ವಿಸ್ತರಣೆಯತ್ತ ದೃಷ್ಟಿ ಹಾಯಿಸಿದ್ದೇವೆ. ಆದಾಯವು 2 ಪಟ್ಟು ಹೆಚ್ಚಾಗಿದೆ’ ಎಂದು ಕಂಪನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT