ಬೆಂಗಳೂರು: ಟಾಟಾ ಎಐಎ ವಿಮಾ ಕಂಪನಿಯು ಮಹಿಳಾ ಕೇಂದ್ರಿತ ಅವಧಿ ವಿಮಾ ಯೋಜನೆ ‘ಶುಭ ಶಕ್ತಿ’ಯನ್ನು ಬಿಡುಗಡೆ ಮಾಡಿದೆ.

‘ಸಾಮಾನ್ಯವಾಗಿ ಪುರುಷ ಕೇಂದ್ರಿತ ದೃಷ್ಟಿಕೋನದಿಂದಲೇ ಅವಧಿ ವಿಮಾ ಯೋಜನೆಗಳನ್ನು ರೂಪಿಸಲಾಗುತ್ತದೆ. ಅದರಲ್ಲೂ ಮುಖ್ಯವಾಗಿ, ದುಡಿಯುವ ಪುರುಷರ ಮೇಲೆ ಗಮನ ಹರಿಸಿ ಈ ಯೋಜನೆಗಳನ್ನು ಸಿದ್ಧಗೊಳಿಸಲಾಗುತ್ತದೆ. ಮಹಿಳೆಯರ ಅಗತ್ಯಗಳನ್ನು ನಿರ್ಲಕ್ಷಿಸಲಾಗುತ್ತದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಶುಭ ಶಕ್ತಿ ವಿಮಾ ಯೋಜನೆಯು ಪಾಲಿಸಿಬಜಾರ್ ಆನ್ಲೈನ್ ವಿಮಾ ವೇದಿಕೆಯ ಮೂಲಕ ಲಭ್ಯವಿದೆ.

ಶುಭ ಶಕ್ತಿ ಅವಧಿ ವಿಮಾ ಯೋಜನೆಯು ಇಂದಿನ ಕಾಲದ ಮಹಿಳೆಯರಿಗೆ ಸರಿಹೊಂದುವಂತೆ ಇದೆ ಎಂದು ಟಾಟಾ ಎಐಎ ಕಂಪನಿಯ ಅಧಿಕಾರಿ ಗಾಯತ್ರಿ ನಾಥನ್ ಹೇಳಿದ್ದಾರೆ.

ಟಾಟಾ ಎಐಎ ಕಂಪನಿ ನಡೆಸಿರುವ ಸಮೀಕ್ಷೆಯೊಂದರ ಪ್ರಕಾರ ವಿವಾಹಿತ ಮಹಿಳೆಯರ ಪೈಕಿ ಶೇಕಡ 89ರಷ್ಟು ಮಂದಿ ಆರ್ಥಿಕ ಯೋಜನೆಗಳಿಗಾಗಿ ತಮ್ಮ ಗಂಡಂದಿರ ಮೇಲೆ ಅವಲಂಬಿತರಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಈ ಅವಧಿ ವಿಮೆಯ ಮಾರಾಟಕ್ಕಾಗಿ ಟಾಟಾ ಎಐಎ ಲೈಫ್ ಇನ್ಶೂರೆನ್ಸ್ ಕಂಪನಿ ಮತ್ತು ಪಾಲಿಸಿಬಜಾರ್ ನಡುವೆ ಒಪ್ಪಂದ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.